ಸುದ್ದಿಲೈವ್/ಶಿವಮೊಗ್ಗ
ಸಚಿವ ಬೈರತಿ ಸುರೇಶ್ ಮೈತ್ರಾದೇವಿಯ ಸಾವಿನಬಗ್ಗೆ ಮಾತನಾಡಿರುವುದು ನೋವಾಗಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಶ್ರೀಮತಿ ಮತ್ತು ಮೈತ್ರಾದೇವಿಯರು ಹಲವೆಡೆ ಜಂಟಿಯಾಗಿ ಕೆಲಸ ಮಾಡಿದ್ದಾರೆ. ಅವರ ಸಾವು ಆಕಸ್ಮಿಕವಾಗಿದೆ. ಭೈರತಿ ಅವರು ಶೋಭಾರದ್ಲಾಂಜೆ ಹೇಳಿಕೆಗೆ ಪ್ರತಿಕ್ರಿಯಿಸಲು ಮುಂದಾಗಿ ಮೈತ್ರಾದೇವಿಯ ಸಾವಿನಬಗ್ಗೆ ಮಾತನಾಡಿ ನೈತಿಕ ಅಧಃಪಥನಕ್ಕೆ ಇಳಿದಿದ್ದಾರೆ ಎಂದರು.
ಇವರು ಟೀಕೆ ಮಾಡಿದ್ದಕ್ಕೆ ಶೋಭಾಕರದ್ಲಾಂಜೆ ಅವರು ಸಿದ್ದರಾಮಯ್ಯನವರ ಪುತ್ರನ ಸಾವಿನ ಬಗ್ಗೆ ಮಾತನಾಡಿರುವುದು ಮನಸಿಗೆ ಇಷ್ಟವಾಗಿಲ್ಲ. ಇದನ್ನ ಖಂಡಿಸುವೆ. ರಾಜಕಾರಣ ಮಾಡುವ ರೀತಿ ಇದಲ್ಲ. ಟೀಕೆ ಇಪ್ಪಣಿಗಳು ಸ್ವಾಭಾವಿಕ ಸ್ವರ್ಗದಲ್ಲಿರುವ ತಾಯಿ ಮತ್ತು ಪುತ್ರನ ಬಗ್ಗೆ ಮಾತನಾಡಿರುವ ಬಗ್ಗೆ ಇಬ್ಬರೂ ಕ್ಷಮೆಯಾಚಿಸಲಿ ಎಂದರು.
ಪೇಜಾವರ ಶ್ರೀಗಳ ಬಗ್ಗೆ ಬಿ.ಕೆ.ಹರಿಪ್ರಸಾದ್ ರಾಜಕಾರಣಿಯಂತದ ಮಾತನಾಡಿದ್ದಾರೆ. ಇವರ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯಾ ಎಂದು ಪ್ರಶ್ನಿಸಿದ ಈಶ್ವರಪ್ಪ ಜಾತಿ ಜನಗಣತಿ ಬಗ್ಗೆ ಇತರೆ ಸ್ವಾಮಿಗಳು ಮಾತನಾಡಿದ್ದಾರೆ. ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೇಜಾವರ ಶ್ರೀಗಳು ರಾಮಮಂದಿರದ ಬ್್ಗರನೂ ಮಾತನಾಡುತ್ತಾರೆ ಜಾತಿಜನಗಣತಿ ಮಾತನಾಡುತ್ತಾರೆ. ಅವರ ಅಭಿಪ್ರಾಯ ವ್ಯಕ್ತೊಡಿಸಲು ಸ್ವಾತಂತ್ರರಿಲ್ವಾ? ಅ.18 ರಂದು ಜಾತಿಜನಗಣತಿಯನ್ನ ಸಚಿವ ಸಂಪುಟದಲ್ಲಿ ತರುವುದಾಗಿ ಹೇಳಿದ್ದಾರೆ. ತಂದ್ರ ಎಂದು ಪ್ರಶ್ನಿಸಿದ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕೆಂದು ಎಚ್ಚರಿಸಿದರು.
ಚನ್ನಪಟ್ಟಣದಲ್ಲಿ ಯೋಗೀಶ್ವರ್ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿರುವುದು ಹೊಸದಲ್ಲ. ರಾಜಕೀಯದಲ್ಲಿ ಸರ್ವೆಸಾಮಾನ್ಯ ಆದರೆ ಸಿದ್ದಾಂತವನ್ನೇ ಬಿಟ್ಟು ಹೋಗಿದ್ದು ಬೇಸರ ತರಿಸುತ್ತದೆ ಎಂದರು. ಶಿಗ್ಗಾವ್ ನಲ್ಲಿ ಮಾಜಿ ಸಿಎಂ ಬೊಮ್ಮಾಯಿ ಅವರ ಪುತ್ರ ಸ್ಪರ್ಧೆಗೆ ಪ್ರತಿಕ್ರಿಯಿಸಿದ ಅವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಯಾರಿಗೂ ನೈತಿಕತೆ ಇಲ್ಲದಂತಾಗಿದೆ.
ಮೋದಿಗೆ ಅಪಮಾನವಾಗುವಂತೆ ರಾಜ್ಯದಲ್ಲಿ ನಡೆದುಕೊಳ್ಳಲಾಗುತ್ತಿದೆ. ಹೊಂದಾಣಿಕೆ ರಾಜಕಾರಣ, ಸ್ವಜನ ಪಕ್ಷಪಾತ. ಸಿದ್ದಾಂತವಿಲ್ಲದಂತೆ ರಾಜ್ಯ ರಾಜಕಾರಣ ನಡೆಯುತ್ತಿದೆ. ಇದಕ್ಕೆ ಯಡಿಯೂರಪ್ಪನವರನ್ನೇ ನೇರವಾಗಿ ದೂಷಿಸಲಾಗುತ್ತಿದೆ. ಕೆಲ ನಾಯಕರು ನೇಪಥ್ಯಕ್ಕೆ ಹೋದಂತಾಗಿದೆ. ಆದರೆ ಪಕ್ಷ ಸಿದ್ದಾಂತವನ್ನ ಪರಿಪಾಲಿಸುವವರು ನೇತ್ಯಕ್ಕೆ ಸರಿದಿಲ್ಲ. ಸಾವಿರಾರು ಜನ ನೋವು ಅನುಭವಿಸಿದ್ದಾರೆ. ನಾನು ಇದನ್ನ ದಿಕ್ಕರಿಸಿ ಹೊರಗೆ ಬಂದೆ. ಪಜ್ಷದ ಹಿರಿಯರು ಇದನ್ನ ಸರಿಪಡಿಸಲಿದ್ದಾರೆ ಎಂದರು.
ಹಿಂದೂತ್ವ, ಗೋಹತ್ಯೆ ನಿಷೇಧಕ್ಕೆ ಜನ ನಮಗೆ ಓಟು ಕೊಟ್ಟು ಅಧಿಕಾರಕ್ಕೆ ತಂದಿದ್ದಾರೆ. ಸಿದ್ದಾಂತದ ಮೇಲೆ ಅಧಿಕಾರವನ್ನ ಬಿಜೆಪಿ ನಡೆಸಿದೆ. ಕೆಲವರ ಹಿತಾಸಕ್ತಿಯಿಂದ ಪಕ್ಷ ಹಾಳಾಗಿದೆ. ಸರಿಯಾಗುವ ಭರವಸೆ ಇದೆ. 7 ಜನ ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಬರಲಿದ್ದಾರೆ ಎಂಬ ಡಿಕೆಸುರೇಶ್ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಮೈತ್ರಾದೇವಿಯ ಬಗ್ಗೆ ಮಾತನಾಡಿದ ಹಾಗೆ ಇದು ಆಗಿದೆ ಎಂದರು.
ಆಯನೂರು ಮಂಜುನಾಥ್, ಬ್ರಿಗೇಡ್ ಸ್ಥಾಪನೆಗೆ ಈಶ್ವರಪ್ಪ ಹಿಂದಿನ ರೀತಿಯಲ್ಲಿ ಯೂಟರ್ನ್ ಹೊಡೆಯದಿರಲಿ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಹಿಂದೆ ದೊಡ್ಡವರನ್ನ ಮನವೊಲಿಸುವಷ್ಟು ದೊಡ್ಡವನಾಗಿತಲಿಲ್ಲ. ಹಾಗಾಗಿ ಮಾತು ಮೀರಲಿಲ್ಲ. ಈಗ ಅದೇ ದೊಡ್ಡವರು ಅಡ್ಡಬಂದರೆ ಮನವೊಲಿಸುವ ಪ್ರಯತ್ನ ನಡೆಸುವೆ ಎಂದರು.