ಸುದ್ದಿಲೈವ್/ಶಿವಮೊಗ್ಗ
ಸಂಸದನಾಗಿ ಶಿವಮೊಗ್ಗಕ್ಕೆ ಮೊದಲನೇ ಬಾರಿಗೆ ಬಂದಿರುವೆ ಎಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಸ್ಥೆ 100 ವರ್ಷ ಪೂರೈಸಿದೆ ನಮ್ಮ ಕುಟುಂಬವೇ ಇದನ್ನ ಉದ್ಘಾಟಿಸಿರುವೆ. ಸಹಕಾರ ಸಂಘಟ ವಿಕಾಸಿತ ಭಾರತ್ ನಲ್ಲಿ ಗಟ್ಟಿಯಾಗಲಿದೆ ಎಂದರು.
ಮೈಸೂರು-ಕೊಡಗು ಆರ್ಗನಿಕ್ ಅಭಿವೃದ್ಧಿ ಬೇಕು. ಪಾರಂಪರಿಕ ಅಭಿವೃದ್ಧಿಯ ಅಗತ್ಯವಿದೆ. ಸಂರಕ್ಷಣ ಆಗಬೇಕಿದೆ. ಪ್ರವಾಸೋದ್ಯಮ ಆರ್ಥಿಕವಾಗಿ ಅವಲಂಭಿಸಿದೆ. ಮೈಸೂರಿನಲ್ಲಿ ಏರ್ ಪೋರ್ಟ್ ಆಗಬೇಕಿದೆ 46 ಎಕರೆ ಭೂಸ್ವಾಧೀನ ಆಗಬೇಕಿದೆ ಹೈವೆ, ಲೈಟ್ ಕಂಬಗಳು ಶಿಫ್ಟ್ ಆಗಬೇಕಿದೆ. ನಂತರ ಕ್ರೆಡಿಲ್ ನಿಂದ ಏರ್ ಪೋರ್ಟ್ ನಿರ್ಮಿಸಲಾಗುವುದು ಎಂದರು.
ನಾಲ್ಕು ಪ್ಯಾಕೇಜ್‌ನಲ್ಲಿ ಮೈಸೂರು ಕೊಡುಗು ಅಭಿವೃದ್ಧಿಯಾಗಬೇಕಿದೆ. ಬೆಳಗೋಳ ರಸ್ತೆ ಅಭಿವೃದ್ಧಿ ಆಗಲಿದೆ. ಮೈಸೂರಿನಲ್ಲಿ ಮತ್ತೊಂದು ರೈಲು ಉದ್ಘಾಟನೆ ಆಗಲಿದೆ ಎಂದ ಯದುವೀರ್ ಮೂಡಾ ಹಗರಣದಲ್ಲಿ ಎಫ್ಐಆರ್ ಆಗಿದೆ ಪಾರದರ್ಶಕ ತನಿಖೆಯಾಗಬೇಕು ಹಾಗಾಗಿ ಸಿಎಂ ರಾಜೀನಾಮೆ ನೀಡಬೇಕು ಎಂದರು.
ಕೇಂದ್ರ ಸಚಿವೆ ನಿರ್ಮಲ ಸೀತಾರಾಮ ಅವರ ಮೇಲೆ ಎಫ್ಐಆರ್ ಆಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಯವೇನು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಂಸದ ಯದುವೀರ್ ಕಾನೂನು ಕ್ರಮ ಆಗಲಿದೆ. ಮೊದಲು ಸಿಎಂ ರಾಜೀನಾಮೆ ನೀಡಲಿ ಎಂದರು.
ವಿಐಎಸ್ಎಲ್ ಅಭಿವೃದ್ಧಿ ಬಗ್ಗೆ ಮಾತನಾಡಿದ ಸಂಸದರು, ಕಾರ್ಖಾನೆಗೆ ಕೇಂದ್ರ ಸಚಿವ ಕುಮಾರ ಸ್ವಾಮಿ ಭೇಟಿ ನೀಡಿದ್ದಾರೆ. ಇದನ್ನ ನಮ್ಮ ಕುಟುಂಬ ಆರಂಭಿಸಿತ್ತು. ಅದನ್ನ ಉಳಿಸುವ ಕೆಲಸ ಆಗಲಿದೆ. ವಿಐಸ್ಎಲ್ ಹೆಮ್ಮೆಯ ಸಂಸ್ಥೆಯಾಗಿದೆ. ಅದಕ್ಕೆ ನಮ್ಮ ಪ್ರೋತ್ಸಾಹವಿದೆ ಎಂದರು.
ಸಹಕಾರ ಕಾಯ್ದೆ ಹೊಸರೂಪದಲ್ಲಿ ಬರ್ತಾ ಇದೆ ಪ್ರತಿ ಪಂಚಾಯಿತಿಯಲ್ಲಿ ಸಹಕಾರ ಸಂಸ್ಥೆಗಳು ಆರಂಭವಾಗಲಿದೆ. ಪ್ರಬಲ ಸ್ಥಂಭವಾಗಲಿದೆ ಎಂದರು. ಚಾಮುಂಡೇಶ್ವರ ಪ್ರಾಧಿಕಾರ ಬೇಡ ಎಂದಿದ್ವಿ. ನ್ಯಾಯಾಲಯದಲ್ಲಿದೆ ಮುಂದೇನಾಗಲಿದೆ ಕಾದು ನೋಡೋಣ ಎಂದರು.