ಸುದ್ದಿಲೈವ್/ಭದ್ರಾವತಿ
ಈದ್ ಮಿಲಾದ್ ಹಬ್ಬದ ಅಂಗವಾಗಿ ಗುರುವಾರ ಮಧ್ಯಾಹ್ನ ನಗರದ ವಿವಿಧ ಬಡಾವಣೆಗಳಿಂದ ಹೊಳೆಹೊನ್ನೂರು ರಸ್ತೆಯ ಕ್ರಾಸ್ ನಿಂದ ಮುಸ್ಮಿಂ ಬಾಂಧವರು ಮೆರವಣಿಗೆ ನಡೆಸಿದರು.
ಸೆಪ್ಟೆಂಬರ್ 16 ರಂದು ಈದ್ ಮಿಲಾದ್ ಹಬ್ಬ ಅಚರಣೆ ದಿನ ನಡೆಯಬೇಕಿದ್ದ ಮೆರವಣಿಗೆ ಭಾನುವಾರ ಹಿಂದು ಮಹಾಸಭಾ ಗಣಪತಿ ವಿಸರ್ಜನೆ ಅಂಗವಾಗಿ ಗುರುವಾರ ಮೆರವಣಿಗೆ ನಡೆಸಲಾಯಿತು.
ನಗರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿಕೆ. ಮೋಹನ್, ನಗರಸಭಾ ಉಪಾಧ್ಯಕ್ಷ ಮಣಿ, ನಗರಸಭಾ ಸದಸ್ಯರು, ಅಂಜುಮಾನ್ ಮುಸ್ಲಿಮೀನ್ ಇಸ್ಲಾಮೀನ್ ಸಮಿತಿ ಅಧ್ಯಕ್ಷ ಮುರ್ತುಜಾಖಾನ್ ಬಿಎಸ್. ಗಣೇಶ್ ಮುಖಂಡರಾದ ಬಾಬಾಜಾನ್ ಎಬಿಟಿ. ಬಾಬು ಮೆರವಣಿಗೆಯ ಮುಖಂಡತ್ವ ವಹಿಸಿದ್ದರು.
ಮೆರವಣಿಗೆಯಲ್ಲಿ, ಗುಂಬಜ್ ಗಳು, ದೊಡ್ಡ ಬಾವುಟಗಳು, ಸ್ಥಬ್ದ ಚಿತ್ರಗಳು, ಅಲ್ಲಾಹುನ ಸಂದೇಶ ಸಾರುವ ಹಾಡುಗಳು, ಹಜ್ ರೀತಿಯ ಸ್ಥಬ್ದ ಚಿತ್ರ ಮಸೀದಿ ಹೋಲುವ ಸ್ಥಬ್ದ ಚಿತ್ರಗಳು ವಿವಿಧ ರೀತಿಯ ವೇಷಭೂಷಣಗಳನ್ನು ಧರಿಸಿದವರು ಸೇರಿದಂತೆ ಹಲವಾರು ರೀತಿಯ ಸ್ಥಬ್ದ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಪೋಲಿಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಮೆರವಣಿಗೆ ಸಾಗುವ ಮುಖ್ಯರಸ್ತೆಯಲ್ಲಿ ಜ್ಯೂಸ್ ಮೆರವಣಿಗೆಯಲ್ಲಿದ್ದವರಿಗೆ ಚಾಕಲೇಟ್ ವಿತರಿಸಿದರು.ಈದ್ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಮೆರವಣಿಗೆ ಮಧ್ಯಾಹ್ನದ ನಂತರ ಪ್ರಾರಂಭಿಸಲಾಯಿತು. ತರೀಕೆರೆ ರಸ್ತೆಯ ಗಾಂಧಿ ಸರ್ಕಲ್ ನಲ್ಲಿ ಜಗಮಗಸುವ ಬಣ್ಣದ ಲೈಟ್ ಗಳೊಂದಿಗೆ ಡಿಜೆಯನ್ನು ಹಾಕಿ ಯುವಕರು ನೃತ್ಯ ಮಾಡಿದರು. ರಕ್ಷಣಾಧಿಕಾರಿ ಮಿಥನ್ ಕುಮಾರ್, ಡಿ.ವೈ.ಎಸ. ಪಿ. ಇನ್ಸ್ ಪೆಕ್ಟರ್ ಗಳು, ಸರ್ಕಲ್ ಇನ್ಸ್ ಪೆಕ್ಟರ್ ಗಳು, ಸಬ್ ಇನ್ಸ್ ಪೆಕ್ಟರ್ ಗಳು ಸೂಕ್ತ ಬಂದೋಬಸ್ತ್ ನ ಎರ್ಪಾಡು ನಿರ್ವಹಿಸಿದರು.