ಜನಗಣತಿ ವರದಿ ಬಗ್ಗೆ ಸಿದ್ದರಾಮಯ್ಯನವರು ಬರುವ ಸಚಿವ ಸಂಪುಟದಲ್ಲಿ ಮಂಡಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯನ್ನ ಮಾಜಿ ಡಿಸಿಎಂ ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿ ಸ್ವಾಗಿತಿಸಿದರು.
ಜಾತಿ ಗಣತಿಯನ್ನ ಮಂಡಿಸಿರುವುದು ಸ್ವಾಗತಾರ್ಹ, ಆದರೆ ಬೂಟಾಟಿಕೆ ಆಗಬಾರದು. ಮೂಡ ಹಗರಣ ಡೈವರ್ಟ್ ಆಗದಂತೆ ನೋಡಿಕೊಳ್ಳಬೇಕೆಂದು ಅವರು ಸರ್ಕಾರಕ್ಕೆ ಮತ್ತು ಸಿಎಂ ಸಿದ್ದರಾಮಯ್ಯನವರಿಗೆ ಕಿವಿ ಮಾತು ಹೇಳಿದರು. ಶಾಸಕರು ಮತ್ತು ಸಚಿವರು ತಿರುಗಿ ಬೀಳಬಹುದು ಎಂಬ ಕಾರಣಕ್ಕೆ ಈ ಹಿಂದೆ ಜಾತಿಗಣತಿಯನ್ನ ಮಂಡಿಸದ ಸಿದ್ದರಾಮಯ್ಯ ಈಗ ದಿಡೀರ್ ಎಂದು ವರದಿ ಮಂಡನೆ ಅನುಮಾನ ವ್ಯಕ್ತಪಡಿಸಿದೆ ಎಂದರು.
6-7 ವರ್ಷದ ಹಿಂದೆ ಕಾಂತರಾಜು ಹಿಂದುಳಿದ ವರಘಗಳ ಆಯೋಗದ ಅಧ್ಯಕ್ಷರಾಗಿದ್ದರು. ಅವರಿಗೆ ವರದಿ ತಡಮಾಡಿರುವ ಬಗ್ಗೆ ಪ್ರಶ್ನಿಸಿದಾಗ ಕಾಂತರಾಜು ಅವರು ಯಾವಾಗ ಸರ್ಕಾರ ಬಯಸುತ್ತೋ ಆಗ ವರದಿ ಕೊಡಲು ಸಿದ್ದ ಎಂದಿದ್ದರು. ಆಗಿನ ಸಿಎಂ ಸಿದ್ದರಾಮಯ್ಯನವರ ವಿರುದ್ಧ ನಾವೆಲ್ಲ ಸದನದಲ್ಲಿ ಅಡ್ಜನ್ ಮೆಂಟ್ ಮೋಷನ್ ತಂದು ಕಾಂತರಾಜು ವರದಿ ಮಂಡನೆ ಬಗ್ಗೆ ಸರ್ಕಾರಕ್ಕೆ ಪ್ರಶ್ನಿಸಲಾಗಿತ್ತು. ಆಗ ನಾನು ವಿಪಕ್ಷ ನಾಯಕನಾಗಿದ್ದೆ. ತಕ್ಷಣವೇ ಜಾರಿಗೆ ತರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಆದರೆ 7 ವರ್ಷಗಳು ಕಳೆದರೂ ಜಾರಿಗೆ ತರಲಿಲ್ಲ. ವರದಿಗೆ ಕಾರ್ಯದರ್ಶಿಗಳ ಸಹಿ ಇರಲಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಜಯಪ್ರಕಾಶ್ ಹೆಗಡೆ ಅವರನ್ನ ಹಿಂದುಳಿದ ವರ್ಗಗಳ ಆಯೋಗಕ್ಕೆ ನೇಮಿಸಿದಾಗ ವರದಿಯೇ ಕಳುವಾಗಿದೆ ಎಂದು ಹೇಳಲಾಗಿತ್ತು. ತಡಕಾಡಿ ವರದಿಯನ್ನ ಜಯಪ್ರಕಾಶ್ ಹೆಗಡೆ ಜನವರಿ 29 ರಂದು ಸಿಎಂಗೆ ಹಸ್ತಾಂತರಿಸಲಾಗಿತ್ತು. ಅಲ್ಲಿಂದ 7 ತಿಂಗಳು ಕಳೆದರೂ ಜಾರಿಗೆ ತರಲಿಲ್ಲ.
ಈಗ ಮೂಡಾ ಹಗರಣವನ್ನ ಡೈವರ್ಟ್ ಮಾಡಲು ಜನ ಗಣತಿ ಮಂಡನೆ ಬಗ್ಗೆ ಸಿಎಂ ಮಾತನಾಡಿರುವುದಾಗಿ ಅನುಮಾನವಾಗಿದೆ. ಇದು ಎಲ್ಲದರ ಬಗ್ಗೆ ಚರ್ಚೆ ಆಗಬೇಕು. 1939 ರಲ್ಲಿ ಜಾತಿಗಣತಿಯಾಗಿತ್ತು. ಅಲ್ಲಿಂದ ಇಲ್ಲಿಯ ವರೆಗೆ ಆಗಲೇ ಇಲ್ಲ. ಹಿಂದುಳಿದ ಜನಾಂಗದ ಚಾಂಪಿಯನ್ ಎಂದು ಹೇಳಿಕೊಳ್ಳುವ ಸಿಎಂರವರು ಮೂಡಾ ಹಗರಣ ಡೈರ್ವಟ್ ಮಾಡಬಾರದು ಎಂದು ಆಗ್ರಹಿಸಿದರು.
ಸುಪ್ರೀಂ ಜಡ್ಜ್ ಮೆಂಟ್ ನಲ್ಲಿ ನಿಮ್ಮ ಕೈಯಲ್ಲಿ ಏನಿದೆ ಅಂಕಿಅಂಶ ಅದರ ಮೇಲೆ ಮೀಸಲಾತಿ ಮಾಡಬೇಕೆಂದಿದೆ. ಮೀಸಲಾತಿ ಇಲ್ಲದೆ ಚುನಾವಣೆ ನಡೆಸುವಂತಿಲ್ಲ. ಆದರೆ ಮೀಸಲಾತಿಗೂ ಮುನ್ನ ಜನಗಣತಿ ಆಗಬೇಕೆಂಬ ಹಿನ್ನಲೆಯಲ್ಲಿ ಮಂಡಿಸಲಾಗಿದೆ. ಪರಿಶಿಷ್ಟ.ಜಾತಿ ಹಣವನ್ನ ಕಾಂಗ್ರೆಸ್ ನುಂಗಿ ನೀರು ಕುಡಿದಿದೆ.
357 ಕೋಟಿ ಪ.ಜಾ.ಹಣ ನುಂಗಲಾಗಿದೆ. ಬಿಜೆಪಿ 1073 ಯೋಜನೆಗಳಿಗೆ ಮೀಸಲಿಟ್ಟ ಹಣಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ತಡೆಹಿಡಿದು ನಂತರ ರದ್ದೇ ಮಾಡಲಾಯಿತು. ಯಾವ ಲೆಕ್ಕದಲ್ಲಿ ಹಿಂದುಳಿದ ಮತ್ತು ದಲಿತರ ಉದ್ದಾರಕ ಎಂದು ಸಿದ್ದರಾಮಯ್ಯ ಬಿಂಬಿಸಿಕೊಳ್ತೀರ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಮಾತೆತ್ತಿದರೆ ದೇವರಾಜ್ ಅರಸ್, ಅಂಬೇಡ್ಕರ್ ಎನ್ನುವ ಸಿದ್ದರಾಮಯ್ಯ ಪ.ಜಾ.ಮತ್ತು ದಲಿತರ ಹಣವನ್ನ ನುಂಗಿದರು. ಈಗ ಇದ್ದಕ್ಕಿದ್ದಂತೆ ಉಡುಪಿಗೆ ಹೋಗುವ ಮಾತನ್ನ ಸಿದ್ದರಾಮಯ್ಯ ಆಡುತ್ತಿದ್ದೀರಿ. ಆದರೆ ಹಿಂದೂಗಳ ವಿರುದ್ಧ ಕ್ರಮಕ್ಕೆ ಮುಂದಾಗುತ್ತಾರೆ. ಚಿತ್ರದುರ್ಗ ಮತ್ತು ನಾಗಮಂಗಲದ ಗಣಪತಿ ಮೆರವಣಿಗೆಗೆ ಕಲ್ಲು ಹೊಡೆದವರನ್ನ ಬಿಟ್ಟು ಹಿಂದೂಗಳ ಮೇಲೆ ಪ್ರಕರಣ ದಾಖಲಿಸಿದ್ದು ಏಕೆ? ಇದು ನಿಮ್ಮ ಹಿಂದೂ ಧರ್ಮ ಎಂದು ದೂರಿದರು.