ಸುದ್ದಿಲೈವ್/ಶಿವಮೊಗ್ಗ
ಟಿವಿಯಲ್ಲಿ ಇತ್ತೀಚೆಗೆ ಬಿತ್ತರವಾಗುತ್ತಿರುವ ಸುದ್ದಿಗಳ ವಿರುದ್ಧ ಮಾಜಿ ಡಿಸಿಎಂ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲೇ ಮಾಧ್ಯಮದವರಿಗೆ ನಮಸ್ಕಾರ ಹೊಡೆದಿದ್ದಾರೆ. ಸಂಜೆ ವೇಳೆ ಟಿವಿ ಹಾಕೋಕೆ ಬೇಸರವಾಗುತ್ತಿದೆ ಎಂದು ಅಸಹ್ಯ ಪಟ್ಟುಕೊಂಡಿದ್ದಾರೆ.
ಶಾಸಕ ಮುನೀರತ್ನರ ಬಂಧನವಾಗಿದೆ ಈ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಳಿದ ಮಾಧ್ಯಮದವರಿಗೆ ಉತ್ತರಿಸಿದ ಮಾಜಿ ಡಿಸಿಎಂ ಸಂಜೆ ಟಿವಿ ಹಾಕೋಂತಿದ್ದೆ ಈಗ ಟಿವಿ ಹಾಕೋದೆ ಬಿಟ್ಟಿದ್ದೇನೆ. ಅಸಹ್ಯ ಆಗಿದೆ. ತಾಯಿ, ಹೆಂಡತಿ ಬಗ್ಗೆ ಬಳಸುವ ಪದ ನೋಡಿದರೆ ಅಸಹ್ಯವಾಗಿದೆ. ಅನೇಕ ಮನೆಗಳಲ್ಲಿ ಟಿವಿ ಮಾರಲಾಗುತ್ತಿದೆ ಎಂಬ ಹೊಸ ಬಾಂಬನ್ನ ಸಹ ಸಿಡಿಸಿದ್ದಾರೆ.
ಮಾಧ್ಯಮದವರು ಬೆಳಿಗ್ಗೆಯಿಂದ ಸಂಜೆ ವರೆಗೆ ಅದೇ ಬರುತ್ತಿದೆ. ಬೇರೆ ವಿಷಯವಿಲ್ಲವಾ? ದರ್ಶನ್ ಸುದ್ದಿಸಾಕಪ್ಪ ಎನ್ನುವಂತಾಗಿದೆ. ಒಂದು ಟಿವಿಯಲ್ಲಿ ದರ್ಶನ್ ಸುದ್ದಿ ಬರ್ತಿದೆ ಎಂದು ಚಾನೆಲ್ ಚೇಂಜ್ ಮಾಡಿದ್ರು ಬೇರೆ ಚಾನೆಲ್‌ನಲ್ಲೂ ಅದೇ ಬರುತ್ತಿದೆ ಎಂದು ಹೇಳಿದರು.
ದರ್ಶನ್ ಇಲ್ಲವೆಂದರೆ ಪ್ರಜ್ವಲ್ ಸುದ್ದಿ ಬಿತ್ತರವಾಗುತ್ತಿತ್ತು ಎಂದು ಮಾಧ್ಯಮದವರು ಹೇಳಿದ ಮರು ಉತ್ತರಕ್ಕೆ ಈಶ್ವರಪ್ಪ ಮಾಧ್ಯಮದವರಿಗೆ ನಮಸ್ಕಾರ ಹೊಡೆದರು. ಸಾಕಪ್ಪೋ ಸಾಕು ಎಂದರು. ಹೀಗೆ ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪ ಹಾಸ್ಯ, ತಿಳಿ ಹೇಳುವ ಪ್ರಯತ್ನ ನಡೆಸಿದ್ದಾರೆ. ಬ