ಸುದ್ದಿಲೈವ್/ಹೊಳೆಹೊನ್ನೂರು
ರೈತರ ಮನೆ ಭಾಗಿಲಲ್ಲಿ ಒಣ ರಾಶಿ ಅಡಿಕೆ ತೂಕದಲ್ಲಿ ಮೋಸ ಮಾಡಿದ ವರ್ತಕನಿಗೆ ಬರೋಬ್ಬರಿ 20 ಲಕ್ಷ ದಂಡ ವಿಧಿಸಲಾಗಿದೆ.
ಸಮೀಪದ ಅರಹತೋಳಲಿನ ಅಡಿಕೆ ಬೆಳೆಗಾರರ ಮನೆಯೊಂದರಲ್ಲಿ ಸೋಮವಾರ ಕೈ ವ್ಯಾಪಾರಕ್ಕೆ ಬಂದಿದ ಸ್ಥಳೀಯ ವರ್ತಕ ತಟ್ಟೆಹಳ್ಳಿ ದಿಲೀಪ ಗಣಕೀಕೃತ ತಕ್ಕಡಿಯಲ್ಲಿ ಬೆಳೆಗಾರರಿಗೆ ಗಮನಕ್ಕೆ ಬಾರದಂತೆ ಒಂದು ಕ್ವಿಂಟಾಲ್‍ಗೆ 3 ಕೆಜೆ ಅಡಿಕೆ ಹೆಚ್ಚಿಗೆ ತೂಗಿ ಮೋಸ ಮಾಡಿ ಸ್ಥಳದಲ್ಲೆ ಸಿಕ್ಕಿಬಿದಿದ್ದಾನೆ. ಒಂದು ಕ್ವಿಂಟಾಲ್‍ಗೆ 200 ರೂಪಾಯಿ ಹೆಚ್ಚಿಗೆ ನೀಡುವುದಾಗಿ ಹೇಳಿ ಅಡಿಕೆ ಖರೀದಿಸಿದ್ದಾನೆ. ಖರೀದಿಸಿದ 45 ಅಡಿಕೆ ಚೀಲಗಳನ್ನು ಎರಡು ಬುಲೋರ್ ವಾಹನದಲ್ಲಿ ತುಂಬಲಾಗಿತ್ತು.
ಖರೀದಿಸಿದ ಅಡಿಕೆ ಮೌಲ್ಯ ಮುಂಗಡವಾಗಿ ನೀಡಿದ ಹಣಕ್ಕಿಂತ ಹೆಚ್ಚಾದ ಕಾರಣ ಒಂದಷ್ಟು ಹಣವನ್ನು ತರಲು ದಿಲೀಪ ವಾಪ್ಪಾಸ್ ತೆರಳಿದಾಗ ಅನುಮಾನಗೊಂಡ ಮಾಲೀಕರು ಒಂದು ಚೀಲ ಅಡಿಕೆಯನ್ನು ತಕ್ಕಡಿ ಮೇಲೆ ಇಟ್ಟಿದ್ದಾರೆ. ಯಾವುದೊ ಒಂದು ಚೀಲದಲ್ಲಿ ವ್ಯತ್ಯಾಸವಾಗಿರಬಹುದೆಂದು ಇನ್ನೊಂದೆರಡು ಚೀಲಗಳನ್ನು ಕೆಳಗಿಳಿಸಿ ತೂಕ ಮಾಡಿದ್ದಾರೆ. ವರ್ತಕ ತುಂಬಿದ ಎಲ್ಲಾ ಚೀಲಗಳಲ್ಲೂ 3-4 ಕೆ.ಜಿ ವ್ಯತ್ಯಾಸ ಕಾಣಿಸಿವೆ ಕೂಡಲೆ ಎಚ್ಚೆತ ಮಾಲೀಕರು ದಿಲೀಪ ಹಾಗೂ ಹಮಾಲಿಗಳನ್ನು ಅಲ್ಲೆ ಇರುವಂತೆ ಹೇಳಿ ಗ್ರಾಮಸ್ಥರಿಗೆ ಮೋಸದ ಬಗ್ಗೆ ಮಾಹಿತಿ ನೀಡಿದ್ದಾರೆ.
ಅರಹತೋಳಲಿನ ದೇವಸ್ಥಾನದಲ್ಲಿ ನಡೆದ ತೂಕದ ಮೋಸದ ಪಂಚಾಯಿತಿಯಲ್ಲಿ ಸೇರಿದ ಜನಸ್ತೋಮ.
ಮೋಸ ಮಾಡಿ ಸಿಕ್ಕಿಬಿದ್ದ ದಿಲೀಪನನ್ನು ಸುಮ್ಮನೆ ಬಿಡದ ಬೆಳೆಗಾರ ಗ್ರಾಮದ ದೇವಸ್ಥಾನ ಆವರಣಕ್ಕೆ ಕರೆಸಿ ಗ್ರಾಮಸ್ಥರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿದ್ದಾರೆ. ಪಂಚಾಯಿತಿಯಲ್ಲಿ ತೂಕದಲ್ಲಿ ನಾನು ಮೋಸ ಮಾಡಿಲ್ಲ ನಮ್ಮ ಹಮಾಲರು ಮೋಸ ಮಾಡಿದ್ದಾರೆಂದು ಹೇಳಿ ಪ್ರಕರಣದಲ್ಲಿ ನುಣುಚಿಕೊಳ್ಳಲು ಯತ್ನಸಿದ್ದಾನೆ. ತೂಕ ಮಾಡಿದ ಹಮಾಲರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದು ಕುಳಿತರು.
ಹಮಾಲರು ಪೋನ್ ಸ್ವಿಚ್ ಆಪ್ ಮಾಡಿಕೊಂಡಿದ್ದಾರೆಂದು ಹೇಳಿದರಿಂದ ಮತ್ತಷ್ಟು ಕೋಪಗೊಂಡ ಗ್ರಾಮಸ್ಥರು ದಿಲೀಪನೊಂದಿಗೆ ಮಾತಿನ ಚಕಮಕಿ ನಡೆಸಿದರು. ಗ್ರಾಮ ಸಮೀತಿಯವರ ತಿರ್ಮಾನದಂತೆ ತೂಕದಲ್ಲಿ ಮೋಸ ಮಾಡಿದ ದಿಲೀಪನಿಗೆ ಬರೋಬ್ಬರಿ 20 ಲಕ್ಷ ಹಣವನ್ನು ದಂಡ ರೂಪದಲ್ಲಿ ನೀಡುವಂತೆ ತಿರ್ಮಾನ ಹೇಳಿದ್ದಾರೆ. ಇನ್ನೂ ಮುಂದೆ ಗ್ರಾಮದಲ್ಲಿ ಅಡಿಕೆ ವಹಿವಾಟಿಗೆ ಬಾರದಂತೆ ಎಚ್ಚರಿಕೆ ನೀಡಿದರು.
ಗ್ರಾಪಂ ಸದಸ್ಯ ಸಂಗನಾಥ್, ಎ.ಆರ್ ಮಲ್ಲಪ್ಪ, ರಾಜಶೇಖರ್, ವೀರಭದ್ರಪ್ಪ, ಜಿ.ನಂದೀಶ್, ಸುರೇಶ್, ಮಹಾದೇವಪ್ಪ ಇತರರಿದ್ದರು.