ಸುದ್ದಿಲೈವ್/ಶಿಕಾರಿಪುರ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾ ಸಭೆ ಸಂಘದ ಅಧ್ಯಕ್ಷ ಸಂಗಮೇಶ ಬಿ ಇವರ ಅಧ್ಯಕ್ಷತೆಯಲ್ಲಿ ಪಟ್ಟಣದ ಸೇವಾ ವಿಕಾಸ ಶಾಲೆಯಲ್ಲಿ ನಡೆಯಿತು.
ಸಂಘದ 2023-24 ನೇ ಸಾಲಿನ ವಾರ್ಷಿಕ ಅಡಿಟ್ ವರದಿಯನ್ನು ಸದಸ್ಯರ ಗಮನಕ್ಕೆ ತರಲಾಯಿತು. ಜುಮ್ಲಾ 6.57 ಲಕ್ಷ ರೊಗಳ ಲಾಭ ಸಂಘಕ್ಕೆ ಆಗಿರುವುದಾಗಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಓಂಕಾರಪ್ಪ ಎಂ ತಿಳಿಸಿದರು.
ಈ ಸಂಧರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ನೂತನ ನಿರ್ದೇಶಕ ಎಸ್ ಪಿ ಚಂದ್ರಶೇಖರಗೌಡ ನಮ್ಮ ತಾಲ್ಲೂಕಿನಲ್ಲಿರುವ 38 ಸಹಕಾರ ಸಂಘಗಳಿದ್ದು ಬಹುತೇಕ ಎಲ್ಲಾ ಸಂಘಗಳು ಕೊಡ ನಷ್ಟಗಳನ್ನು ಅನುಭಸುತ್ತಿದ್ದು ಹಂತ ಹಂತವಾಗಿ ಲಾಭದ ಕಡೆ ಮುಖ ಮಾಡುತ್ತಿವೆ. ಸದಸ್ಯರು ಸಹಕಾರ ಸಂಘಗಳ ಮೇಲೆ ಸಂಪೂರ್ಣ ವಿಶ್ವಾಸ ಇಟ್ಟಲ್ಲಿ ಮಾತ್ರ ಈ ತರದ ಪತ್ತಿನ ಸಹಕಾರ ಸಂಘಗಳು ಗಟ್ಟಿ ಯಾಗುತ್ತವೆ. ಬರುವಂತಹ ದಿನಗಳಲ್ಲಿ ಇಡೀ ಭಾರತ ದೇಶದಾದ್ಯಂತ ಒಂದೇ ಸಹಕಾರ ಸಾಫ್ಟ್ವೇವೆರ್ ತಯಾರಾಗಲಿದ್ದು ಇದರಿಂದಾಗಿ ಸಹಕಾರ ಸಂಘಗಳಿಗೆ ಉತ್ತಮ ದಿನಗಳು ಬರಲಿವೆ ಎಂದರು.
ಪಟ್ಟಣದ ಡಿ ಸಿ ಸಿ ಬ್ಯಾಂಕ್ ಸಿಬ್ಬಂದಿಗಳ ವರ್ತನೆಯ ಬಗ್ಗೆ ದೋರಿದ ಕೆಲ ಸದಸ್ಯರು ಬ್ಯಾಂಕ್ ನಲ್ಲಿ ಕನಿಷ್ಠ ಮೊತ್ತ 2000ರೋಗಳನ್ನು ಠೇವಣಿಯಾಗಿ ಎಸ್ ಬಿ ಖಾತೆಗಳಲ್ಲಿ ಇಡಲೇ ಬೇಕು ಮತ್ತು ಒತ್ತಾಯ ಪೂರ್ವಕವಾಗಿ ಬ್ಯಾಂಕ್ ವತಿಯಿಂದ ಖಾತೆದಾರರಿಗೆ ಎ ಟಿ ಎಂ ಕಾರ್ಡ್ ಗಳನ್ನು ನೀಡುತ್ತಿರುವ ಬಗ್ಗೆ ನಿರ್ದೇಶಕರ ಮುಂದೆ ಆಕ್ರೋಶ ವ್ಯಕ್ತ ಪಡಿಸಿದರು.
ಸಂಘದ ಅಧ್ಯಕ್ಷ ಸಂಗಮೇಶ ಬಿ, ಸದಸ್ಯ ರಾಘವೇಂದ್ರ ಎಂ ಭಟ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ದಿವಂಗತ ಅನಿಲ್ ಕುಮಾರ್ ಸುರುಹೊನ್ನೆ ಮತ್ತು ಸದಸ್ಯೆ ದಿವಂಗತ ಗೌರಮ್ಮ ರವರನ್ನು ನೆನಪಿಸಿಕೊಳ್ಳುತ್ತ ಮೃತರಿಗೆ ಸಂತಾಪ ಸೋಚಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷ ಖಾಸಿಂ ಸಾಬ್, ಸದಸ್ಯರಾದ ಮಲ್ಲಪ್ಪ, ಹಾಲೇಶಪ್ಪ ಸುರುಹೊನ್ನೆ, ಜಯಪ್ರಕಾಶ್ ಅವ್ವಾಜಿ, ಉಜ್ಜಪ್ಪ ಬಂಗೇರ, ಚಂದ್ರಪ್ಪ ವಾಲ್ಮೀಕಿ, ಹೋಳಿಯಪ್ಪ, ಯಶೋದಮ್ಮ, ಹಾಗೂ ನಟರಾಜ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸರ್ವಸದಸ್ಯರು ಇದ್ದರು.