ಸುದ್ದಿಲೈವ್/ಭದ್ರಾವತಿ
ಭದ್ರಾವತಿಯ 52 ನೇ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆ ಇಂದು ನಡೆದಿದೆ. ವಿಸರ್ಜನಾ ಮೆರವಣಿಗೆಯನ್ನ ಮಧ್ಯಾಹ್ನದ ವೇಳೆ ಚಾಲನೆ ದೊರೆತಿದೆ.
ಹೊಸಮನೆಯಲ್ಲಿರುವ ಈ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಶಾಸಕರ ಸಹೋದರ ಶಿವಕುಮಾರ್, ಪುತ್ರರು, ಕೆಂಚನಹಳ್ಳಿ ಕುಮಾರ ಮೊದಲಾದವರು ಚಾಲನೆ ನೀಡಿದರು.
ಹೊಸಮನೆಯಿಂದ ಹೊರಟ ಮೆರವಣಿಗೆ ರಂಗಪ್ಪ ಸರ್ಕಲ್, ಮಾಧವಾಚಾರ್ ಸರ್ಕಲ್, ಬಸ್‌ಸ್ಟ್ಯಾಂಡ್ ಹುತ್ತಕಾಲೋನಿ, ನಂತರ ವಾಪಾಸ್ ಆಗಿ ಗಾಂಧಿಸರ್ಕಲ್ ಹಾಗೂ ತರೀಕೆರೆ ರಸ್ತೆಗೆ ಬಂದು ಭದ್ರ ನದಿಗೆ ಗಣಪತಿಯನ್ನ ವಿಸರ್ಜಿಸಲಾಗುತ್ತದೆ.