Girl in a jacket

ಆಚಾರ್ಯತ್ರಯ ಭವನದಲ್ಲಿ ಸೆ.18 ರಂದು ಪೂರ್ಣಿಮೆಯ ಪ್ರಯುಕ್ತ ವಿವಿಧ ಪೂಜಾ ಕಾರ್ಯಕ್ರಮ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ ಗ್ರಾಮದೇವತೆ ಕೋಟೆ ಶ್ರೀಚಂಡಿಕಾದುರ್ಗಾಪರಮೇಶ್ವರೀ ದೇವಸ್ಥಾನದ ಆವರಣದಲ್ಲಿರುವ “ಆಚಾರ್ಯತ್ರಯ ಭವನದಲ್ಲಿ” ಸೆ.18 ರಂದು ಬುಧವಾರ ಬೆಳಿಗ್ಗೆ 9:30 - 11:00 ವರೆಗೆ ಜನರ ಆರೋಗ್ಯ, ಸುಖ, ಶಾಂತಿ, ನೆಮ್ಮದಿಗಾಗಿ ಪೂರ್ಣಿಮೆಯ ಪ್ರಯುಕ್ತ ಆಚಾರ್ಯತ್ರಯರ ಗುರುಪಾದುಕಾ ಪೂಜೆ, ವಿಷ್ಣುಸಹಸ್ರನಾಮ ಪಾರಾಯಣ, ಗುರುಭಜನೆಗಳನ್ನು ನೇರವೇರಿಸಲಾಗಿದೆ.  ಆಸ್ತಿಕ ಭಕ್ತರು ಸ್ವತಃ ಪೂಜೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ. 


ಹಾಗೂ ಸಂಜೆ 06:30 – 9:00 ವರೆಗೆ ಲೋಕಕಲ್ಯಾಣಾರ್ಥವಾಗಿ ಶ್ರೀಲಕ್ಷ್ಮೀಸತ್ಯನಾರಾಯಣ ಪೂಜೆಯನ್ನು ನಡೆಸಲಾಗುವುದು, ಭಕ್ತರು ಸಕುಟುಂಬ ಸಮೇತರಾಗಿ ದೇವಾಲಯಕ್ಕೆ ಆಗಮಿಸಿ ದೇವರ ಅನುಗ್ರಹವನ್ನು ಪಡೆಯಲು ಕೋರಲಾಗಿದೆ.


ಭಾಗವಹಿಸಲು ಇಚ್ಛಿಸುವವರು ಮುಂಚಿತವಾಗಿ ದೇವಸ್ಥಾನಕ್ಕೆ ಬಂದು ಹೆಸರು ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಗಮಿಕ ವಿದ್ವಾನ್ ಶಂಕರಾನಂದ ಜೋಯ್ಸ್ Ph-9448525103, 8050320343 ಸಂಪರ್ಕಿಸಬಹುದಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು