ಭಾನುವಾರ, ಸೆಪ್ಟೆಂಬರ್ 1, 2024

ಕಡವೆ ಬೇಟೆ-ನಾಲ್ವರು ಅಂದರ್

 


ಸುದ್ದಿಲೈವ್/ಶಿವಮೊಗ್ಗ


ಜಿಲ್ಲೆಯ ಭದ್ರಾವತಿ ತಾಲೂಕು ಉಂಬ್ಳೆಬೈಲು ರೇಂಜ್ ನ ಚೌಡಿಕಟ್ಟೆಯ ಬಳಿ ಕಡವೆ ಪ್ರಾಣಿಯನ್ನ ಶಿಕಾರಿ ಆಡಿದ ನಾಲ್ವರನ್ನ ಅರಣ್ಯ ಇಲಾಖೆಯವರು ಬಂಧಿಸಿ, ನ್ಯಾಯಾಂಗ ಬಂಧನಕೊಳಪಡಿಸಿದ್ದಾರೆ. 


ಚೌಡಿಕಟ್ಟೆಯಬಳಿ ಕಡವೆ ಬೇಟೆಯಾಡಿ ಕಡವೆಯ ತಲೆಯನ್ನ ಕೆರೆಗೆ ಬಿಸಾಕಿ ಹೋಗಿದ್ದಾಗ ಅರಣ್ಯ ಇಲಾಖೆಯವರೆ ಕಣ್ಣಿಗೆ ಬಿದ್ದಿದೆ. ಬೇಟೆಯಾಡಿದ ಕಡಿವೆಯನ್ನ ರುಂಡವನ್ನ ಛೇಧಿಸಿ ಮಾಂಸವನ್ನ ಕೊಯ್ದುಕೊಂಡು ತಲೆಯನ್ನ ಕೆರೆಗೆ ಬಿಸಾಕಲಾಗಿತ್ತು.



ನಿನ್ನೆ ಈ ಘಟನೆ ನಡೆದಿದ್ದು  ವನ್ಯಜೀವಿ ಬೇಟೆಯಾಡಿದ ಪ್ರಕರಣದ ಅಡಿಯಲ್ಲಿ  ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ.   ಎl) ಶಿವ ಬಿನ್ ರಾಜಪ್ಪ,(28), ಗೊಂದಿ ಗ್ರಾಮ ವಾಸಿ, ಹಿರಿಯೂರು ಅಂಚೆ, ಭದ್ರಾವತಿ ತಾಲ್ಲೂಕು ಎ2) ವೆಂಕಟೇಶ ಬಿನ್ ಮುನಿಯಪ್ಪ, (60), ಗೊಂದಿ ಗ್ರಾಮ ವಾಸಿ, ಹಿರಿಯೂರು ಅಂಚೆ, ಭದ್ರಾವತಿ ತಾಲ್ಲೂಕು ಎ3) ಮಂಜಪ್ಪ ಬಿನ್ ನಾಗಪ್ಪ, (45) ಚೌಡಿಕಟ್ಟೆ ಭೈರಾಪುರ ಗ್ರಾಮ ವಾಸಿ, ನರಸಿಂಹರಾಜ ಪುರ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ. ಎ4) ವಿನೋದ ಬಿನ್ ಮಂಜಪ್ಪ ಸಿ,( 19), ಚೌಡಿಕಟ್ಟೆ ಭೈರಾಪುರ ಗ್ರಾಮ ವಾಸಿ, ನರಸಿಂಹರಾಜ ಪುರ ತಾಲ್ಲೂಕು & ಚಿಕ್ಕಮಗಳೂರು ಜಿಲ್ಲೆ. ರವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಬೈಕ್ ನ್ನ‌ವಶಕ್ಕೆ ಪಡೆಯಲಾಗಿದೆ.‌


ನಾಲ್ವರನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಕಾರ್ಯಚರಣೆಯಲ್ಲಿ ಭದ್ರಾವತಿ ಡಿಸಿಎಫ್  ಆಶೀಶ್ ರೆಡ್ಡಿ, IFS ಹಾಗೂ ಚನ್ನಗಿರಿ ACF ರತ್ನಪ್ರಭ,  ರವರ ಮಾರ್ಗದರ್ಶನದಲ್ಲಿ ಆರ್ ಎಫ್ ಒ ಗಿಡ್ಡಸ್ವಾಮಿ, DRFO ಪವನ್ , ಸಂಜು BF ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ