ಸುದ್ದಿಲೈವ್/ಶಿವಮೊಗ್ಗ
ಅ.26 ರಂದು ಮತ್ತು 27 ರಂದು ನೀನಾಸಂ ಮತ್ತು ನಮ್ಮ ಟೀಂ ತಂಡದ ವತಿಯಂದ ಕುವೆಂಪು ರಂಗಮಂದಿರದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ.
ನೀನಾಸಂನ ನಾಟಕೋತ್ಸವ ಆರಂಭಗೊಂಡು ಇಂದಿಗೆ 23 ವರ್ಷ ಕಳೆದಿದೆ. ನಮ್ಮ ಟೀಂ ಆರಂಭಗೊಂಡು 24 ವರ್ಷಗಳು ಕಳೆದಿದೆ. 240 ನಾಟಕ ಪ್ರದರ್ಶನವನ್ನ ನಮ್ ಟೀಂ ಅಡಿ ಪ್ರದರ್ಶನವಾಗಿದೆ ಎಂದು ಪತ್ರಕರ್ತ ಹೊನ್ನಾಳಿ ಚಂದ್ರು ತಿಳಿಸಿದ್ದಾರೆ.
ಅ.26 ರಂದು ಸಂಜೆ 6-45 ಕ್ಕೆ ಮಾಲತಿ ಮಾಧವ (ರಚನೆ- ಭವಭೂತಿ, ಸಂಗೀತ ವಿನ್ಯಾಸ ವಿದ್ಯಾ ಹೆಗಡೆ, ಭಾರ್ಗವ ಕೆ.ಎನ್, ಎಂ.ಹೆಚ್ ಗಣೇಶ್, ಕನ್ನಡ ರೂಪ, ನಿರ್ದೇಶನ ಅಕ್ಷರ ಕೆ.ವಿ) ನಾಟಕ ಪ್ರದರ್ಶಗೊಳ್ಳಲಿದ್ದು, ಅಂಕದಪರದೆ (ರಚನೆ-ಅಭಿರಾಮ್ ಭಡ್ಯಮ್ಯರ್, ಕನ್ನಡಕ್ಕೆ-ಜಯಂತ್ ಕಾಯ್ಕಿಣಿ, ನಿರ್ದೇಶನ ವಿದ್ಯಾನಿಧಿ ವನಾರಸೆ(ಪ್ರಸಾದ)ನಾಟಕ ಅ.27 ರಂದು ಪ್ರದರ್ಶನಗೊಳ್ಳಲಿದೆ.
ಯಾವುದೇ ವೇದಿಕೆ ಕಾರ್ಯಕ್ರಮವಿಲ್ಲದ ಕಾರಣ ನಿಗದಿತ ಸಮಕ್ಕೆ ನಾಟಕಪ್ರದರ್ಶನ ವಾಗಲಿದ್ದು ಪ್ರವೇಶ ದರ 50 ರೂ. ನಿಗದಿಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.