ಶುಕ್ರವಾರ, ಸೆಪ್ಟೆಂಬರ್ 6, 2024

ಶ್ರೀಗಂಧ ಕಡಿತಲೆ-ಓರ್ವ ಬಂಧನ




ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ ತಾಲೂಕು ಆಯನೂರು ಹೋಬಳಿ ಕೂಡಿ ಗ್ರಾಮ ಸರ್ವೆ ನಂಬರ್ 33ರ ಸೀಗೆಹಳ್ಳ ಡ್ಯಾಮ್ ನ ಹತ್ತಿರ ಮೂರು ಶ್ರೀಗಂಧ ಮರಗಳನ್ನು ಅಕ್ರಮ ಕಡಿತಲೆ ಮಾಡಿದ  ಆರೋಪಿಯನ್ನ ಹಣಗೆರೆ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿಗಳು ಸಿಬ್ಬಂದಿಗಳು ಬಂಧಿಸಿದ್ದಾರೆ.  


ಅರಣ್ಯಾಧಿಕಾರಿ ಅರವಿಂದ್ ಪಿ ಹಾಗೂ ಅವರ ಸಿಬ್ಬಂದಿಗಳಿಂದ ನಡೆದ ಕಾರ್ಯಾಚರಣೆಯಲ್ಲಿ ಕಲ್ಲುಬಂಡೆ ಮಂಜಪ್ಪ ಬಿನ್ ಸಿದ್ದಪ್ಪ, ಅರನೆಲ್ಲಿ ಗ್ರಾಮವಾಸಿ ಯನ್ನು ಬಂಧಿಸಿ ಅರಣ್ಯ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಿ ಘನ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. 


ಪ್ರಕರಣದಲ್ಲಿ ತಲೆ ಮರೆಸಿಕೊಂಡ ರಾಮಕೃಷ್ಣ ಬಿನ್ ಹನುಮಂತಯ್ಯ ಅರನೆಲ್ಲಿ ಗ್ರಾಮ ವಾಸಿ ಹಾಗೂ ವಿಜಯ್ ಕುಮಾರ್ ಬಿನ್ ಉಮೇಶ ಆರನಲ್ಲಿ ಇವರುಗಳ ಬಂಧನಕ್ಕೆ ಅರಣ್ಯ ಅಧಿಕಾರಿಗಳು ಬಲೆ ಬೀಸಿದ್ದಾರೆ. 


ಸದರಿ ಕಾರ್ಯಾಚರಣೆಯಲ್ಲಿ ಅರವಿಂದ್ ಪಿ RFO. ಶಿವಕುಮಾರ್ Dyrfo. ಕೊಟ್ರೇಶ ದಾನಮ್ಮನವರ್ (BFO). ಮಂಜುನಾಥ್, ಗಿರೀಶ್, ಮಾರುತಿ, ರಾಕೇಶ್ (FW) ರವರಿಗಳು ಭಾಗಿಯಾಗಿರುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ