Girl in a jacket

ತೀರ್ಥಹಳ್ಳಿಯ ರಾಷ್ಟ್ರೀಯ ಹೆದ್ದಾರಿಗಳ ಗುಂಡಿಗಂಡಾಂತರ



Suddilive/ತೀರ್ಥಹಳ್ಳಿ

ರಾಷ್ಟ್ರೀಯ ಹೆದ್ದಾರಿ 169A ಶಿವಮೊಗ್ಗ ತೀರ್ಥಹಳ್ಳಿ ಆಗುಂಬೆ ಮಂಗಳೂರು ಸಂಪರ್ಕಿಸುವ ರಸ್ತೆಗಳಲ್ಲಿ ಸಿಮೆಂಟ್ ಕಿತ್ತುಹೋಗಿ ಕಬ್ಬಿಣದ ರಾಡುಹಗಳು ಹೊರ ಕಾಣುತ್ತಿವೆ. ಗುಂಡಿಗಳು ವಾಹನ ಸವಾರರಿಗೆ ಅಪಾಯಕ್ಕೆ ಆಹ್ವಾನಿಸುತ್ತಿವೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಮೌನಕ್ಕೆ ಜಾರಿರುವುದು ಹಲವು ಪ್ರಶ್ನೆಗಳು ಹುಟ್ಟುವಂತೆ ಮಾಡಿದೆ. 

ಗುಡ್ಡೆಕೇರಿ  ಸಮೀಪ ಕೌರಿಹಕ್ಕಲು ಬಳಿ  ರಸ್ತೆಯ ಮಧ್ಯದಲ್ಲಿ ಮೂರು ನಾಲ್ಕು ಬೃಹತ್ ಗಾತ್ರದ ಹೊಂಡಗಳು ಬಿದ್ದು ಅ ಹೊಂಡದಲ್ಲಿ ರಸ್ತೆ ಕಾಂಕ್ರೀಟ್ ಗೆ ಬಳಸಿದ ಕಬ್ಬಿಣದ ರಾಡ್ ಗಳು ಎದ್ದು ನಿಂತಿದೆ.  ಈ ಗುಂಡಿ ಇತ್ತೀಚೆಗೆ  ಮೂರು ನಾಲ್ಕು ತಿಂಗಳುಗಳಿಂದ ಹೀಗೆ ಕಬ್ಬಿಣದ ರಾಡ್ ಕಾಣುವಂತೆ ಇದ್ದರು ಕೂಡ ಸಂಬಂಧಪಟ್ಟ ಅದಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಹಲವು ಅನುಮಾನಗಳನ್ನ ಹುಟ್ಟಿಹಾಕಿವೆ. 

ಈಗಾಗಲೇ  ಕಾಂಕ್ರೀಟ್ ಸ್ಲ್ಯಾಬ್ ಬಾಯಿ ತೆರೆದ  ಗುಂಡಿಗಳು  ಹಾಗೆಯೇ ಬಾಯ್ತೆರೆದುಕೊಂಡು ಕುಳಿತಿವೆ. ಗುಂಡಿಗಳ ಅಪಾಯಕ್ಕೆ ಆಹ್ವಾನ ನಿಡುತ್ತಿದ್ದರು ಅದನ್ನು ಮುಚ್ಚುವ ಇಲ್ಲವೆ ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಗೋಜಿಗೆ ಹೋಗದಿರುವುದು ಅಧಿಕಾರಿಗಳ ಜವಬ್ದಾರಿಗಳನ್ನೇ ಪ್ರಶ್ನಿಸುವಂತೆ ಮಾಡಿದೆ.  

ನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತವೆ. ಎಲ್ಲಿಯಾದರೂ ರಾತ್ರಿ ಸಮಯದಲ್ಲಿ ವಾಹನ ಓಡಾಡುವ ಸಂದರ್ಭದಲ್ಲಿ ಹೊಂಡಕ್ಕೆ ಬಿದ್ದು ಟಯರ್ ಪಂಕ್ಚರ್ ಆಗಿ ಯಾವುದಾದರೂ ಅನಾಹುತವಾದರೆ ಯಾರು ಹೊಣೆ? ಆ ಗುಂಡಿಯಿಂದ ಎದ್ದು ನಿಂತ ಕಬ್ಬಿಣದ ರಾಡ್ ರಸ್ತೆಯಲ್ಲಿ ಓಡಾಡುವ ವಾಹನ ಸವಾರರ ಪ್ರಾಣಕ್ಕೆ ಅಪಾಯವಾಗುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. 


ಇಲ್ಲಿನ ಜನಪ್ರತಿಗಳು ಹೊಸ ಯೋಜನೆಗಳಿಗೆ ಹೆಚ್ಚು ಗಮನ ನೀಡುವ ಬದಲು, ಇರುವ ಯೋಜನೆಗಳ ನಿರ್ವಹಣೆಯನ್ನ ಮಾಡಿಸುವ ಬಗ್ಗೆ ಗಮನಿಸಬೇಕಿದೆ. ಸಂಬಂಧಪಟ್ಟ ಅಧಿಕಾರಗಳ ಗಮನಕ್ಕೆ ತಂದು ಗುಂಡಿ ಮುಚ್ಚಿಸುವ ಕೆಲಸ ಮಾಡಿಸುವ ಮೂಲಕ ಅವಘಡಗಳಿಗೆ ಬ್ರೇಕ್ ಹಾಕಲಿ!? ವಾಹನ ಸಂಚಾರವನ್ನ ನಿಯಂತ್ರಿಸುವ ಹೆಸರಿನಲ್ಲಿ ದಂಡ ವಸೂಲಿ ಮಾಡುವ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಇದು ಕಾಣದೆ ಇರುವುದು ಸೋಜಿಗವೇ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು