Girl in a jacket

ಭಕ್ತರ ಗಮನ ಸೆಳೆಯುತ್ತಿದೆ ಹರೋಹರ ಗಣಪ ಹಾಗೂ ತಿರುಪತಿ ಅಲಂಕಾರದ ಗಣಪ

 


ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಗಣಪತಿ ಪೆಂಡಾಲ್ ಗಳಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳ ಹಲವು ಫೋಟೊಗಳು ಲಭ್ಯವಾಗುತ್ತಿದೆ.‌ ಗಣಪತಿ ಹಬ್ಬದ ನಾಲ್ಕನೇ ದಿನವಾಗಿದೆ.


ಶಿವಮೊಗ್ಗ ಜಿಲ್ಲೆಯಲ್ಲಿ ಗಣೇಶನ ಚೌತಿಗೆ 3500 ಗಣಪತಿ ಪೆಂಡಾಲ್ ಹಾಕಲಾಗಿತ್ತು. ಇದರಲ್ಲಿ 1000 ಪೆಂಡಾಲ್ ಗಳನ್ನ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ನಗರ ವ್ಯಾಪ್ತಿಯ ಸಣ್ಣ ಮತ್ತು ದೊಡ್ಡ ಗಣಪತಿ ಪೆಂಡಾಲ್ ಗಳ ಮೂರ್ತಿಗಳು ಸೇರಿ  ಇದುವರೆಗೂ 300 ಗಣಪತಿಗಳು ವಿಸರ್ಜಿಸಲಾಗಿದೆ. ನಾಲ್ಕನೇ ದಿನವಾದ ಇಂದು 40 ಗಣಪತಿಗಳು ವಿಸರ್ಜನೆಗೊಳ್ಳಲಿದೆ.


ವಿಸರ್ಜನೆಗೊಳ್ಳುವ ಮತ್ತು ಗೊಂಡಿರುವ ಗಣಪತಿಗಳ ಲೆಕ್ಕಗಿಂತ ಪ್ರತಿಷ್ಠಾಪಿಸಿರುವ ಗಣಪತಿಗಳು ವಿಶೇಷವಾಗಿ ಪ್ರತಿಷ್ಠಾಪಿಸಲಾಗಿದೆ. ದುರ್ಗಿಗುಡಿಯಲ್ಲಿ  ಶ್ರೀ ಶಕ್ತಿ ಯುವಕರ ವಿದ್ಯಾ ಗಣಪತಿ ಸಮಿತಿಯಿಂದ ಪ್ರತಿಷ್ಠಾಪಿಸಲ್ಪಟ್ಟ ಗಣಪತಿ ಪೆಂಡಾಲ್ ನಲ್ಲಿ ಪುತ್ರ ಗಣಪನನ್ನ ತಂದೆ ಈಶ್ವರ ನೋಡುತ್ತಿರುವುದು ಗಮನ ಸೆಳೆಯುತ್ತದೆ.


ಶ್ರೀ ಚೌಡೇಶ್ವರಿ ಗೆಳೆಯರ ಬಳಗ ಶರಾವತಿ ನಗರ ಹಂದಿ ಜೋಗಿ ಕ್ಯಾಂಪ್ ನಲ್ಲಿ ನೀಲಾಂಬರನಾದ ಗಣಪ, ಗೋಪಾಳಗೌಡ ಬಡಾವಣೆಯ 60 ಅಡಿ E- ಬ್ಲಾಕ್‌ನ 18 ನೇ ವರ್ಷದ ಗಣಪತಿ ಉತ್ಸವವನ್ನ ಆಚರಿಸಲಾಗುತ್ತಿದೆ. ತಿರುಪತಿ ವೆಂಕಟರಮಣ ಸ್ವಾಮಿಯ ಅಲಂಕಾರದ ಗಣಪತಿಯನ್ನ 9 ದಿನಗಳವರೆಗೆ ಗಣಪತಿ ಕೂರಿಸಲಾಗುವುದು. ಸೆ.15 ರಾಜಬೀದಿ ಉತ್ಸವದೊಂದಿಗೆ ವಿಸರ್ಜಿಸಲಾಗುತ್ತಿದೆ.



ಅದರಂತೆ ಮಾರ್ನಮಿ ಬೈಲಿನ ಮೂರನೇ ತಿರುವಿನಲ್ಲಿರುವ  ಸಾವರ್ಕರ್ ಬಳಗದ ಗಣಪತಿಯೂ ಭಕ್ತರ ಗಮನ ಸೆಳೆಯವಲ್ಲಿ ಯಶಸ್ವಿಯಾಗಿದೆ.  ಹರೋಹರ ಜಾತ್ರೆಗೆ ಹೊರಟಿರುವ ಗಣಪತಿಯನ್ನ ಪ್ರತಿಷ್ಠಾಪಿಸಲಾಗಿದೆ. ಬಾಯಿಗೆ ವೇಲಾಯುಧವನ್ನ ಚುಚ್ಚಿಕೊಂಡು ಬೆನ್ನಿನ ಮೇಲೆ ಕರಗ ಹೊತ್ತುಕೊಂಡು ಹರಕೆ ತೀರಿಸಲು ಹೊರಟಿರುವ ಭಂಗಿಯಲ್ಲಿ ಗಣಪ ಕಾಣಿಸಿಕೊಂಡಿದ್ದಾನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು