ಸುದ್ದಿಲೈವ್/ಶಿವಮೊಗ್ಗ
ಇಡೀ ರಾಜ್ಯದ ಗಮನ ಸೆಳೆದಿದ್ದ ಮಲವಗೊಪ್ಪ ಗಣೇಶನ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ನನ್ನ ಶಾಲೆ ನನ್ನ ಜವಾಬ್ದಾರಿ ಎನ್ನುವ ಧ್ಯೇಯವನ್ನು ಇಟ್ಟುಕೊಂಡು ಸರ್ಕಾರಿ ಶಾಲೆಯನ್ನು ಉಳಿಸುವ ಜಾಗೃತಿಯೊಂದಿಗೆ ಮಲವಗೊಪ್ಪದ ಮೂರನೇ ತಿರುವಿನ ಓಂ ಶ್ರೀ ಯುವಕರ ವಿದ್ಯಾಗಣಪತಿ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ವಿಸರ್ಜನಾ ಮೆರವಣಿಗೆಯಲ್ಲಿ ಮಹಿಳೆಯರ ನೃತ್ಯ ಗಮನ ಸೆಳೆಯಿತು.ಜೊತೆಗೆ ಯುವಕರ ಡ್ಯಾನ್ಸ್ ನೋಡುಗರ ಗಮನ ಸೆಳೆಯಿತು. ಸರ್ಕಾರಿ ಶಾಲೆಯ ಉಳಿಸುವ ಜಾಗೃತಿ ಕಾರ್ಯಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಹ ಮೆಚ್ಚಗೆ ವ್ಯಕ್ತಪಡಿಸಿದ್ದರು.
ಮೆರವಣಿಗೆಯಲ್ಲಿ ಸಿಡಿಮದ್ದನ್ನು ಸಿಡಿಸಿ. ಗಣಪತಿ ಪರ ಘೋಷಣೆಗಳನ್ನು ಕೂಗಿ ಸಡಗರ ಸಂಭ್ರಮದಿಂದ ಗಣಪತಿ ವಿಸರ್ಜನೆ ಮಾಡಿದರು. ಈ ವೇಳೆಯಲ್ಲಿ ಸಂಘದ ಯುವಕರು ಊರಿನ ಗ್ರಾಮಸ್ಥರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.