ಸುದ್ದಿಲೈವ್/ಶಿವಮೊಗ್ಗ
ನಗರದ ನೆಹರೂ ರಸ್ತೆಯಲ್ಲಿ ಇಬ್ಬರು ಯುವಕರ ನಡುವೆ ಹೊಡೆದಾಟ ನಡೆದಿದ್ದು ಅಲ್ಲಿನ ಟ್ರಾಫಿಕ್ ಪೊಲೀಸರು ಸಮಯ ಪ್ರಜ್ಞೆ ಮೆರೆದು ಗಲಾಟೆಯನ್ನ ಬಿಡಿಸಿ ಕಳುಹಿಸಿದ್ದಾರೆ.
ನಗರದ ನೆಹರೂ ರಸ್ತೆಯಲ್ಲಿರುವ ಅಕೀಫ್ ಎಂಬುವರ ಅಂಗಡಿಯ ಮುಂದೆ ಸಲ್ಮಾನ್ ಎಂಬಾತ ಯುವಕ ಕುಡಿದು ಗಲಾಟೆ ಮಾಡಿದ್ದಾನೆ. ಇಬ್ಬರ ನಡುವೆ ತಳ್ಳಾಟ ನಡೆದಿದೆ.
ಇದನ್ನ ಗಮನಿಸಿದ ಟ್ರಾಫಿಕ್ ಪೊಲೀಸರು ಸಲ್ಮಾನ್ ನನ್ನ ವಶಕ್ಕೆ ಪಡೆದಿದ್ದಾರೆ. ಈಗ ಸಧ್ಯಕ್ಕೆ ಸಲ್ಮಾನ್ ನನ್ನ ಕೋಟೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ