Girl in a jacket

ಸೆ.13 ರಿಂದ ಬಡ ರೋಗಿಗಳಿಗೆ ಉಚಿತ ಅನ್ನದಾಸೋಹ

 


ಸುದ್ದಿಲೈವ್/ಶಿವಮೊಗ್ಗ


ಅಮೃತ ಅನ್ನದಾಸೋಹ ಪ್ರತಿಷ್ಠಾನವತಿಯಿಂದ ವಾರದಲ್ಲಿ ಎರಡು ದಿನ ಮೆಗ್ಗಾನ್ ಬಡ ರೋಗಿಗಳಿಗೆ ಉಚಿತ ಅನ್ನದಾಸೋಹ ನಡೆಸಲು ತೀರ್ಮಾನಿಸಿಲಾಗಿದೆ. 


ಸುದ್ದಿಗೋಷ್ಠಿಯಲ್ಲಿ ನಡೆಸಿದ ಪ್ರತಿಷ್ಠಾನದ ಸತೀಶ್ ಕುಮಾರ್ ಶೆಟ್ಟಿ,  ಮೆಗ್ಗಾನ್ ನಲ್ಲಿ ದಿನಕ್ಕೆ 1½-2 ಸಾವಿರ ಜನ ಅಡ್ಮಿಷನ್ ಆಗುತ್ತಾರೆ. ದಿನಕ್ಕೆ 10 ಸಾವಿರ ಜನ ಆಸ್ಪತ್ರೆಗೆ ಭೇಟಿ ಮಾಡಲಿದ್ದಾರೆ. ಹಾಗಾಗಿ ವಾರಕ್ಕೆ ಎರಡು ದಿನ ಬಡ ರೋಗಿಗಳಿಗೆ ಟೋಕನ್ ಮೂಲಕ ಅನ್ನದಾಸೋಹ ನೀಡಲಾಗುತ್ತದೆ. 


ಬುಧವಾರ ಮತ್ತು ಶುಕ್ರವಾರ 12-30 ರಿಂದ ದಾಸೋಹ ನಡೆಯಲಿದೆ.  ಸೆ.13 ಉಚಿತ ಅನ್ನದಾಸೋಹ ಅರಂಭಿಸಲಾಗುತ್ತಿದೆ. ಎಂಎಲ್‌ಸಿ ಡಾ. ಧನಂಜಯ ಸರ್ಜಿ ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ. ಮೆಗ್ಗಾನ್ ಅಧೀಕ್ಷಕ ಡಾ.ತಿಮ್ಮಪ್ಪ ಹಾಗೂ ನಾಗರೀಕ ಹಿತರಕ್ಷಣ ವೇದಿಕೆ ಕೆ.ವಿ ವಸಂತ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು. 


ಚೆನ್ಬೈ ಐಟಿ ಸಂಸ್ಥೆಯವರು ದಾನಿಗಳಾಗಿದ್ದಾರೆ. ಈ ದಾಸೋಹಕ್ಕೆ,400 ಜನ ದಾನಿಗಳು ಮುಂದೆ ಬಙದಿದ್ದಾರೆ. ಇದನ್ನ ನಿರಂತರವಾಗಿಸಲು ಯತ್ನಿಸಲಿದ್ದೇವೆ. ಒಂದು ದಿನಕ್ಕೆ 200-250 ಜನರಿಗೆ ನೀಡಲಾಗುತ್ತದೆ.  ಇದು ಐದು ಸಾವಿರ ಖರ್ಚಾಗಲಿದೆ. ಬಡ ರೋಗಿಗಳಿಗೆ ಟೋಕನ್ ವ್ಯವಸ್ಥೆ ಮೂಲಕ ನೈಜ ಬಡವರಿಗೆ ಪ್ರಯತ್ನ ನಡೆಸಲಾಗುತ್ತದೆ ಎಂದರು. 


ನಿಮಾನ್ಸ್ ಬಳಿ ನಾಗೇಂದ್ರ ಎಂಬುವರು ಆರಂಭದಲ್ಲಿ ಐದು ಕೆಜಿ ಅನ್ನವನ್ನ ನೀಡಲು ಆರಂಭಿಸಿದರು.‌ ಹಸಿದವರಿಗೆ ಅನ್ನದಾಸೋಹ ಮಾಡುತ್ತಿದ್ದಾರೆ. ಅದೇ ರೀತಿ ಈ ಕಾರ್ಯಕ್ರಮ ನಡೆಸಲು ಚಿಂತಿಸಲಾಗುತ್ತಿದೆ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು