ಸುದ್ದಿಲೈವ್/ಶಿವಮೊಗ್ಗ
ಒಳಮೀಸಲಾತಿ ಯಾಗುವಂತೆ ಒತ್ತಾಯಿಸಿ ಸೆ.12 ರಂದು ರಾಜ್ಯಾದ್ಯಂತ ಎಲ್ಲಾಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲ ಬೃಹತ್ ತಮಟೆ ಚಳುವಳಿ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ ಗುರುಮೂರ್ತಿ ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಆದೇಶಿಸಿದೆ. ಆದೇಶ ಹೊರಡಿಸಿ ಎರಡು ತಿಂಗಳಾದರೂ ಕಾನೂನು ಜಾರಿಯಾಗಿಲ್ಲ ಎಂದು ದೂರಿದ್ದಾರೆ.
ಪ.ಜಾಯ ಒಳಮೀಸಲಾತಿ ಜಾರಿಗೆ ಸಂವಿಧಾನ ಬದ್ದವಾಗಿದೆ. ಸುಪ್ರೀಂ ತೀರ್ಪು ಐತಿಹಾಸಿಕ ತೀರ್ಪಾಗಿದೆ. ಶ್ರೇಣಿಕೃತ ಜಾತಿ ವ್ಯವಸ್ಥೆಯಿದೆ. ಪಂಚಮರು, ಶೂದ್ರರು ವೈಶ್ಯರು, ಕ್ಷತ್ರಿಯರು ಹಾಗೂ ಬ್ರಾಹ್ಮಣರಿದ್ದಾರೆ. ಆದರೆ ಪಂಚಮರ ಉದ್ದಾರಕ್ಕಾಗಿ ಡಾ.ಬಾಬಸಾಹೇಬ ಅಂಬೇಡ್ಕರ್ ಅವರು ಮೀಸಲಾತಿ ನೀಡಿದೆ.
ಈ ಮೀಸಲಾತಿಗೆ ಒಳ ಮೀಸಲಾತಿ ನೀಡಲು ಸುಪ್ರೀಕೋರ್ಟ್ ಆದೇಶ ಬಂದು ಎರಡೂ ತಿಂಗಳು ಕಳೆದರೂ ಜಾರಿಗೆ ತರಲು ಮೀನಾಮೇಷ ಎಣೆಸಿದೆ. ನಿದ್ರಾವಸ್ಥೆಯಲ್ಲಿರುವ ಸರ್ಕಾರಕ್ಕೆ ಎಚ್ಚರಿಸಲು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ತಮಟೆ ಚಳುವಳಿ ನಡೆಯುತ್ತಿದೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಜಾಂಚಿ ಕಾಟಕಿ, ಎಂ ಏಳುಕೋಟಿ, ನಾಗರಾಜ್ ಬೊಮ್ಮನ್ ಕಟ್ಟೆ ಕೃಷ್ಣ, ರಮೇಶ್ ಚಿಕ್ಕಮರಡಿ, ಹಸವಿ ಬಸವರಾಜ್, ಹರಿಗೆ ರವಿ ಮೊದಲಾದವರು ಉಪಸ್ಥಿತರಿದ್ದರು.