ಸುದ್ದಿಲೈವ್/ಶಿವಮೊಗ್ಗ
ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಶಿವಮೊಗ್ಗದ ಕೆಎಸ್ಆರ್‌ಟಿಸಿ ಬಸ್ ಡಿಪೋದಲ್ಲಿ ಚಾಲಕನಾಗಿದ್ದವರು ನಾಪತ್ತೆಯಾಗಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಸರ್ಕಾರಿ ಸಾರಿಗೆ ಬಸ್ ಚಾಲಕ ಮಲಕಣ್ಣ ಗಿರಿಸಾಗರ ಯಾನೆ ಮಲ್ಲಿಕಾರ್ಜುನ್ ಬಾಗಲಕೋಟೆ ಜಿಲ್ಲೆಯ ಮಧೋಳ್ ತಾಲೂಕಿನ ಶಿರೋಳ ಗ್ರಾಮದವರು.
09 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಮಲ್ಲಿಕಾರ್ಜುನರಿಗೆ ದಿನ ಕುಡಿಯುವ ಚಟ ಹತ್ತಿಸಿಕೊಂಡಿದ್ದರು. ಬುದ್ದನಗರದ ನಿವಾಸಿ ಆಗಿದ್ದ ಇವರು, ಸೆ.25 ರಂದು ರಾತ್ರಿ ಕುಡಿದುಕೊಂಡು ಬಂದು ಮನೆಯಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ.
ಮಗಳು 112ಗೆ ಕರೆ ಮಾಡಿ ಬರಲು ಕಮಟ್ರೋಲ್ ರೂಂಗೆ ಹೇಳಿದ್ದಕ್ಕೆ ಮಲ್ಲಿಕಾರ್ಜುನ್ ತಡರಾತ್ರಿಯಲ್ಲಿ ಮನೆ ಬಿಟ್ಟು ಹೋಗಿದ್ದಾರೆ. ಮನೆಗೆ ವಾಪಾಸ್ ಆಗಿಲ್ಲ. ಈ ಕುರಿತು ಪತ್ನಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ನಿನ್ನೆ ದೂರು ದಾಖಲಿಸಿದ್ದಾರೆ.
Tags:
ಶಿವಮೊಗ್ಗ KSRTC