ಸುದ್ದಿಲೈವ್/ತೀರ್ಥಹಳ್ಳಿ
ಜಮೀನು ವಿಚಾರದಲ್ಲಿ ಗುಂಡು ಹಾರಿಸಿದ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗಿದೆ. 5 ವರ್ಷ ಕಠಿಣ ಕಾರಾಗೃಹ ವಾಸ 50 ದಂಡ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಕೃಷ್ಣಮೂರ್ತಿ, 64 ವರ್ಷ, ಜಟ್ಟಿನಮಕ್ಕಿ ಗ್ರಾಮ ತೀರ್ಥಹಳ್ಳಿ ತಾಲ್ಲೂಕು ರವರು ಅದೇ ಗ್ರಾಮದ ಅಶೋಕನ ಮನೆಯ ಪಕ್ಕದಲ್ಲಿರುವ ಜಾಗದಿಂದ ತಮ್ಮ ಜಮೀನಿಗೆ ಹೋಗುತ್ತಿದ್ದು, ಸದರಿ ಜಾಗದ ವಿಚಾರದಲ್ಲಿ ಇಬ್ಬರಿಗೂ ಈ ಹಿಂದಿನಿಂದಲೂ ಗಲಾಟೆ ಮತ್ತು ತಂಟೆ ತಕರಾರಿರುತ್ತದೆ.
ಈ ವಿಚಾರವಾಗಿ ದಿನಾಂಕಃ 23-04-2018 ರಂದು ಬೆಳಿಗ್ಗೆ ಕೃಷ್ಣಮೂರ್ತಿ ರವರು ಎಂದಿನಂತೆ ತಮ್ಮ ಜಮೀನಿನ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ, ಅಶೋಕನು ಅಲ್ಲಿಗೆ ಕೋವಿ (ಬಂದೂಕು) ಹಿಡಿದು ಕೊಂಡು ಬಂದು, ಕೊಲೆ ಮಾಡುವ ಉದ್ದೇಶದಿಂದ ಕೃಷ್ಣಮೂರ್ತಿ ರವರ ಮೇಲೆ ಗುಂಡು ಹಾರಿಸಿದ್ದು, ಕೃಷ್ಣಮೂರ್ತಿ ರವರ ಕುತ್ತಿಗೆಗೆ ಗುಂಡುತಾಗಿ ತೀವ್ರ ಸ್ವರೂಪದ ರಕ್ತ ಗಾಯವಾಗಿತ್ತು. ಪ್ರಕರಣ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಸುರೇಶ್, ಸಿ.ಪಿ.ಐ, ತೀರ್ಥಹಳ್ಳಿ ವೃತ್ತ ರವರು ಪ್ರಕರಣದ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸುರೇಶ್ ಕುಮಾರ್ ಎ. ಎಂ. ಸರ್ಕಾರಿ ಅಭಿಯೋಜಕರವರು, ಪ್ರಕರಣದ ವಾದ ಮಂಡಿಸಿದ್ದು, ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು,
ಆರೋಪಿತನ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಮಂಜುನಾಥ್ ನಾಯಕ್ ರವರು ದಿನಾಂಕಃ 13-09-2024 ರಂದು ಆರೋಪಿತನಾದ ಅಶೋಕ, 62 ವರ್ಷ, ಜಟ್ಟಿನಮಕ್ಕಿ ಗ್ರಾಮ ತೀರ್ಥಹಳ್ಳಿ ತಾಲ್ಲೂಕು ಈತನಿಗೆ 05 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ 50,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 05 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದೆ.
ಪರಿಹಾರ ರೂಪವಾಗಿ ದಂಡದ ಮೊತ್ತದಲ್ಲಿ 25,000 ರೂಗಳನ್ನು ಗಾಯಾಳು ಕೃಷ್ಣಮೂರ್ತಿರವರಿಗೆ ನೀಡಲು ಆದೇಶಿಸಿರುತ್ತಾರೆ.