ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಸಕ್ರಬೈಲಿನ ಆನೆಗಳು ದಸರಾ ಹಬ್ಬದ ಅಂಬಾರಿ ಹೋರುವ ಸಾಧ್ಯತೆಗಳು ಕಡಿಮೆ ಅಂಬಾರಿ ಹೋರಿದರೆ ಗಂಡಾನೆಗಳೆ ಹೋರಬೇಕಾಗಿರುವುದರಿಂದ ಹಲವು ಗೊಂದಲಗಳು ಸೃಷ್ಠಿಯಾಗಿತ್ತು.
ಆದರೆ ಈ ಗೊಂದಲಗಳ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಕ್ರೆಬೈಲಿನ ಆನೆಗಳು ಪಾಲ್ಗೊಳ್ಳಲು ಅನುಮತಿ ನೀಡಿದ್ದಾರೆ. ಈ ಅನುಮತಿಗೆ ಕಾಂಗ್ರೆಸ್ ನ ಮಾಜಿ ಕಾರ್ಪರೇಟರ್ ಹೆಚ್ ಸಿ ಯೋಗೀಶ್ ಅವರ ಶ್ರಮವನ್ನ ಮರೆಯುವಂತಿಲ್ಲ.
ಶಿವಮೊಗ್ಗ ದಸರಾ ಜಂಬೂಸವಾರಿಗೆ ಆನೆಗಳನ್ನು ನೀಡಿ ಆದೇಶಿಸಿರುವ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ ಬಿ ಖಂಡ್ರೆ ರವರಿಗೆ ಯೋಗೀಶ್ ಹೃತ್ಪೂರ್ವಕ ಧನ್ಯವಾದಗಳನ್ನ ಸಲ್ಲಿಸಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಡೆಯಲಿರುವ ವಿಜೃಂಭಣೆಯ ದಸರಾ ಕಾರ್ಯಕ್ರಮಕ್ಕೆ ಹೆಮ್ಮೆಯ ಬೆಳ್ಳಿ ಚಾಮುಂಡೇಶ್ವರಿ ದೇವಿಯ ಅಂಬಾರಿ ಮೆರವಣಿಗೆಗೆ ಈ ಬಾರಿಯೂ ಆನೆಗಳನ್ನು ಒದಗಿಸಿಕೊಡುವಂತೆ ಮಾನ್ಯ ಅರಣ್ಯ ಸಚಿವರಾದ ಶ್ರೀ ಈಶ್ವರ ಬಿ ಖಂಡ್ರೆ ರವರಿಗೆ ಬೆಂಗಳೂರಿನ ವಿಕಾಸಸೌಧದ ಸಚಿವರ ಕಚೇರಿಯಲ್ಲಿ ಭೇಟಿ ಮಾಡಿ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಹೆಚ್ ಸಿ ಯೋಗೇಶ್ ರವರು ಮನವಿಯನ್ನು ನೀಡಿದ್ದರು.
ಮನವಿಯನ್ನು ಪರಿಶೀಲಿಸಿ ಕೂಡಲೇ ಪ್ರಧಾನ ಮುಖ್ಯ, ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಪಡೆ ಮುಖ್ಯಸ್ಥರು ಅರಣ್ಯ ಇಲಾಖೆ ಇವರುಗಳಿಗೆ ಶಿವಮೊಗ್ಗ ನಗರ ಮಹಾನಗರ ಪಾಲಿಕೆ ವತಿಯಿಂದ ನಡೆಯಲಿರುವ ಜಂಬುಸವಾರಿಗೆ ಆನೆಯನ್ನು ಒದಗಿಸಲು ಸೂಚಿಸಿದರು,
ಅದರಂತೆ ಇಂದು ರಾಜ್ಯ ಸರ್ಕಾರದಿಂದ ಈ ಬಾರಿ 12-10-2024 ರಂದು ನಡೆಯಲಿರುವ ಶಿವಮೊಗ್ಗ ದಸರಾ ಜಂಬುಸವಾರಿ ಮೆರವಣಿಗೆಗೆ ಆನೆಗಳನ್ನು ಒದಗಿಸುವಂತೆ ಆದೇಶ ನೀಡಿರುವ ಮಾನ್ಯ ಅರಣ್ಯ ಸಚಿವರಿಗೆ ಯೋಗೀಶ್ ಹೃತ್ಪೂರ್ವಕ ಧನ್ಯವಾದಗಳನ್ನ ಸಲ್ಲಿಸಿದ್ದಾರೆ.