Girl in a jacket

ಭದ್ರಾವತಿಯಲ್ಲಿ ಟಿಪ್ಪು, ಔರಂಗಜೇಬ್ ಫ್ಲೆಕ್ಸ್ ಹಾಗೂ ಖಡ್ಗ ತೆರವು



ಸುದ್ದಿಲೈವ್/ಶಿವಮೊಗ್ಗ


ಭದ್ರಾವತಿಯಲ್ಲಿ ಟಿಪ್ಪು ಸುಲ್ತಾನ್, ಔರಂಗಜೇಬ್ ಫ್ಲೆಕ್ಸ್, ಟಿಪ್ಪು ಖಡ್ಗ ಪ್ರದರ್ಶನ ಮಾಡಲಾಗಿದ್ದು, ಈ ಬಗ್ಗೆ ‌ ವಿವಾದವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ವಿವಾದಿತ ಫ್ಲೆಕ್ಸ್ ಹಾಗು ಖಡ್ಗ ತೆರವು ಮಾಡಿದ್ದಾರೆ. 


ಇಂದು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಅಳವಡಿಸಿದ್ದ ಫ್ಲೆಕ್ಸ್, ಖಡ್ಗವನ್ನ ಭದ್ರಾವತಿ ನಗರದ ಜಂಡಾ ಕಟ್ಟೆ ಸರ್ಕಲ್ ಬಳಿ ಖಾಜಿಮೋಹಲ್ಲದಲ್ಲಿ ಅಳವಡಿಸಲಾಗಿತ್ತು. ಮೆರವಣಿಗೆ ಅಂಗವಾಗಿ ಅಳವಡಿಸಿದ್ದ ಫ್ಲೆಕ್ಸ್ ಖಡ್ಗವನ್ನ ತೆರವಿಗೊಳಿಸಲಾಗಿದೆ. 


ಭದ್ರಾವತಿಯ ಸೀಗೆಬಾಗಿ , ಜಟ್ ಪಟ್ ನಗರ ಮೊದಲಾದ ಕಡೆ ಅಳವಡಿಸಿದ್ದ  ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಫ್ಲೆಕ್ಸ್‌ಗಳನ್ನೂ ಸಹ ತೆರವುಗೊಳಿಸಲಾಗಿದೆ. 


ಈ ಬಗ್ಗೆ ಸ್ಪಷ್ಟನೆ ನೀಡಿದ ಎಸ್ಪಿ ಮಿಥುನ್ ಕುಮಾರ್ ಎರಡು ಕಡೆ ಥರ್ಮಕೂಲ್ ನಿಂದ ನಿರ್ಮಿಸಿದ ಖಡ್ಗವನ್ನ ಅಳವಡಿಸಲಾಗಿತ್ತು. ತೆರವುಗೊಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು