ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ರೌಡಿಶೀಟರ್ ಯಾಸೀನ್‌ನ ಭಾವ ಚಿತ್ರ ಹಿಡಿದು ಆತನ ಪರ ಘೋಷಣೆ ಕೂಗಿದ್ದಾರೆ. ಯುವಕರ ವಾಟ್ಸಪ್ ಮತ್ತು ಫೆಸ್ ಬುಕ್ ಸ್ಟೇಟಸ್‌ನಲ್ಲಿ ಈ ವಿಡಿಯೋ ಭರ್ಜರಿ ವೈರಲ್ ಆಗಿದೆ.
ಜಿಂದಾಬಾದ್, ಜಿಂದಾಬಾದ್, ಯಾಸೀಸ್ ಭೈ ಜಿಂದಾಬಾದ್, ಯಾಸೀನ್ ಡಾನ್ ಜಿಂದಾಬಾದ್, ಜಬ್ ತಕ್ ಸೂರಜ್ ಚಾಂದ್ ರಹೇಗ, ಯಾಸೀನ್ ಬೈ ಜಿಂದಾರಹೇಗ, ಜೊತೆಗೆ ಅವರ ಚಿಕ್ಕಪ್ಪನ ಹೆಸರಿನ ಘೋಷಣೆ ಕೂಗಲಾಗಿದೆ. ಕೆಫ್ ಬೈ ಜಿಂದಾಬಾದ್ (ಕೋಳಿಫೈಯಾಜ್) ಜಿಂದಾಬಾದ್ ಎಂದು ಕೂಗಲಾಗಿದೆ.
ನಿನ್ನೆ ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಯುವಕರು ಎಎ ವೃತ್ತದಿಂದ ಲಷ್ಕರ್ ಮೊಹಲ್ಲಾದಲ್ಲಿರುವ ಯಾಸೀನ್ ಅವರ ಚಿಕನ್ ಅಂಗಡಿಯ ಬಳಿ ಯಾಸೀನ್ ಅವರ ಭಾವ ಚಿತ್ರ ಹಿಡಿದು ಘೋಷಣೆಕೂಗಾಗಿದೆ.
ಹಳೇ ವೈಷಮ್ಯದ ಹಿನ್ನೆಲೆ ಗುಂಪುಗಳ ನಡುವೆ ಮೇತಿಂಗಳಲ್ಲಿ ಮಾರಾಮಾರಿ ನಡೆದಿತ್ತು. ಈ ವೇಳೆ ಗಾಯಗೊಂಡಿದ್ದ ಸೇಬು (32) ಹಾಗೂ ಗೌಸ್ (30) ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ ಮೃತಪಟ್ಟ ಖುರೇಷಿಯ ಗುಂಪು ಹಾಗೂ ಸುಹೇಲ್ ಗುಂಪುಗಳ ನಡುವೆ ಮೊದಲು ಅಣ್ಣಾ ನಗರದಲ್ಲಿ ಗಲಾಟೆ ಪ್ರಾರಂಭವಾಗಿತ್ತು. ಬಳಿಕ ಹಿಂಬಾಲಿಸಿಕೊಂಡು ಬಂದು ಲಷ್ಕರ್ ಮೊಹಲ್ಲಾದಲ್ಲಿ ಗಲಾಟೆ ಮುಂದುವರಿಸಿದ್ದಾರೆ.
ಖುರೇಷಿ ಗುಂಪು ಸೇಬು ಹಾಗೂ ಗೌಸ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ, ಚಪ್ಪಡಿ ಕಲ್ಲು ಎತ್ತಿಹಾಕಿ ಕೊಲೆಗೈದು ಬಳಿಕ ಪರಾರಿಯಾಗಿದ್ದರು. ಘಟನೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೀವ್ರ ತನಿಖೆ ಮುಂದುವರಿದಿತ್ತು
ಯಾಸಿನ್ ಖುರೇಶಿ ಗ್ಯಾಂಗ್‌ನ ಯಾಸಿನ್ ಖೂರೇಶಿ ಈ ಗ್ಯಾಂಗ್ ವಾರ್ ನಲ್ಲಿ ಹತ್ಯೆಯಾಗಿದ್ದನು. ಈಗ ಆತನಕ ಅಭಿಮಾನಿಗಳು ಅಭಿಮಾನ ತೋರಿದ್ದಾರೆ..