ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ತಾಲ್ಲೂಕು ಪಂಚಾಯತ್ ವ್ಯಾಪ್ತಿಯ 36 ಗ್ರಾಮಪಂಚಾಯಿತಿಯಲ್ಲಿ ಆಕ್ಷೇಪಣೆ ಹಾಗೂ ವಸೂಲಾತಿ ಮೊತ್ತದ ಲೆಕ್ಕ ತನಿಖೆಯಿಂದ ಅಕ್ರಮ ಬಯಲಾಗುವುದರಿಂದ ಪಿಡಿಓಗಳಿಂದ ಬಾಕಿ ವಸೂಲಾತಿ ಮಾಡದ ತಾಲ್ಲೂಕು ಪಂಚಾಯತ್ ಇ.ಓ. ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಂಚೆಶಿವರುದ್ರಪ್ಪ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಟ್ಟು 36 ಪಂಚಾಯತ್‌ಯಿಂದ ಆಕ್ಷೇಪಣೆ ಮೊತ್ತ 92478779 ರೂ. 1992ರಿಂದ ಲೆಕ್ಕ ತೀರುವಳಿಗೊಳ್ಳದೆ ಪಿಡಿಓಗಳಿಂದ ದಾಖಲೆಗಳನ್ನು ಪಡೆಯದೆ ಈ ಹಿಂದಿನವರೂ ಸೇರಿ ತಾ.ಪಂ. ಇಓ ಅಧಿಕಾರಿಗಳು ಅಡಕ್ ಸಮಿತಿ ಅಧ್ಯಕ್ಷರಾದ ಸಭೆಯಲ್ಲಿ ದಾಖಲೆ ಪಡೆದು ತೀರುವಳಿ ಮಾಡಿಸಬೇಕಾಗಿರುತ್ತದೆ. ಆದರೆ ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಇಓ ಕಾರ್ಯನಿರ್ವಹಿಸದೇ ಇರುವುದಕ್ಕೆ ಪಿಡಿಓಗಳಿಂದ ಶಾಮಿಲಾಗಿರುವುದು ಈ ದಾಖಲೆಗಳಿಂದ ಕಂಡು ಬರುತ್ತದೆ ಎಂದು ಆರೋಪಿಸಿದರು.
ತಪ್ಪಿತಸ್ಥ ಪಿಡಿಒಗಳಿಗೆ ಬೆಂಬಲ ಕೊಟ್ಟಿರುವ ಇಓಗಳ ಮೇಲೆ ಕ್ರಮ ಕೈಗೊಳ್ಳುವುದು ಮತ್ತು ಸರ್ಕಾರಕ್ಕೆ ವರದಿ ಸಲ್ಲಿಸುವುದು ಜಿ.ಪಂ. ಸಿಇಓಗಳ ಜವಬ್ದಾರಿಯಾಗಿರುತ್ತದೆ. ಈ ಬಗ್ಗೆ ಲೋಕಾಯುಕ್ತರಿಂದ ನೋಟಿಸ್ ಜಾರಿಯಾಗಿದ್ದೂ ರಾಜಕಾರಣಿಗಳೊಂದಿಗೆ ಷಾಮಿಲಾಗಿ ಜಿ.ಪಂ. ಸಿಇಓ ಷಾಮಿಲಾಗಿರುವುದು ಸಹ ಈ ದಾಖಲೆಗಳಿಂದ ಕಂಡುಬರುತ್ತಿದೆ ಎಂದು ದೂರಿದರು.
ಮತ್ತೊಮ್ಮೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು. ರಾಜ್ಯದ ಎಲ್ಲಾ ತಾಲ್ಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಕರಣಗಳು ನಡೆದಿದ್ದು, ಈ ಪ್ರಕರಣ ಬಾಕಿ ಉಳಿದುಕೊಂಡಲ್ಲಿ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಬಾಕಿ ವಸೂಲಾತಿಗೆ ಸರ್ಕಾರಿ ಹಣ ದುರುಪಯೋಗ ಯಡಿಯಲ್ಲಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ವಿ.ರಾಜಮ್ಮ, ಹೊನ್ನಮ್ಮ ಮಾಲತೇಶ್, ಲಿಂಗರಾಜ್, ಜವರಯ್ಯ, ಶಾಂತಮ್ಮ, ಲಕ್ಷ್ಮೀ, ಶೃತಿ, ಗೀತಮ್ಮ, ಪೂರ್ಣಿಮ, ಸುಪ್ರಿಯ, ನಳಿನಾ ಇನ್ನಿತರರು ಉಪಸ್ಥಿತರಿದ್ದರು.