ಸುದ್ದಿಲೈವ್/ಶಿವಮೊಗ್ಗ
ನಗರದ ಲಯನ್ ಸಫಾರಿಯಲ್ಲಿರುವ ಕರಡಿಗಳಿಗೆ ಸಿಹಿ ಸುದ್ದಿಯಿದೆ. ಹೊಸಮನೆಗೆ ಕರಡಿಗಳು ನಾಳೆ ಗೃಹಪ್ರವೇಶಿಸುತ್ತಿವೆ. ಶಿವಮೊಗ್ಗದ ಲಯನ್ ಸಫಾರಿಯಲ್ಲಿ ನಾಲ್ಕು ಕರಡಿಗಳಿವೆ. ಈ ನಾಲ್ಕು ಕರಡಿಗಳಿಗೆ ಹೊಸ ಮನೆಯ ಭಾಗ್ಯ ಲಭಿಸಿದೆ.
2800 ಸ್ಕ್ವಯರ್ ಮೀಟರ್ ನಷ್ಟು ಅಳತೆಯ ಸಫಾರಿ ಜಾಗದಲ್ಲಿ ಕರಡಿಗಳ ನೂತನ ಮನೆ ನಿರ್ಮಾಣವಾಗಿದೆ. ಕರಡಿಗಳು ಸ್ವಚ್ಛಂಧದಿಂದ ಓಡಾಡಿಕೊಂಡು ಇರಲು ಈ ಮನೆ ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಬೋನ್‌ನಿಂದ ಬಯಲಿನಂತಿರುವ ಜಾಗಕ್ಕೆ ಕರಡಿಗಳು ಶಿಫ್ಟ್ ಆಗಲಿವೆ.
ರಾಣಿ, ರ‌್ಯಾಂಬೋ, ಗಜೇಂದ್ರ ಮತ್ತು ಗಾಯಿತ್ರಿ ಎಂಬ ನಾಲ್ಕು ಕರಡಿಗಳು ಹೊಸ ಮನೆಯ ಭಾಗ್ಯ ಪಡೆದಿವೆ. ಈ ಮನೆಗಳಲ್ಲಿ ಬೋನ್ ಇರಲ್ಲ. ಬಯಲಿನಲ್ಲಿ ಎತ್ತರದ ಮೆಸ್‌ಗಳನ್ನ ಹೆಣೆಯಲಾಗಿವೆ. ಇದರಲ್ಲಿ ರಾಣಿ ಕರಡಿ ಇಡಿ ದೇಶಲ್ಲಿಯೇ ಹಿರಿಯದಾದ ಕರಡಿಯಾಗಿದೆ. ಈ ಕರಡಿಯ ಬಗ್ಗೆ ಹೇಳಲು ಮತ್ತೊಂದು ಐತಿಹಾಸಿಕ ಮೈಲುಗಲ್ಲನ್ನ ತಿರುವು ಹಾಕಬೇಕಿದೆ.
ಸುಮಾರು 45-50 ವರ್ಷಗಳ ಹಿಂದೆ ಶಿವಮೊಗ್ಗದ ಗಾಂಧಿ ಪಾರ್ಕ್ ಆಗಿನ ಜ್ಯೂ ಆಗಿದ್ದವು. ಗಾಂಧಿ ಪಾರ್ಕ್‌ನಲ್ಲಿ ಮರಿಯಾಗಿ ಬಂದಿದ್ದ ರಾಣಿ ಕರಡಿ ಪಾರ್ಕ್ ಮತ್ತು ಸಫಾರಿಯಲ್ಲಿ ಆದ ಬದಲಾವಣೆಗೆ ಸಾಕ್ಷಿಯಾಗುತ್ತಾ ಬಂದಿದೆ.
ಸಾಮಾನ್ಯವಾಗಿ ಕರಡಿ ಕಾಡಿನಲ್ಲಿ 25-30 ವರ್ಷ ಬದುಕುತ್ತಾವೆ. ಆದರೆ ಜ್ಯೂಗಳಲ್ಲಿ ಇವುಗಳ ಆಯಸ್ಸು 40 ಕ್ಕಿಂತ ಹೆಚ್ಚು ವರ್ಷ ಬದುಕಿದ ಉದಾಹರಣೆಯಿದೆ. ಮಧ್ಯ ಪ್ರದೇಶದಲ್ಲಿ ಒಂದು ಕರಡಿ 36 ವರ್ಷ ಬದುಕಿ ಅತ್ಯಂತ ಹಳೇಯ ಕರಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆ ಕರಡಿ ಈಗ ಇಲ್ಲ. ಹಾಗಾಗಿ ಜ್ಯೂನಲ್ಲಿರುವ ಅತ್ಯಂತ ಹಳೆಯ ಕರಡಿಎಂದರೆ ಈಗ ರಾಣಿ ಒಂದೆ. ಇವುಗಳ ಗೃಹಪ್ರವೇಶ ನಾಳೆ ಜ್ಯೂನಲ್ಲಿರುವವರಿಗೆ ಸಂಭ್ರಮನೂ ಹೌದು.