ಸುದ್ದಿಲೈವ್/ಶಿವಮೊಗ್ಗ
ಮೂತ್ರ ವಿಸರ್ಜನೆಗೆ ತೆರಳಿದ ವೇಳೆ ಕತ್ತಲಲ್ಲಿ ಏನು ಮಾಡುತ್ತಿದ್ದೀರ ಎಂದು ಕೇಳಿದ್ದಕ್ಕೆ ಇಬ್ಬರ ಮೇಲೆ ಹಲ್ಲೆ ನಡೆದಿದೆ. ಈ ಜಗದಲ್ಲಿ ಎರಡು ಎಫ್ಐಆರ್ ದಾಖಲಾಗಿದೆ.
ಶೇಷಾದ್ರಿಪುರಂ ರೈಲ್ವೆ ಓವರ್ ಬ್ರಿಡ್ಜ್ ಕೆಳಗೆ ನಾಲ್ಕೈದು ದಿನಗಳ ಹಿಂದೆ ಸ್ನೇಹಿತರನ್ನ ಭೇಟಿಯಾಗಲು ಹೋದ ವೇಳೆ ಇಬ್ಬರು ಯುವಕರನ್ನ ಅಡ್ಡಗಟ್ಟಿ ನಾನು ಶೇಷಾದ್ರಿಪುರಂ ಡಾನ್... ನೇನು ಶಿವಮೊಗ್ಗದಲ್ಲಿ ಎಲ್ಲಿಯೇ ಇದ್ದರು ಹುಡುಕಿ ಹೊಡೆಯುತ್ತೇನೆ ಎಂದು ಹಲ್ಲೆ ನಡೆದ ಘಟನೆ ಬೆನ್ನಲ್ಲೇ ಅದೇ ಜಾಗದಲ್ಲಿ ಮತ್ತೊಂದು ಎಫ್ಐಆರ್ ಆಗಿದೆ.
ಎಣ್ಣೆ ಹೊಡೆದ ಅವೇಜ್ ಅಲಿ ಮತ್ತು ಅಭಿಷೇಕ್ ಎಂಬ ಯುವಕರು ಹಾಗೆ ಮುಂದೆ ಮೂತ್ರ ವಿಸರ್ಜನೆ ಮಾಡಲು ಹೋದ ವೇಳೆ ಕತ್ತಲಲ್ಲಿ ಕುಳತು ಕೊಂಡು ಇಲ್ಲಿ ಏನು ಮಾಡುತ್ತಿದ್ದೀರಿ ಎಂದು ಕೇಳದ್ದಕ್ಕೆ ಪ್ರಶ್ನಿಸಿದವರ ಮೇಲೆ ಕಲ್ಲಿನಿಂದ ಹಲ್ಲೆನಡೆಸಲಾಗಿದೆ.
ಇಬ್ಬರು ಯುವಕರ ಮೇಲೆ ನಮ್ಮನ್ನೇ ಏನು ಮಾಡ್ತೀದ್ದೀರಾ ಎಂದು ಕೇಳ್ತ್ಯಾ ಎಂದು ಹೊಡೆದು ಅಪರಿಚಿತರು ಪರಾರಿಯಾಗಿದ್ದಾರೆ. ಇಲ್ಲಿಗೆ ಈ ಜಾಗ ಸಾರ್ವಜನಿಕರಿಗೆ ಅಸುರಕ್ಷಿತ ಜಾಗವಾಗುತ್ತಿರುವ ಬೆಳಣಿಗೆ ಕಂಡು ಬಂದಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.