Girl in a jacket

37 ಗೋವುಗಳ ರಕ್ಷಣೆ





ಸುದ್ದಿಲೈವ್/ಶಿವಮೊಗ್ಗ

ಶಿಕಾರಿಪುರ ತಾಲೂಕು ಶಿರಾಳಕೊಪ್ಪದಿಂದ ಮಂಗಳೂರಿನ ಬಿ.ಸಿ ರಸ್ತೆಗೆ  ಗೋವುಗಳನ್ನ ಸಾಗಿಸಲು ಯತ್ನಿಸುತ್ತಿದ್ದ  407 ಐಷರ್ ವಾಹನವನ್ನ ಬಜರಂಗದಳ ಯುವಕರು ತಡೆದು ಜಯನಗರ ಪೊಲೀಸ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. 


ವಾಹನವನ್ನ ಉಷ ನರ್ಸಿಂಗ್ ಹೋಮ್ ವೃತ್ತದ ಬಳಿ ಹಿಂದೂ ಸಂಘಟನೆಗಳು ತಡೆದಿದ್ದಾರೆ. ನಂತರ 112 ಪೊಲೀಸರಿಗೆ ಕರೆಯಲಾಗಿದೆ. 407 ಐಷರ್ ವಾಹನದಲ್ಲಿ ಟಾರ್ಪಲ್ ಮುಚ್ಚಿ ಸಾಗಿಸಲಾಗುತ್ತಿತ್ತು. ಟಾರ್ಪಲ್ ಸಮೇತ ಜಯನಗರ ಪೊಲೀಸ್ ಠಾಣೆಯಲ್ಲಿ ವಾಹನ ತಂದು ನಿಲ್ಲಿಸಲಾಗಿದೆ.


ಟಾರ್ಪಲ್ ಬಿಚ್ಚಿ ನೋಡಿದಾಗ ಹೋರಿ ಕರ ಎತ್ತುಗಳನ್ನ ಹಿಂಸಾತ್ಮಕವಾಗಿ ಕಟ್ಟಿಹಾಕಿ ಸಾಗಿಸುವ ಪ್ರಯತ್ನ ನಡೆದಿದೆ. ಠಾಣೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. 


ಜಯನಗರ ಠಾಣೆ ಎದುರು ಹೈಡ್ರಾಮ 


ಜಯನಗರ ಪೊಲೀಸ್ ಠಾಣೆಯ ಎದುರು ವ್ಯಕ್ತಿಯೊಬ್ಬ ಓಡಲು ಯತ್ನಿಸಿ ಹೈಡ್ರಾಮ ಮಾಡಿದ್ದಾನೆ. ವಾಹನದ ಒಳಗಡೆ ಕುಳಿತಿದ್ದ ವ್ಯಕ್ತಿಯು ತಪ್ಪಿಸಿಕೊಳ್ಳಲು ಯತ್ನಿಸಿದ್ದು ನಂತರ ಪೊಲೀಸರು ಆತನನ್ನ ಠಾಣೆಯ ಒಳಗೆ ಕೂರಿಸಿಕೊಂಡಿದ್ದಾರೆ. ಈತನೆ ಹಸುಗಳನ್ನ ಸಾಗಿಸುವ ಮಿಡ್ಲುಮ್ಯಾನ್ ಎಂದು ಹಿಂದೂ ಸಂಘಟನೆ ಆರೋಪಿಸಿದೆ. 37 ಹಸುಗಳನ್ನ ಕ್ಯಾಂಟರ್ ನಲ್ಲಿ ಸಾಗಿಸುವ ಯತ್ನ ನಡೆದಿದ್ದು ಅವುಗಳನ್ನ ಮಹಾವೀರ ಗೋಶಾಲೆಗೆ ಬಿಡಲಾಗಿದೆ‌.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು