ಸುದ್ದಿಲೈವ್/ಶಿವಮೊಗ್ಗ
ಎನ್ ಟಿ ರಸ್ತೆಯ ಗಣಪತಿ ಪ್ರತಿಷ್ಠಾನದ ರಾಜಬೀದಿ ಉತ್ಸವ ನಾಳೆ ಸಂಜೆ 4 ಗಂಟೆಗೆ ಆರಂಭವಾಗಲಿದೆ. ಹಿಂದೂ ಮಹಾಸಭ ಗಣಪತಿಯ ರೀತಿಯಲ್ಲಿ ಶೋಭಾಯಾತ್ರೆ ಉತ್ಸವ ನಡೆಯಲಿದೆ.
ನ್ಯೂ ಮಂಡ್ಲಿ, ಹಳೇ ಮಂಡ್ಲಿ, ಕುರುಬರ ಪಾಳ್ಯ, ತುಂಗನಗರದ ಮೂಲಕ ಬೈಪಾಸ್ ಬಳಿ ನದಿಯ ಬಳಿ ವಿಸರ್ಜಿಸಲಾಗುತ್ತದೆ. ರಾಜಬೀದಿ ಉತ್ಸವದಲ್ಲಿ ಕೋಲಾರದಿಂದ ಡೊಳ್ಳು ಕರೆಯಿಸಲಾಗುತ್ತಿದೆ. ಕೋಲಾರದ ಡೊಳ್ಳು ಸದ್ದಿಗೆ ಯುವಕರ ಕುಣಿತ ನಡೆಯಲಿದೆ.
ಹಾದಿ ಉದ್ದಕ್ಕೂ ಡಿಜೆ ಲೈಟ್ಸ್ ಹಾಕಲಾಗುತ್ತಿದೆ. ಡಿಜೆ ಲೈಟ್ಸ್, ಡೊಳ್ಳು ವಾದ್ಯಕ್ಕೆ ಯುವಕರ ಸ್ಟೆಪ್ಸ್ ಹಾಕಲಿದ್ದಾರೆ. ವಿಜೃಂಭಣೆಯ ಶೋಭಾಯಾತ್ರೆ ನಾಳೆ ಎನ್ ಟಿ ರಸ್ತೆಯ ರೇಣುಕಾಂಬ ಯುವಕರ ಸಂಘದವತಿಯಿಂದ ನಡೆಯಲಿದೆ.
ಮಂಡ್ಲಿ ಗಣಪತಿಗೆ ಈ ಬಾರಿ ಕಮಾನು ಕಟ್ಟಿ ವೀರಾಂಜನೇಯನ ಕಲಾಕೃತಿ ಕೂರಿಸಲಾಗಿತ್ತು. ರಾಮ ಲಕ್ಷ್ಮಣರನ್ನ ಆಂಜನೇಯ ಸ್ವಾಮಿ ಹೊತ್ತು ಲಂಕೆ ಹಾರುವ ಕಲಾಕೃತಿಯನ್ನ ಜೀವನ್ ನಿರ್ಮಿಸಿದ್ದರು.