ಸುದ್ದಿಲೈವ್/ಶಿವಮೊಗ್ಗ
ಆಯನೂರಿನ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವವು ರಾತ್ರಿ 12 ಗಂಟೆಗೆ ಆಯನೂರು-ಕೋಟೆಯ ತಾವರೆಕೆರೆಯಲ್ಲಿ ಉತ್ಸವ ಮೂರ್ತಿಯನ್ನ ವಿಸರ್ಜನೆ ಮಾಡುವ ಮೂಲಕ ಸಂಪನ್ನಗೊಂಡಿದೆ.
ನಿನ್ನೆ ಆಯನೂರು ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವವು ನಿನ್ನೆ ಬೆಳಿಗ್ಗೆ ಸುಮಾರು 11-30ಕ್ಕೆ ಆರಂಭಗೊಂಡಿದೆ. ಅತ್ಯಂತ ವಿಜೃಂಭಣೆಯಿಂದ ಹೊರಟ ಮೆರವಣಿಗೆಯಲ್ಲಿ ಮುಸ್ಲೀಂಬಾಂಧವರು ಸಹ ಪಾಲ್ಗೊಂಡು ವಿಶೇಷವಾಗಿತ್ತು.
ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಸೌಹಾರ್ದತೆ ಸಾಕ್ಷಿಯಾದ ಗಣೇಶನ ಮೆರವಣಿಗೆಯಲ್ಲಿ ಭಜನೆ, ಕೀಲು ಕುದುರೆ, ಡೊಳ್ಳು ಕುಣಿತ, ನೃತ್ಯ, ಪಟಾಕಿ ಸಿಡಿಸುವ ಮೂಲಕ ಗಣಪತಿ ವಿಸರ್ಜನಾ ಮೆರವಣೆಗೆ ನಡೆದಿದೆ. ಹಿಂದೂ ಹಾಗೂ ಮುಸ್ಲಿಂ ಬಾಂಧವರು ಆನಂದಿಸಿ ಶಾಂತಿಯುತವಾಗಿ ಗಣೇಶ ವಿಸರ್ಜನೆಗೆ ಸಹಕಾರಿಸಿದ್ದಾರೆ. ಕುಂಸಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ದೀಪಕ್ ರವರು ಗಣಪತಿ ಕಮಿಟಿಯವರಿಗೂ, ಹಾಗೂ ಎರಡು ಸಮುದಾಯದವರಿಗು ಧನ್ಯವಾದಗಳು ತಿಳಿಸಿದ್ದಾರೆ.