ಬುಧವಾರ, ಸೆಪ್ಟೆಂಬರ್ 4, 2024

ತೀರ್ಥಹಳ್ಳಿಯ ಕಾರ್ ಬೈಲು ಗುಡ್ಡ ಕುಸಿತ



ಸುದ್ದಿಲೈವ್/ತೀರ್ಥಹಳ್ಳಿ


ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ ಬೈಲು ಗುಡ್ಡ ಮಂಗಳವಾರ ಬೆಳಿಗ್ಗೆ ಕುಸಿದಿದೆ. ಸುತ್ತಮುತ್ತಲೂ ಗದ್ದೆ, ತೋಟ, ವಾಸದ ಮನೆ ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.


ದಟ್ಟ ಕಾಡುಗಳಿಂದ ಆವರಿಸಿರುವ ಗುಡ್ಡ ಪ್ರದೇಶದಲ್ಲಿ ಜನರ ಓಡಾಟ ಇಲ್ಲ. ತೀರ್ಥಹಳ್ಳಿ- ಆಗುಂಬೆ ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಧ್ಯೆ ಇರುವ ಬಿಳಚಿಕಟ್ಟೆಯಿಂದ ಗುಡ್ಡ ಜರಿತವನ್ನು ವೀಕ್ಷಿಸಬಹುದು. ಕಲ್ಲು ಬಂಡೆಯ ಮೇಲೆ ಇದ್ದ ಮಣ್ಣು, ಗಿಡ ಮರಗಳು ಅಂದಾಜು 50 ಅಡಿ ಕುಸಿದಿವೆ. ಸುತ್ತಮುತ್ತ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಅತಿಯಾದ ಮಳೆಯಿಂದ ಗುಡ್ಡ ಕುಸಿದಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ