Girl in a jacket

ಸದೃಢ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರಬುನಾದಿ, ಬಳೆಗಾರ್



ಸುದ್ದಿಲೈವ್/ಭದ್ರಾವತಿ

ಯಾವುದೇ ಸಮಾಜ ಸದೃಢವಾಗಬೇಕಾದರೆ ಆ ಸಮುದಾಯದ ಜನ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದರೆ ಅದರೊಂದಿಗೆ ಆರ್ಥಿಕ ಅಭಿವೃದ್ಧಿಯು ಸಹಜವಾಗಿಯೇ ಆಗುತ್ತದೆ ಎಂದು ಜಿಲ್ಲಾ ನಾಯಕ ವಾಲ್ಮೀಕಿ ಸಂಘದ ಅಧ್ಯಕ್ಷರಾದ ಎಚ್. ಟಿ. ಬೆಳಗಾರ್ ಹೇಳಿದರು.

ಅವರು ಇತ್ತೀಚೆಗೆ ಭದ್ರಾವತಿ ತಾಲೂಕಿನ ಅರ ಹತೋಳು  ಗ್ರಾಮದಲ್ಲಿ ನಡೆದ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದರು   ಜಿಲ್ಲೆಯಲ್ಲಿ ಸಮಾಜವನ್ನು ಸದೃಢವಾಗಿ ಕಟ್ಟುವ ನಿಟ್ಟಿನಲ್ಲಿ ಜಿಲ್ಲಾ ಪ್ರವಾಸ ಕೈಗೊಂಡಿದ್ದು ಅದರ ಅಂಗವಾಗಿ ನಡೆದ ಸದಸ್ಯತ್ವ ನೊಂದಣಿ ಹಾಗೂ ಶಿವಮೊಗ್ಗ ನಗರದಲ್ಲಿ ಸಂಘದ ವತಿಯಿಂದ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಮುದಾಯದ ಜನರಿಂದ ಆರ್ಥಿಕ ನೆರವನ್ನು ಪಡೆಯುತ್ತಿದ್ದೇವೆ. 

ಒಟ್ಟಾರೆ ಸಮಾಜದ ಮಕ್ಕಳು ಶೈಕ್ಷಣಿಕವಾಗಿ ಮುಂದುವರೆದು ಸ್ವಂತ ಉದ್ಯೋಗ ಪಡೆಯಬೇಕೆಂಬ ಕನಸು ಹೊತ್ತು ಶಿವಮೊಗ್ಗದ ಬಾಪೂಜಿ ನಗರದಲ್ಲಿರುವ ವಾಲ್ಮೀಕಿ ನಾಯಕ ಸಂಘದ ಕಟ್ಟಡದ ಆವರಣದಲ್ಲಿ ವಿವಿಧ ತರಬೇತಿ ಕೇಂದ್ರಗಳು ವಿದ್ಯಾರ್ಥಿ ನಿಲಯ ನಿರ್ಮಿಸುವ ಉದ್ದೇಶ ಹೊಂದಿದ್ದು ಈ ಕಾರ್ಯಕ್ಕೆ ಜಿಲ್ಲೆಯಾದ್ಯಂತ ಪೂರಕ ಸ್ಪಂದನ ದೊರೆತಿದ್ದು ಭದ್ರಾವತಿಯಲ್ಲಿಯೂ ಸಮುದಾಯದ ಜನ ಆರ್ಥಿಕ ನೆರವಿನೊಂದಿಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡಬೇಕೆಂದು ಮನವಿ ಮಾಡಿದರು.  

ಜಿಲ್ಲಾ ಮಹರ್ಷಿ ವಾಲ್ಮೀಕಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಜಂಬರಗಟ್ಟಿ ಮಂಜಪ್ಪ ಮಾತನಾಡಿ ಅನೇಕ ವರ್ಷಗಳಿಂದ ನಿನಗೂಡಿಗೆ ಬಿದ್ದಿದ್ದ ಸಂಘದ ಚಟುವಟಿಕೆ ಬ್ಯಾಂಕ್ ಹಾಗೂ ಬ್ಯಾಂಕ್ ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಜನರ ಸ್ಪಂದನೆಯು ದೊರೆಯುತ್ತಿದೆ ಸೊಸೈಟಿಯಲ್ಲಿ ಈಗಾಗಲೇ ಅನೇಕ ಜನರಿಗೆ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದು ಠೇವಣಿ ಇರುವ ಮೂಲಕ ಸಹಕಾರಿ ಸಂಘ ಸದೃಢವಾಗಲು ಪೂರಕ ಸಹಕಾರ ನೀಡುವಂತೆ ಮನವಿ ಮಾಡಿದರು ಜಿಲ್ಲಾಧ್ಯಕ್ಷರಾಗಿ ಬಳೆಗಾರರವರು ಆಯ್ಕೆಯಾದ ನಂತರ ಉತ್ತಮ ಸ್ಪಂದನೆ ದೊರೆಯುತ್ತಿದ್ದು ಜಿಲ್ಲೆಯಲ್ಲಿ ಮಾದರಿ ಸಂಘ ಎಂಬ ಖ್ಯಾತಿಗಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸು ಇದೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದರು. 

ಪ್ರಸ್ತಾವಿಕವಾಗಿ ರಾಜನಹಳ್ಳಿ ಗುರುಪೀಠ ಕೃಷ್ಣ ಟ್ರಸ್ಟಿಯಾದ ಡಿ.ಬಿ . ಹಳ್ಳಿ ಬಸವರಾಜ್  ಮಾತನಾಡಿ ವೈಯಕ್ತಿಕವಾಗಿ 1 ಲಕ್ಷ ಘೋಷಣೆ ಮಾಡಿದ್ದಲ್ಲದೆ ನಮ್ಮ ತಾಲೂಕಿನಿಂದ ಜಿಲ್ಲೆಯಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಕ್ಕೆ 20 ಲಕ್ಷ ರೂಗಳನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸಿ ಕೊಡುವುದಾಗಿ ತಿಳಿಸಿದರು.

ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷರಾದ ಶಿವಕುಮಾರ್ ವಹಿಸಿದ್ದರು  ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ  ಶೇಖರಪ್ಪ ಕಾರ್ಯದರ್ಶಿ ಮೋಹನ್ ಕುಮಾರ್  ಖಜಾಂಚಿ ಗಿರೀಶ್ ಕುಮಾರ್  ಜಿಲ್ಲಾ ಸಂಘದ ಸದಸ್ಯರುಗಳಾದ ದಿಗ್ಗೇನಹಳ್ಳಿ ರಂಗೇಶ್ ಕೆ .ಎಸ್ ಹುಚ್ರಾಯಪ್ಪ ತಾಲೂಕು ಕಾರ್ಯದರ್ಶಿ ಹರೀಶ್ ಉಪಾಧ್ಯಕ್ಷರಾದ ಶಕುಂತಲಮ್ಮ ಗೌರವಾಧ್ಯಕ್ಷರಾದ ಜಂಬರ್ ಗಟ್ಟಿ ನಾಗರಾ ಜಪ್ಪ.  ಎಸ್. ಎಲ್. ರವಿಕುಮಾರ್ ಶಿವಮೊಗ್ಗದ ರಂಗಪ್ಪ ಮಾಸ್ಟರ್ ಜಿಲ್ಲಾ ಸಹಕಾರಿ ಸಂಘದ ಖಜಾಂಚಿ ರಾಮಪ್ಪ ವಿದ್ಯಾನಗರ ನೀಲಪ್ಪ  ಡಾಕ್ಟರ್ ಅಪ್ಪಣ್ಣಗಸ್ತಿ ಮುಂತಾದವರು ಉಪ ಸ್ಥಿತರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು