Girl in a jacket

ಶ್ರೀ ನಾರಾಯಣಗುರುಗಳ ಪುಣ್ಯತಿಥಿ ಅಂಗವಾಗಿ ಗೀತ ಗಾಯನ ಕಾರ್ಯಕ್ರಮ


ಸುದ್ದಿಲೈವ್/ಶಿವಮೊಗ್ಗ


ಶ್ರೀ ನಾರಾಯಣ ಗುರುಗಳ ಪುಣ್ಯ ತಿಥಿ ಅಂಗವಾಗಿ ಗುರುಗಳ ನುಡಿ ನಮನ ಕಾರ್ಯಕ್ರಮ ನಿನ್ನೆ ಅಣ್ಣಾನಗರ 3 ನೇ ತಿರುವಿನಲ್ಲಿರುವ ಭವನದಲ್ಲಿ ನಡೆಯಿತು. 


ಗೀತಾ ಗಾಯನ ಏರ್ಪಡಿಸಲಾಗಿತ್ತು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವ ಅಧ್ಯಕ್ಷರಾದ ದಿವಾಕರನ್ ಅದ್ಯಕ್ಷತೆಯಲ್ಲಿ ಶ್ರೀನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಕಾರ್ಯಕ್ರಮದಲ್ಲಿ ಭದ್ರಾವತಿ ವಾಸು ಇವರ ತಂಡದವರಿಂದ ಗೀತಾ ಗಾಯನ ನಡೆಸಲಾಯಿತು. 


ಕಾರ್ಯಕ್ರಮದಲ್ಲಿ ಎನ್. ಡಿ. ರವಿಯವರ ಗಾಯನ ಎಲ್ಲರ ಗಮನ ಸೆಳೆಯಿತು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಅಯ್ಯಪ್ಪ ದೇವಸ್ಥಾನದ ಉಪಾಧ್ಯಕ್ಷರು ಶ್ರೀ ಅನಿಲ್ ರವರು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು ಕಾರ್ಯಕ್ರಮದಲ್ಲಿ ಕುಮಾರ್, ಶಿವಕುಮಾರ್, ಪ್ರಕಾಶ್. 


ರಘು, ಸತ್ಯನಾರಾಯಣ, ಕಲಾವಿದ ಸತ್ಯನ್ ಮನೋಜ್,ಹಾಗೂ ಭದ್ರಾವತಿ ವಾಸು ತಂಡದವರು ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾದರು ಈ ದಿನದ ಪೂಜಾ ಕಾರ್ಯವನ್ನು ಕುಲಕರ್ಣಿ ಕುಟುಂಬ ವಹಿಸಿಕೊಂಡು ಕಾರ್ಯಕ್ರಮದ ಯಶಸಿಗೆ ಕಾರಣಕರ್ತರಾದರು ಎಲ್ಲಾ ಕಾರಣಕರ್ತರಿಗೆಲ್ಲರಿಗೂ ಗುರುಕೃಪೆ ಲಭಿಸಲಿ ವಂದನೆಗಳು 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು