ಸುದ್ದಿಲೈವ್/ಶಿವಮೊಗ್ಗ
ಮಾರನಮಿ ಬೈಲು ಬಳಿ ಆಯುಧ ಹಿಡಿದು ಗಲಾಟೆ ಮಾಡಿಕೊಂಡ ಮೂವರು ಯುವಕರನ್ನ ದೊಡ್ಡಪೇಟೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ವೈಯುಕ್ತಿಕ ಕಾರಣಗಳಿಗೆ ಮೂವರು ಸಾರ್ವಜನಿಕ ಸ್ಥಳದಲ್ಲಿ ಬಡಿಕೊಂಡ ಹಿನ್ನಲೆಯಲ್ಲಿ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.
ಎನ್‌ಟಿ ರಸ್ತೆಯ ನಿವಾಸಿ ಆನಂದ ಎಂಬಾತ ಆಟೋ ಡ್ರೈವರ್ ಆಗಿದ್ದಾನೆ. ಈತ ವಿಶ್ವನಾಥ ಎಂಬ ಯುವಕನಿಗೆ 12 ಇಂಚು ಚಾಕು ಹಿಡಿದು ಕೊಲೆ ಮಾಡುವ ಉದ್ದೇಶದಿಂದ ಮಾರನಮಿ ಬೈಲಿನದ್ದ ವಿಶ್ವನಾಥನ ಮೇಲೆ ದಾಳಿಗೆ ಮುಂದಾಗಿದ್ದಾನೆ.
ಅಲ್ಯುಮಿನಿಯಂ ಫ್ಯಾಬ್ರಿಕ್ ಕೆಲಸ ಮಾಡಿಕೊಢಿರುವ ವಿಶ್ವನಾಥನು ಸಹ ತನ್ನ ಜೊತೆಗಿದ್ದ ರಾಘವೇಂದ್ರ ಎಂಬಾತನೊಂದಿಗೆ ಸೇರಿ ರಸ್ತೆಯ ಬದಿ ನಿಂತಿದ್ದ ಕಾರಿನ ಗ್ಲಾಜನ್ನ ಒಡೆದು ಹಾಕಿರುತ್ತಾನೆ. ಈ ಜಗಳವನ್ನ ಮುಜೀಬ್ ಎಂಬಾತ ಯುವಕ ಜಗಳ ಬಿಡಿಸಲು ಯತ್ನಿಸಿರುತ್ತಾನೆ.
ಈ ಪ್ರಕರಣದಲ್ಲಿ ಆನಂದ, ವಿಶ್ವನಾಥ ಹಾಗೂ ರಾಘವೇಂದ್ರ ಗಲಾಟೆ ಮಾಡಿಕೊಂಡಿರುವ 3 ನಿಮಿಷ 41 ಸೆಕೆಂಡಿನ ವಿಡಿಯೋವೊಂದು ದೊಡ್ಡಪೇಟೆ ಪೊಲೀಸರೊಬ್ಬರ ವಾಟ್ಸ್‌ಪ್‌ಗೆ ಬಂದಿರುತ್ತದೆ. ವಾಟ್ಸಪ್ ವಿಡಿಯೋವನ್ನ ಪರಿಶೀಲಿಸಿದಾಗ ಯುವಕರಬಡಿದಾಟ ಕಂಡು ಬಂದಿದೆ.
ಆನಂದ, ವಿಶ್ವನಾಥ್ ಮತ್ತ ರಾಘವೇಂದ್ರರು ಸಾರ್ವಜನಿಕರಿಗೆ ಉಪಟಳ ನೀಡುತ್ತ ಭಯದ ವಾತಾವರಣ ನಿರ್ಮಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. ಈ ಮೂವರ ನಡುವೆ ನಡೆದ ಹಣದ ವ್ಯವಹಾರಗಳು ಸಾರ್ವಜನಿಕ ಸ್ಥಳದಲ್ಲಿ ಬಡಿದಾಡುವಂತೆ ಮಾಡಿದೆ. ಸುಮೀಟೋ ಪ್ರಕರಣ ದಾಖಲಾಗುವಂತೆ ಮಾಡಿದೆ.