ಮಂಗಳವಾರ, ಸೆಪ್ಟೆಂಬರ್ 3, 2024

ಆಯನೂರು ಮಂಜುನಾಥ್ ಬಿಎಸ್ ವೈ ಕ್ಷಮೆ ಕೇಳಬೇಕು--ಹಾಲಪ್ಪ ಮತ್ತು ರುದ್ರೇಗೌಡ ಆಗ್ರಹ



ಸುದ್ದಿಲೈವ್/ಶಿವಮೊಗ್ಗ


ಯಡಿಯೂರಪ್ಪನವರ ಮತ್ತು ಅವರ ಕುಟುಂಬದವರ ವಿರುದ್ಧ ಮಾತನಾಡಿರುವ ಆಯನೂರು ಮಂಜುನಾಥ್ ಅವರ ಆರೋಪಕ್ಕೆ ಇಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳ ಹಾಲಪ್ಪ ಹಾಗೂ ಮಾಜಿ ಎಂಎಲ್ ಸಿ ರುದ್ರೇಗೌಡ ಉತ್ತರ ನೀಡಿದ್ದಾರೆ. ಆಯನೂರು ಮಂಜುನಾಥ್ ಬಿಎಸ್ ವೈ ಕ್ಷಮೆ ಕೇಳಬೇಕು ಎಂದು ದೂರಿದರು.‌


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ‌ ಹರತಾಳು ಹಾಲಪ್ಪ, ಮಾಜಿ ಸಿಎಂ ಯಡಿಯೂರಪ್ಪನವರ ಹೆಸರು ಹೇಳಿ ಮೂಡಾ ಮತ್ತು ವಾಲ್ಮೀಕಿ ಹಾಗೂ ಇತರರ ಹಗರಣವನ್ನ ಬೇರೆಡೆ ತಿರುಚುವ ಪ್ರಯತ್ನ ನಡೆಯುತ್ತಿದೆ. ಮೊದಲು ಯಡಿಯೂರಪ್ಪನವರ ವಿರುದ್ಧ ಮಾತನಾಡುವುದನ್ನ ನಿಲ್ಲಿಸಬೇಕು ಎಂದು ಆಗ್ರಹಿಸಿದರು. 


ಯಡಿಯೂರಪ್ಪ ಜನತಾಲಯ, ದೇವಾಲಯಗಳು ಮತ್ತು ನ್ಯಾಯಾಲಯಗಳನ್ನ ಎದುರಿಸಿ ಭ್ರಷ್ಠಾಚಾರದ ಆರೋಪವನ್ನ ಎದುರಿಸಿ ಬಂದಿದ್ದಾರೆ.‌ ನಾನು ಸಹ ಬಂಗಾರಪ್ಪನವರ ಜೊತೆಗೆ ಇದ್ದೆ. ನಂತರ ಬಿಟ್ಟು ಬಂದ ಮೇಲೆ ಅವರ ವಿರುದ್ಧ ಮಾತನಾಡಿಲ್ಲ. ಆಯನೂರು ಅವರು ಬಿಎಸ್ ವೈ ಜೊತೆಗೆ ಇದ್ದಾಗ ಒಂದು ತರ, ಕಾಂಗ್ರೆಸ್ ಗೆ ಬಂದ ಮೇಲೆ ಆ ಪಕ್ಷದವರನ್ನ ಮೆಚ್ಚಿಸಲು ಮುಂದಾಗ ಬಾರದು ಎಂದುಸಲಹೆ ನೀಡಿದರು. 


ಮಾಜಿ ಎಂ ಎಲ್ ಸಿ ರುದ್ರೇಗೌಡ ಮಾತನಾಡಿ, ಬಹಳ ಎತ್ತರಕ್ಕೆ ಬೆಳೆದಿದ್ದೀರಿ. ಬಿಎಸ್ ವೈ ಮಕ್ಕಳ ಬಗ್ಗೆನೂ ಮಾತನಾಡಲಾಗುತ್ತಿದೆ. ಬಿಎಸ್ ವೈ  ಈಶ್ವರಪ್ಪನವರು ಟೀಕಿಸಿದಾಗ ಮಾತನಾಡದ ಬಿಜೆಪಿ ಈಗ ಏಕೆ ಎಂಬ ಮಾತಿಗೆ ಉತ್ತರಿಸಿದ ರುದ್ರೇಗೌಡರು ಈಶ್ವರಪ್ಪನವರ ಬಗ್ಗೆ ಮಾತನಾಡುವುದುಬೇಡ ಎಂದು ನಿರ್ಧರಿಸಲಾಗಿದೆ.


ಯತ್ನಾಳ್ ಸಹ ಬಿಎಸ್ ವೈ ವಿರುದ್ಧ  ಪ್ರಶ್ನಿಸಿದಾಗ ಸುಮ್ಮನಿರುವ ಬಿಜೆಪಿ ಈಗ ಯಾಕೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಬಿಜೆಪಿ ಉತ್ತರಿಸುವಲ್ಲಿ ತಡಬಡಿಸಾಯಿತು. ಕೊನೆಗೆ ಆಯನೂರು ಮಂಜುನಾಥ್ ಬಿಎಸ್ ವೈ ವಿರುದ್ಧ ಮಾತನಾಡಿದ್ದಾರೆ. ಚುನಾಯಿತ ರಾಜಕಾರಣದಿಂದ ನಿವೃತ್ತಿಯಾಗಿದ್ದಾರೆ. ಹಾಗಾಗಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.‌


ಯಡಿಯೂರಪ್ಪನವರ ವಿರುದ್ಧ ಅಲ್ಲ ಅವರ ಮಕ್ಕಳ ವಿರುದ್ಧ ಎಂದು ಹೇಳಲಾಗುತ್ತಿದೆ. ಆಯನೂರು ಅವರು ಅದನ್ನೇ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ