Girl in a jacket

ಹುಡುಗಿ ವಿಚಾರಕ್ಕೆ ಬಾರದಂತೆ ಬುದ್ದಿ ಹೇಳಿದ ಪ್ರಕರಣ-ಮೂವರು ಗಂಭೀರ ಗಾಯ



ಸುದ್ದಿಲೈವ್/ಹೊಳೆಹೊನ್ನೂರು


ಯುವತಿಯ ವಿಚಾರವಾಗಿ ಬುದ್ದಿವಾದ ಹೇಳಿದರು ಕೇಳದ ಯುವಕನ ಮೇಲೆ ನಡೆದ ಹಲ್ಲೆ ವಿಚಾರವಾಗಿ ಎರಡು ಕಡೆಯವರು ಹೊಳೆಹೊನ್ನೂರು ಠಾಣೆಯಲ್ಲಿ ಆರೋಪ ಪ್ರತ್ಯಾರೋಪದ ಪ್ರಕರಣ ದಾಖಲಿಸಿದ್ದಾರೆ. ಒಂದು ಕಡೆ 14 ಮತ್ತೊಂದು ಕಡೆ 10 ಜನರ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.‌


ಕಳೆದೆರೆಡು ದಿನಗಳ ಹಿಂದೆ ಸಮೀಪದ ಮಂಡ್ಯಾ ಕ್ಯಾಂಪಿಗೆ ಕರೆಸಿ ಸಂಬಂದಿ ಹುಡುಗಿಯ ತಂಟೆಗೆ ಹೋಗದಂತೆ ಎಚ್ಚರಿಸಿದ ವಿಚಾರದಲ್ಲಿ ಶನಿವಾರ ತಡರಾತ್ರಿ ನಡೆದ ಗಲಭೆಯಲ್ಲಿ ಮೂವರಿಗೆ ಗಂಬೀರ ಗಾಯಗಳಾಗಿವೆ. ಹೊಳೆಹೊನ್ನೂರು ನಿವಾಸಿಗಳಾದ ಇಮ್ರಾನ್(25), ಶೋಹೆಬ್‍ಖಾನ್(25), ತನ್ವಿರ್(38) ಗಾಯಾಳುಗಳು. 


ಶನಿವಾರ ಸಂಜೆ ಹೊಳೆಹೊನ್ನೂರಿನ ಸರ್ಕಾರಿ ಬಾಲಕರ ಪ್ರೌಢಶಾಲೆ ಹಿಂಭಾಗದ ತಟ್ಟೆಹಳ್ಳಿ ಮೊಹಲ್ಲದ ಬಳಿ ಗಲಭೆ ನಡೆದಿದೆ. ಗಲಭೆಯಲ್ಲಿ ಯುವಕನೊಬ್ಬನಿಗೆ  ಇರಿತವಾಗಿದೆ. ಇಬ್ಬರು ಯುವಕರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಗಲಾಟೆಯಲ್ಲಿ ಗಂಭಿರವಾಗಿ ಗಾಯಗೊಂಡಿದ ತನ್ವಿರ್‍ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್.ಎಂ ಇಮ್ತಿಯಾಜ್ ಹಾಗೂ ನಜೀರ್ ಅಹ್ಮದ್ ಖಾನ್ ಇಬ್ಬರು ಆರೋಪ ಪ್ರತ್ಯಾರೋಪದ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು