ಸುದ್ದಿಲೈವ್/ಶಿವಮೊಗ್ಗ
ಲಕ್ಷ್ಮೀಪುರ ರೈಲ್ವೆ ಬ್ರಿಡ್ಜ್ ನಲ್ಲಿ ವ್ಯಾನಿಟಿ ಬ್ಯಾಗ್ ಚಪ್ಪಲಿ ಮತ್ತು ಐಡಿ ಕಾರ್ಡ್ ಪತ್ತೆಯಾಗಿದ್ದು ಸುಮಾರು 17 ವರ್ಷದ ರಂಜಿತ ಎಂಬ ಯುವತಿ ನಾಪತ್ತೆಯಾಗಿರುವುದಾಗಿ ಸುದ್ದಿ ಬಿತ್ತರಿಸುತ್ತಿದ್ದಂತೆ ಸುದ್ದಿಲೈವ್‌ಗೆ ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿ ಆಕೆಯ ಶವವೂ ಭದ್ರ ಎಡನಾಲೆಯಲ್ಲಿ ಇಂದು ಪತ್ತೆಯಾಗಿರುವುದಾಗಿ ಸಾಕಷ್ಟು ವಿಡಿಯೋ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಶಿವರಾಮನಗರ, ಭದ್ರಾವತಿ ವಾಸಿ ಬೆಟ್ಟಸ್ವಾಮಿ ಎಂಬುವವರ ಮಗಳು 17 ವರ್ಷದ ರಂಜಿತಾ ಎಂಬ ಯುವತಿ ಸೆ.19 ರಂದು ಪ್ಯಾಕ್ಟರಿ ಕೆಲಸಕ್ಕೆಂದು ಹೋದವರು ಕಾಣೆಯಾಗಿದ್ದು, ಲಕ್ಷ್ಮೀಪುರ ರೈಲ್ವೆ ಬ್ರಿಡ್ಜ್ ಬಳಿಯಲ್ಲಿ ಆಕೆಯ ಬ್ಯಾಗ್, ಚಪ್ಪಲಿ ಮತ್ತು ಐ.ಡಿ.ಕಾರ್ಡ್ ಪತ್ತೆಯಾಗಿದ್ದು. ಇಂದು ಬಿದರೆ ಬಳಿಯ ಭದ್ರ ಚಾನೆಲ್‌ನಲ್ಲಿ ಆಕೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳೀಯರ ಮಾಹಿತಿ ಪ್ರಕಾರ ಆಕೆ ಮಿಸ್ಸಿಂಗ್ ಆಗಿ 6 ದಿನಗಳೆ ಕಳೆದಿವೆ. ರೈಲು ಹೊಡೆದುಕೊಂಡು ಹೋಗಿದ್ದು ಆಕೆಯ ಮೃತ ದೇಹ ಚಾನೆಲ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಹಾಗೂ ಸಾಕಷ್ಟು ವಿಡಿಯೋಗಳನ್ನ ಕಳುಹಿಸಿದ್ದಾರೆ.
ಇಂದು ವಾರ್ತಾ ಇಲಾಖೆಯ ಮೂಲಕ ಯುವತಿ ನಾಪತ್ತೆ ಪ್ರಕರಣದ ಬಗ್ಗೆ ಸುಮಾರು ಎರಡು ಗಂಟೆಯ ಹಿಂದೆ ವರದಿ ಮಾಡಲಾಗಿತ್ತು. ವರದಿಯ ಬೆನ್ನಲ್ಲಿಯೇ ಸಾರ್ವಜನಿಕರು ಸ್ಪಂಧಿಸಿ ಮಾಹಿತಿ ನೀಡಿದ್ದಾರೆ.