Girl in a jacket

ಸೆ.15 ರಂದು ಪ್ರಜಾಪ್ರಭುತ್ತ ದಿನಾಚರಣೆ ಅಂಗವಾಗಿ ಮಾನವ ಸರಪಳಿ



ಸುದ್ದಿಲೈವ್/ಶಿವಮೊಗ್ಗ


ವಿಶ್ವ ಪ್ರಜಾಪ್ರಭುತ್ವದ ದಿನವನ್ನಾಗಿ ಸೆ.15 ರಂದು ಅಚರಿಸಲಾಗುತ್ತಿದೆ, ಅಂದು ಭದ್ರಾವತಿಯಿಂದ 60 ಕಿಮಿ ದೂರ ಮಾನವ ಸರಳಿ ನಿರ್ಮಿಸಲಾಗುತ್ತಿದೆ ಎಂದು ಸಿಇಒ ಹೇಮಂತ್ ಮತ್ತು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ತಿಳಿಸಿದರು. 


ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು,  ಭದ್ರಾವತಿಯ ಕಾರೇಹಳ್ಳಿ ಗ್ರಾಮದಿಂದ ಪ್ರಾರಂಭಿಸಿ, ಶಿವಮೊಗ್ಗದ ಮಡಿಜೆ ಚೀಲೂರು ವರೆಗೆ 60 ಕಿಮಿ ದೂರ ಮಾನವ ಸರಳಿ ರಚಿಸಲಾಗುತ್ತಿದೆ. ಸೆ.15 ರಂದು ಸಚಿವ ಮಧು ಬಂಗಾರಪ್ಪ ಭಾಗಿಯಾಗಲಿದ್ದಾರೆ.  80 ಸಾವಿರ ಜನ ಭಾಗಿಯಾಗಲಿದ್ದಾರೆ. ಸಚಿವರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಭಾಷಣ ಮಾಡಲಿದ್ದಾರೆ.


20 ಕ್ಕೂ ಹೆಚ್ಚು ಅಂದರೆ ಗ್ರಾಪಂ ವ್ಯಾಪ್ತಿಯಲ್ಲಿ ಗಿಡ ನೆಡಲಾಗುವುದು. ಕಾರೇಹಳ್ಳಿ, ಕೆಂಪೇಗೌಡ ನಗರ, ಬಾರಂದೂರು, ಮೊಸರಹಳ್ಳಿ, ಸುಣ್ಣದಹಳ್ಳಿ, ಮಾರುತಿ ನಗರ, ಭದ್ರಾವತಿ ಬಸ್ ನಿಲ್ದಾಣ, ಹುತ್ತಾಕಾಲೋನಿ, ಐಟಿಐ ಸ್ಟಾಫ್, ಕಡದಕಟ್ಟೆ, 


ಬಿಳಕಿ ಕ್ರಾಸ್, ಜೇಡಿಕಟ್ಟೆ, ಮಾಚೇನಹಳ್ಳಿ, ಡೈರಿ, ಮಲೆನಾಡು ಕ್ಯಾನ್ಸರ್ ಆಸ್ಪತ್ರೆ, ನಿಧಿಗೆ, ಮಲವಗೊಪ್ಪ, ಹರಿಗೆ, ಎಂಆರ್‌ಎಸ್ ಸರ್ಕಲ್, ತುಂಗಾಸೇತುವೆ, ಹೊಳೆಬಸ್ ಸ್ಟಾಪ್, ಕರ್ನಾಟಕ ಸಂಘ, 


ವೀರಮದಕರಿ ವೃತ್ತ, ಎಎ ವೃತ್ತ, ನೆಹರೂ ರಸ್ತೆ, ಗೋಪಿವೃತ್ತ, ಮಹಾವೀರ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಕೆಇಬಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಗೋಂದಿ ಚಟ್ನಹಳ್ಳಿ, ಮೇಲಿನ ಹನಸವಾಡಿ, ಬೇಡರ ಹೊಸಳ್ಳಿ, ಬುಳ್ಳಾಪುರ, ಸೂಗೂರು, ಹೊಳಲೂರು, ಮಡಿಕೆಚೀಲೂರು ತಲುಪಲಿದೆ. ಸುದ್ದಿಗೋಷ್ಠಿಯಲ್ಲಿ ಪ್ರಜಾಪ್ರಭುತ್ವದ ಲೋಗೋ ಬಿಡುಗಡೆ ಮಾಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು