Girl in a jacket

ವೀರಭದ್ರನ ಅವತಾರ ತಾಳಲೇಬೇಕಿದೆ-ಡಾ.ಶಿವಮೂರ್ತಿ ಶಿವಾಚಾರ್ಯ

 


ಸುದ್ದಿಲೈವ್/ಶಿವಮೊಗ್ಗ


ಅವಶ್ಯಕತೆ ಬಿದ್ದರೆ ವೀರಭದ್ರನ ಅವತಾರ ತಾಳಲೇ ಬೇಕಿದೆ ಎಂದು ಸಿರಿಗೆರ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಹೇಳಿದ್ದಾರೆ.


ಅವರು ನಗರದ ವೀರಶೈವ ಕಲ್ಯಾಣ ಮಂಟಪದ ಹಿಂಭಾಗದಲ್ಲಿರುವ ಚೌಕಿ ಮಠದಲ್ಲಿ ವೀರಶೈವ ಸಂಘಟನಾ ವೇದಿಕೆ ಹಮ್ಮಿಕೊಂಡಿದ್ದ, ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಹಾಗೂ ಧರ್ಮ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ಸಮಾಜ ಅಂದಮೇಲೆ ಓರೆಕೋರೆಗಳಿರುತ್ತವೆ. ಆದರೆ ರಂಧ್ರಗಳು ಕೊರೆಯಬಾರದು. ಅಂತಹ ರಂದ್ರಗಳು ಕಂಡುಬಂದರೆ ಧಾರ್ಮಿಕರು ಮುಚ್ಚುವಂತಹ ಕೆಲಸ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಅವರು  ಕರೆ ನೀಡಿದ್ದರು. ಇದನ್ನ ಪ್ರಸ್ತಾಪಿಸಿದ ಶ್ರೀಗಳು ರಂಧ್ರಗಳು ಕೊರೆದಿಲ್ಲ. ಆ ಪ್ರಯತ್ನ ನಡೆಯುತ್ತಿದೆ.


ಆಪ್ರಯತ್ನಗಳನ್ನ ವಿಫಲಗೊಳಿಸಲು ವೀರಭದ್ರನ ಅವತಾರ ತಾಳಲೇಬೇಕಾಗುತ್ತದೆ ಎಂದು ಹೇಳಿದರು. ಪುರಾಣಗಳಲ್ಲಿ ವೀರಭದ್ರನ ಸಂಕೇತವೇನು ಎಂದು ವಿವರಿಸಿದ ಸ್ವಾಮೀಜಿ ವೀರಭದ್ರ ಅಹಂಕಾರವನ್ನ ನಿಗ್ರಹಿಸುವ ಸಂಕೇತ. ಹಾಗಾಗಿ ಅಹಂಕಾರಗಳನ್ನ ಇಳಿಸಲು ವೀರಭದ್ರನ ಅವತಾರ ಅವಶ್ಯಕ ಎಂದರು.


ರಾಜಕೀಯದ ವ್ಯಕ್ತಿಗಳಿಗೂ ಟಾಂಗ್ ನೀಡಿದ ಶ್ರೀಗಳು ಧರ್ಮಸಭೆಯಲ್ಲಿ ರಾಜಕೀಯದವರನ್ನ ವೇದಿಕೆ ಮೇಲೆ ಕೂರಿಸದೆ ಕೆಳಗೆ ಕೂರಿಸಲಾಗಿದೆ. ವೇದಿಕೆಮೇಲೆ ನಮ್ಮನ್ನ ಹಾಗೂ ಬೆಕ್ಕಿನಕಲ್ಮಠ ಶ್ರೀಗಳನ್ನ ಕೂರಿಸಿದ್ದೀರಿ. ಇದರ ಸಂದೇಶ ಇಷ್ಟೆ, ರಾಜಕೀಯವನ್ನ ಧಾರ್ಮಿಕತೆಯಲ್ಲಿ ಬೆರಸಬೇಡಿ ಎಂಬುದನ್ನ ಈ ಜಯಂತ್ಯೋತ್ಸವ ತೋರಿಸಿಕೊಟ್ಟಿದೆ ಎಂದರು.


ಧರ್ಮಕ್ಷೇತ್ರಗಳು ಕುರುಕ್ಷೇತ್ರಗಳಾಗಬಾರದು ಎಂಬ ಶ್ರೀಗಳ ಹೇಳಿಕೆ ಅವರ ವಿರುದ್ಧ ನಡೆಯುತ್ತಿರುವ ವಿರೋಧಿ ಬಣಗಳಿಗೆ ಟಾಂಗ್ ನೀಡುದ್ರಾ ಎಂಬ ಅನುಮಾನ ಮೂಡಿಸಿದೆ. ಧರ್ಮಕ್ಷೇತ್ರಗಳು ಕುರುಕ್ಷೇತ್ರಗಳಾಗಬಾರದು ಇದನ್ನ‌ ಮಹಾಭಾರತದಲ್ಲಿ ಶ್ರೀಕೃಷ್ಣನೇ ಹೇಳುವ ಮಾತುಗಳಾಗಿವೆ.


ಯಾರು ಎಲ್ಲಿರಬೇಕು ಏನು ಮಾಡಬೇಕು ಎಂಬ ಪ್ರಜ್ಞೆ ಇದ್ದರೆ ಜಗತ್ತಿನಲ್ಲಿ‌ ಕೋಲಾಹಲ ಸಂಭಿಸೊಲ್ಲ ಎಂದರು‌ ವಿವರಿಸಿದ ಅವರು ಇತಿಹಾಸದಲ್ಲಿ ಅರಮನೆಗಳು ಒಡೆದಿವೆ ಆದರೆ ಧರ್ಮಶಾಲೆಗಳು ಒಡೆದಿಲ್ಲ ಎಂದು ಎಚ್ಚರಿಸಿದರು.


ಭಾರತದಲ್ಲಿ ಪುರಾಣ ಕಥೆಗಳು ಕಟ್ಟುಕಥೆಗಳಲ್ಲ ನಿಮ್ಮ ಕಥೆಗಳನ್ನ ಚಿತ್ರೀಕರಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಜಾತಿಗೆ ಸೀಮಿತವಾಗಿದೆ ಜಾತೀಯತೆಯಿಂದ ಹೊರಬರಬೇಕು. ಜಗತ್ತಿನಲ್ಲಿ ಮನೆ ಬೆಳಗುವ ದೀಪ ಹಚ್ಚುವ ಕೆಲಸ ಮಾಡಬೇಕು. ಬೆಂಕಿಹಚ್ಚುವ ಕೆಲಸ ನಿಲ್ಲಬೇಕು. ಬೆಂಕಿ ಹಚ್ಚೋದು ಸುಲಭ ದೀಪಹಚ್ಚೋದು ಕಷ್ಟ ಎಂದರು.


ಕಾರ್ಯಕ್ರಮವನ್ನ ಸಂಸದ ರಾಘವೇಂದ್ರ ಉದ್ಘಾಟಿಸಿದರು, ಬೆಕ್ಕಿನಕಲ್ಮಠದ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯಸಾನಿಧ್ಯವಹಿಸಿದ್ದರು.  ಎಂಎಲ್ ಸಿ ಡಾ.ಧನಂಜಯ ಸರ್ಜಿ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಕಾಂಗ್ರೆಸ್ ನ ಹೆಚ್.ಸಿ ಯೋಗೇಶ್, ಎಸ್ಪಿ ದಿನೇಶ್ 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು