ಸೋಮವಾರ, ಸೆಪ್ಟೆಂಬರ್ 2, 2024

ವಾಟ್ಸಾಪ್ ಸ್ಟೇಟಸ್ ಹಾಕಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ!



ಸುದ್ದಿಲೈವ್/ತೀರ್ಥಹಳ್ಳಿ


ತೀರ್ಥಹಳ್ಳಿ  ಡಿಗ್ರಿಯಲ್ಲಿ ಚೆನ್ನಾಗಿ ಓದುತ್ತಿದ್ದ ರ‌್ಯಾಂಕ್ ತೆಗೆದುಕೊಳ್ಳುವಂತ ಯುವಕ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಕೆಲವೊಂದು ಮಾಹಿತಿ ಹಂಚಿಕೊಂಡು ತುಂಗಾ ನದಿಗೆ ಹಾರಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಇಂದು ಆತನ ಮೃತದೇಹ ಪತ್ತೆಯಾಗಿದೆ.


ಇಂದಾವರ ಗ್ರಾಮದ ಜಯದೀಪ್ ( 24 ವರ್ಷ ) ದ ಯುವಕ ತುಂಗಾ ನದಿಗೆ ಹಾರಿ ತನ್ನ ಜೀವವನ್ನು ಕಳೆದುಕೊಂಡಿದ್ದಾನೆ. ಶನಿವಾರ ಬೆಳಗ್ಗೆ ವಾಟ್ಸಪ್ ಸ್ಟೇಟಸ್ ಹಾಕಿ ತುಂಗಾ ನದಿಯ ಸಮೀಪ ಬೈಕ್ ನಿಲ್ಲಿಸಿ ಆತ ಕಣ್ಮರೆಯಾಗಿದ್ದ. ನಂತರ ತುಂಗಾ ನದಿಗೆ ಹಾರಿರಬಹುದು ಎಂಬ ಅನುಮಾನದಿಂದ ಅಗ್ನಿಶಾಮಾಕದಳದ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದರು. ಆದರೆ ಸ್ವಲ್ಪ ದೂರದಲ್ಲಿರುವ ಸ್ಮಶಾನಕಟ್ಟೆ ಸಮೀಪ ಆತನ ಶವ ಸಿಕ್ಕಿದೆ.


ಹುಡುಗಿ ಸಿಕ್ಕಿಲ್ಲ ಎಂಬುದರ ಜೊತೆಗೆ ಆತ ಆನ್ಲೈನ್ ಟ್ರೇಡಿಂಗ್ ನಲ್ಲಿ ಸಿಲುಕಿಹಾಕಿಕೊಂಡಿದ್ದ ಎಂಬುದಾಗಿ ಮಾತು ಕೇಳಿ ಬಂದಿತ್ತು. ಒಟ್ಟಿನಲ್ಲಿ ಬದುಕಿ ಬಾಳ ಬೇಕಿದ್ದ ಯುವಕ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ