Girl in a jacket

ಸಿಎಂ, ಡಿಸಿಎಂ ಹಾಗೂ ಗೃಹಸಚಿವರು ರಾಜ್ಯಪಾಲರ ಮತ್ತು ರಾಜ್ಯದ ಜನರ ಕ್ಷಮೆ ಕೇಳಬೇಕು



ಸುದ್ದಿಲೈವ್/ಶಿವಮೊಗ್ಗ


ರಾಜ್ಯದಲ್ಲಿ ಅರ್ಥಹೀನ ರಾಜಕಾರಣ ಬಡೆಯುತ್ತಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ‌ಆರೋಪಿಸಿದರು. 


ಸುದ್ದಿಗೋಷ್ಠಿ ನಡೆಸಿದ ಅವರು,  ರಾಜಭವನ ಚಲೋ ನಡೆಸಲಾಗಿದೆ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ಧನ್ ರೆಡ್ಡಿ ಮತ್ತು ಮುರುಗೇಶಿ ನಿರಾಣಿಗೆ ಪ್ರಾಸಿಕ್ಯೂಷನ್ ನೀಡಬೇಕು ಎಂದು ಒತ್ತಾಯಿಸಲಾಯಿತು. ನಂತರ ನಡೆದ ಪರಿಶೀಲನೆಯಲ್ಲಿ ಯಾರೂ ಈ ನಾಲ್ವರ ವಿರುದ್ಧ  ಪ್ರಾಸಿಕ್ಯೂಷನ್ ಗೆ ಅರ್ಜಿ ಹಾಕಲಿಲ್ಲ. 


ರಾಜ್ಯಪಾಲರ ಹುದ್ದೆಗೆ ಸಂವಿಧಾನಿಕ ಹುದ್ದೆ ಇದೆ. ಇವರ ವಿರುದ್ಧ ಪ್ರತಿಭಟಿಸಿದ ಕಾಂಗ್ರೆಸ್ ರಾಜ್ಯಪಾಲರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದರು. ಇದು ಸಂವಿಧಾನಿಕ ಹುದ್ದೆ ಮಾಡಿದ ಅವಮಾನವಾಗಿದೆ. ಸಿಎಂ ಡಿಸಿಎಂ ಮತ್ತು ಗೃಹಸಚಿವರು ಪರಿಶೀಲಸದೆ ಚಪ್ಪಲಿಯಲ್ಲಿ ಹೊಡೆಯುವುದು ಎಷ್ಟು ಸರಿ ಎಂದು ಆಗ್ರಹಿಸಿದರು.


ಇತಿಹಾಸ ಇರುವ ಕಾಂಗ್ರೆಸ್ ಪಕ್ಷಕ್ಕೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಕೊಡಲಾಗಿದೆ ಎಂಬ ಕಾರಣಕ್ಕೆ ರಾಜ್ಯಪಾಲರ ಹುದ್ದೆಯನ್ನ ಬೀದಿಗೆ ತಂದಿದ್ದಾರೆ. ರಾಜ್ಯಪಾಲರ ಹುದ್ದೆಯನ್ನ ಅವಮಾನಿಸಲಾಗಿದೆ. ಆಗಿದ್ದು ಆಗಿದೆ. ನೇತೃತ್ವ ವಹಿಸಿದ ಗೃಹಸಚಿವರು, ಡಿಸಿಎಂ ಮತ್ತು ಸಿಎಂ ರಾಜ್ಯದ ಕ್ಷಮೆ ಕೇಳಬೇಕು. ಕ್ಷಮೆ ಕೇಳಿದರೆ ಪಕ್ಷಕ್ಕೆ ಗೌರವ ಬರುತ್ತದೆ  ಎಂದು ಆಗ್ರಹಿಸಿದರು. 


ಮಾತೆತ್ತಿದರೆ ಸಂವಿಧಾನ ಎನ್ನುವ ಕಾಂಗ್ರೆಸ್ ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನ ಅಗೌರವಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ ಈಶ್ವರಪ್ಪ, ಬಾಂಗ್ಲ ಮಾದರಿಯಲ್ಲಿ ದಂಗೆ ಏಳಬೇಕು ಎಂದು ಐವಾನ್ ಡಿಸೋಜಾರು ರಾಜ್ಯಪಾಲರ ಭವನಕ್ಕೆ ಹೋದಾಗ ಹೊರಗೆ ಕಳುಹಿಸಲಾಗಿತ್ತು. ಆದರೆ ಕೆಲ ಸಚಿವರು ತೇಪೆ ಹಚ್ಚಿ ಉಳಿಸಿಕೊಂಡಿದ್ದಾರೆ. ಅವರನ್ನ ಬಂಧಿಸಬೇಕು ಎಂದು ಆಗ್ರಹಿಸಿದರು.


ರಾಜ್ಯಪಾಲರ ತಪ್ಪು ಸರಿ ಇದೆ ಎಂದು ಕೋರ್ಟ್ ನಿರ್ಧರಿಸುತ್ತದೆ. ಸ್ಥಾನದ ಬಗ್ಗೆ ಅಗೌರವ ತೋರಲಾಗಿದೆ. ಜೊಲ್ಲೆ, ನಿರಾಣಿ ಮತ್ತು ರೆಡ್ಡಿ ವಿರುದ್ಧ ಯಾವುದೇ ಕಡತಗಳಿಲ್ಲ. ಆದರೆ ಕುಮಾರ ಸ್ವಾಮಿ ವಿರುದ್ಧ ಕಡತವಿದೆ ಪರಿಶೀಲನೆಗೆ ಲೋಕಾಯುಕ್ತರಿಗೆ ಕಳುಹಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಆದರೆ ಚಪ್ಪಲಿಯಲ್ಲಿ ಹೊಡೆದ ಕಾಂಗ್ರೆಸ್ ನಾಯಕರನ್ನ ಬಂಧಿಸಿಲ್ಲ ಎಂದರು. 


ಕೇರಳದ ಮಲೆಯಾಳಂ ಚಿತ್ರರಂಗದಲ್ಲಿ ಸೆಕ್ಸ್ ದಂಧೆ ನಡೆದಿರುವ ಬಗ್ಗೆ ಕೇರಳದ ಕಾಂಗ್ರೆಸ್ ನಾಯಕಿ ಸಿಮಿ ರೋಜ್  ಆರೋಪಿಸಿದ್ದಾರೆ. ರಾಜ್ಯ ರಾಷ್ಟ್ರ ಮಟ್ಟದಲ್ಲಿ ಈ ವ್ಯವಸ್ಥೆ ನ ಡಧಿದೆ ಎಂದು ಹೇಳಿದ್ದಾರೆ. ಸುಸಂಸ್ಕೃತರು ಹೇಗೆ ರಾಜಕಾರಣಕ್ಕೆ ಹೋಗೋದು ಎಂದು ಈಶ್ವರಪ್ಪ ಆಗ್ರಹಿಸಿದರು. 


ಇದನ್ನ ಹೇಳಿದ ಸಿಮಿ ರೋಜ್ ರನ್ನ ಪಕ್ಷದಿಂದ ವಜಾಗೊಳಿಸಲಾಗಿದೆ. ತನಿಖೆ ನಡೆಸದೆ ಈ ಕ್ರಮ ಕೈಗೊಂಡ ಕಾಂಗ್ರಸ್ ತಲೆತಗ್ಗಿಸುವ ಕೆಲಸಕ್ಕೆ ಕೈಹಾಕಿದೆ. ರಾಜಕಾರಣದಲ್ಲಿ ಇಷ್ಟು ಬಹಿರಂಗವಾಗಿ ಬರ್ತಾಇರೋದು ಮೊದಲಾಗಿದೆ. ಎಲ್ಲಾ ರಾಜಕೀಯ ಪಕ್ಷಕ್ಕೆ ಪಾಠವಾಗಿದೆ ಎಂದರು. 


ರಾಷ್ಟ್ರಭಕ್ತ ಬಳಗದಿಂದ ಹೋರಾಟ ನಡೆದಿದೆ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಬರಬೇಕು ಅದು ಬಙದಿರಲಿಲ್ಲ.‌ಈಗ ಲಕ್ಷಾಂತರ ಜನ ವಿದ್ಯಾವಙತರಿಗೆ ಅನುದಾನ ಬಿಡುಗಡೆಯಾಗಿದೆ. ಸಂಬಂಧ ಪಟ್ಟ ಸಚಿವ ಸಂತೋಷ್ ಲಾಡ್ ಗೆ ಅಭಿನಂದಿಸುವಿದಾಗಿ ತಿಳಿಸಿದರು. 


ಆಶ್ರಯ ಮನೆಗಳು ಸಂಪುರ್ಣ ಮಾಡಬೇಕು‌ ಎಂದು ಹೋರಾಡಲಾಗಿತದತು. 680 ಮನೆಗಳನ್ನ ಕೊಡುವುದಾಗಿ ಹೇಳಿದ್ದಾರೆ. ಸೆ.20 ಒಳಗೆ ಮನೆ ಹಂಚಬೇಕು ಎಂದು ಆಗ್ರಹಿಸಿದರು‌. ಲಾಟರಿ ಮೂಲಕ ಮನೆ ಹಚಲಾಗುತ್ತಿದೆ. ನೀರು ಹಂಚಿಕೆ ಸಮಸ್ಯೆಯಾಗಿದೆ ಅದನ್ನೂ ಪಾಲಿಕೆ ಗಮನಕ್ಕೆ ತರಲಾಗಿದೆ. ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.


ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ನಡೆದಿದೆ ಎಂದು ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದು ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಸೆ.20 ಒಳಗೆ ಪರಿಹಾರ ನೀಡದಿದ್ದರೆ ಜೈಲ್ ಭರೋ ಕಾರ್ಯಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close