Girl in a jacket

ಕೇಸರಿಮಯಗೊಂಡ ಶಿವಮೊಗ್ಗ ನಗರ, ಬಿಗಿ ಬಂದೋಬಸ್ತ್

 


ಸುದ್ದಿಲೈವ್/ಶಿವಮೊಗ್ಗ


ನಾಳೆಯ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆಗೆ ನಗರ ಸಜ್ಜುಗೊಂಡಿದೆ. ನಾಳೆ ಬೆಳಿಗ್ಗೆ 9-30 ಕ್ಕೆ ನಗರದ ಭೀಮೇಶ್ವರ ದೇವಸ್ಥಾನದಲ್ಲಿ ಸ್ಥಾಪಿಸಲ್ಪಟ್ಟಿರುವ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಚಾಲನೆ ದೊರೆಯಲಿದೆ.



ಪ್ರತಿಷ್ಠಾಪನೆಯ ಗಣಪತಿಯನ್ನ ಸುಮಾರು 10-30 ಕ್ಕೆ ಭೀಮನ ಮಡುವಿನಲ್ಲಿ ವಿಸರ್ಜಿಸಲಾಗುವುದು. ನಂತರ ದೊಡ್ಡ ಗಣಪತಿಯ ರಾಜಬೀದಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ನಗರವನ್ನ ಹಿಂದೂ ಮಹಾಸಭ ಮಂಡಳಿಯ ಹಿಂದೂ ಕೇಸರಿ ಅಲಂಕಾರ ಸಮಿತಿ ಕೇಸರಿ ಮಯಗೊಳಿಸಿದೆ.



ಗಾಂಧಿ ಬಜಾರ್‌ನ ಮಹಾದ್ವಾರದಲ್ಲಿ ಕಾಶಿ ವಿಶ್ವನಾಥನ ದೇಗುಲದ ಅಲಂಕಾರವನ್ನು ಸ್ಥಾಪಿಸಲಾಗಿದೆ. ನಗರದ ಎಎ ವೃತ್ತದಲ್ಲಿ ಅಯೋಧ್ಯ ರಾಮಮಂದಿರದ ಅಲಂಕಾರ ಮಾಡಲಾಗಿದೆ. ರಾಮಾಂಜನೇಯರು ತಬ್ಬಿಕೊಂಡ ಕಲಾಕೃತಿ ಇಡಲಾಗಿದೆ.  ಎಂಆರ್‌ಎಸ್‌ನಲ್ಲಿ ಛತ್ರಪತಿ ಶಿವಾಜಿ ರಾಜನ ಕಲಾಕೃತಿ ಕೂರಿಸಲಾಗಿದೆ. ಜೈಲ್ ರಸ್ತೆಯಲ್ಲಿ ಗರುಡನ ಕಲಾಕೃತಿ ಕೂರಿಸಲಾಗಿದೆ‌. ಈ ಮೂರು ಸರ್ಕಲ್ ನ್ನ ಕೇಸರಿ ಮಯವಾಗಿಸಲಾಗಿದೆ.



ಬಂದೋಬಸ್ತ್


ನಾಳೆ ನಡೆಯುವ ಮೆರವಣಿಗೆಯ ಹಿನ್ನಲೆಯಲ್ಲಿ 3500 ಪೊಲೀಸರನ್ನ ನಿಯೋಜಿಸಲಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಸ್ಪಿ ಮಿಥುನ್ ಕುಮಾರ್ ಜಿ.ಕೆ. 5 ಜನ ಹೆಚ್ಚುವರಿ ಅಡಿಷನಲ್ ಎಸ್ಪಿ, 25 ಜನ ಡಿವೈಎಸ್ಪಿ, 60 ಇನ್ ಸ್ಪೆಕ್ಟರ್, 110 ಪಿಎಸ್ಐ, heps ಹೋಮ್ ಗಾರ್ಡ್, 8 ಡಿಆರ್ ಪಿ ಒಂದು ಆರ್ ಎಎಫ್ ಸೇರಿದಂತೆ ಒಟ್ಟು 3500 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನ ನಿಯೋಜಿಸಲಾಗಿದೆ.


ರೌಡಿಶೀಟರ್‌ಗಳ ಜೊತೆ  ಬ್ಯಾಡ್ ಕ್ಯಾರೆಕ್ಟರ್‌ಗಳನ್ನ ಗುರುತಿಸಿ ಬೈಂಡಿಂಗ್ ಮಾಡಲಾಗಿದೆ. 90 ಪ್ರೈವೇಟ್ ಸಿಸಿ ಟಿವಿ,  10 ಡ್ರೋನ್, 500 ಕ್ಕೂ ಹೆಚ್ಚು ಖಾಸಗಿಯವರ ಸಿಸಿ ಕ್ಯಾಮೆರಾಗಳನ್ನ ಹಾಕಿಕೊಂಡಿದ್ದೇವೆ ಮೆರವಣಿಗೆಯ ದಾರಿಯಲ್ಲಿ ಇದನ್ನ ಅಳವಡಿಸಲಾಗಿದೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು