ಸುದ್ದಿಲೈವ್/ಶಿವಮೊಗ್ಗ
ಶಾಲಾ ಸ್ಪೋರ್ಟ್ಸ್ ಗೆ ಬಂದಿದ್ದ ಬಾಲಕನೊಬ್ಬ ಸುಸ್ತಾಗಿ ಎದೆನೋವಿನಿಂದ ಅಸ್ವಸ್ಥನಾಗಿದ್ದು ಆತನನ್ನ ಸಾಗರದ ಉಪವೀಭಾಗಿಯ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಅಲ್ಲಿ ಕೆಲ ವೈದ್ಯರ ಗೈರಾಗಿದ್ದರಿಂದ ಬಾಲಕನ ಚಿಕಿತ್ಸೆಗೆ ವಿಳಂಬವಾಗಿತ್ತು. ಇದನ್ನರಿತ ಸ್ಥಳೀಯರೊಬ್ಬರು ಮಾನ್ಯ ಶಾಸಕರಿಗೆ ಕಾಲ್ ಮಾಡಿದ ತಕ್ಷಣವೇ ಶಾಸಕರು ತಾವೇ ಆಸ್ಪತ್ರೆಗೆ ಧಿಡೀರ್ ಭೇಟಿ ನೀಡಿ ಆರೋಗ್ಯಾಧಿಕಾರಿಗಳ ಚಳಿ ಬಿಡಿಸಿ ಬಾಲಕನಿಗೆ ತಕ್ಷಣವೇ ಚಿಕಿತ್ಸೆ ದೊರಕುವಂತೆ ಮಾಡಿದ್ದಾರೆ.
ಈ ರೀತಿಯ ಅವ್ಯವಸ್ಥೆ ಕೇವಲ ಸಾಗರದ ಉಪವಿಭಾಗದಲ್ಲಿ ಮಾತ್ರವಲ್ಲ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಪರಿಸ್ಥಿತಿ ಇದೆ. ಶಿವಮೊಗ್ಗದಂತಹ ಮೆಗ್ಗಾನ್ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗೆ ಹೋಗುವುದರಿಂದ ಇಲ್ಲಿ ಪ್ರ್ಯಾಕ್ಟೀಸ್ ಬರುವ ವಿದ್ಯಾರ್ಥಿಗಳೆ ಚಿಕಿತ್ಸೆಯಲ್ಲಿರುತ್ತಾರೆ ಎಂಬ ಆರೋಪ ಹಿಂದಿನಿಂದಲೂ ಇದೆ. ಹೀಗೆ ಆದಾಗಲೆಲ್ಲಾ ಜನಪ್ರತಿನಿಧಿಗಳು ಓಡಿಹೋಗಿ ಸರಿಮಾಡಲು ಸಾಧ್ಯವಿಲ್ಲ.
ಈ ವ್ಯವಸ್ಥೆಗೆ ಸಡಿಲ ಬಿಟ್ಟು ಬಿಟ್ಟು ಮತ್ತು ಯಾರ ಮಾತು ಯಾರೂ ಕೇಳದ ಪರಿಸ್ಥಿತಿಯಲ್ಲಿರುವುದರಿಂದ ಇಂದಿನ ಅವ್ಯವಸ್ಥೆ ತಲೆ ಏರಿ ಕುಳಿತಿದೆ. ಎನಿವೇ...! ಮಗುವಿಗೆ ಶಾಸಕರ ಸಹಾಯದಿಂದ ವಿಳಂಬವೆಸಿದರೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸಿದೆ.
ಒಂದು ಪೋನ್ ಕಾಲ್ ಗೆ ಶಾಸಕರು ತಕ್ಷಣೇ ಸ್ಥಳಕ್ಕೆ ದಾವಿಸಿ ಸರಿಯಾದ ಚಿಕಿತ್ಸೆ ದೊರಕುವಂತೆ ಮಾಡಿಕೊಟ್ಟಿರುವುದು ಶ್ಲಾಘನೀಯ. ಇದು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕಿದೆ.