Suddilive/ಶಿವಮೊಗ್ಗ
ಸಧ್ಯಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದ ಪರ್ಮಿಟ್ ಮತ್ತೊಂದು ತಿಂಗಳು ವಿಸ್ತರಣೆ ಸಿಕ್ಕಿದೆ. ಒಂದು ತಿಂಗಳು ಲೈಸೆನ್ಸ್ ವಿಸ್ತರಣೆಯಾಗಿರುವ ಮಾಹಿತಿ ಹೊರಬಿದ್ದ ಬೆನ್ನಲ್ಲೆ ಡಿಜಿಸಿಎ ಶಿವಮೊಗ್ಗ ಏರ್‌ಪೋರ್ಟ್ ವಿಚಾರದಲ್ಲಿ 20 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಏರೋಡ್ರೋಮ್ ಮಾನದಂಡಗಳನ್ನು ಅನುಸರಿಸಲು ವಿಫಲವಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಏರ್‌ಪೋರ್ಟ್‌ನ ದೇಖಾರೇಖಿ ನೋಡಿಕೊಳ್ಳುತ್ತಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಎಸ್‌ಐಐಡಿಸಿ) ಶಿವಮೊಗ್ಗ ಇದಕ್ಕೆ ಡಿಜಿಸಿಎ ₹20 ಲಕ್ಷ ದಂಡ ವಿಧಿಸಿದೆ ಎಂದು ರಾಷ್ಟ್ರಿಯ ಮಾಧ್ಯಮವೊಂದು ವರದಿ ಮಾಡಿದೆ.
ಆ ವರದಿ ಪ್ರಕಾರ, ಡಿಜಿಸಿಎ ಕಳೆದ ಜುಲೈನಲ್ಲಿ ವಿಮಾನ ನಿಲ್ದಾಣದ ಪರಿಶೀಲನೆಗೆ ಆಗಮಿಸಿದ್ದು, ತಪಾಸಣೆಯ ಕುರಿತಾಗಿ ಆಗಸ್ಟ್‌ನಲ್ಲಿ ಕೆಎಸ್‌ಐಐಡಿಸಿಗೆ ನೋಟಿಸ್ ನೀಡಿತ್ತು. ಪ್ರತಿಯಾಗಿ ಕೆಎಸ್‌ಐಐಡಿಸಿ ಡಿಜಿಸಿಎಗೆ ಉತ್ತರ ನೀಡಿತ್ತು. ಉತ್ತರಕ್ಕೆ ತೃಪ್ತರಾಗದ ಡಿಜಿಸಿಎ ಅಸುರಕ್ಷತೆಯ ಕಾರಣಗಳನ್ನ ಪಟ್ಟಿಮಾಡಿ, ಅಂತಹ ಸನ್ನಿವೇಶದಲ್ಲಿ ವಿಮಾನಗಳ ಸಂಚಾರಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಹಾಗೂ ಸೂಕ್ತವಾದ ರೀತಿಯಲ್ಲಿ ವಿಮಾನ ನಿಲ್ದಾಣವನ್ನು ನಿರ್ವಹಿಸುವಲ್ಲಿ ವಿಫಲವಾಗಿರುವ ಕಾರಣ ನೀಡಿ ದಂಡ ವಿಧಿಸಿಲಾಗಿದೆ.