Girl in a jacket

ಆಟೋದಲ್ಲಿ ಎತ್ತಾಕೊಂಡು ಹೋಗಿ ಥಳಿತ




ಸುದ್ದಿಲೈವ್/ಶಿವಮೊಗ್ಗ

ಆಟೋದಲ್ಲಿ ಎತ್ತಾಕಿಕೊಂಡು ಹೋಗಿ ಯುವಕನನ್ನ ಥಳಿಸಿರುವ ಘಟನೆ ವರದಿಯಾಗಿದ್ದು, ಗಾಯಗೊಂಡ ಯುವಕನನ್ನ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ. 

ಭಾನುವಾರ ಮಧ್ಯಾಹ್ನ 1 ಗಂಟೆಗೆ ಗಾಜನೂರಿಗೆ

ಹೋಗಿದ್ದ ಮಾರ್ನಮಿಬೈಲಿನ ಅಭಿಲಾಶ್, ಸ್ನೇಹಿತರಾದ ಅನಿಲ, ಸುನಿಲ, ಧನು, ಹರೀಶ ಮತ್ತು ಮನು ಊಟ ಮುಗಿಸಿ ಬಿಲ್ ಕೊಡುವ ಸಮಯದಲ್ಲಿ ಪಕ್ಕದ ಟೇಬಲ್ ನಲ್ಲಿದ್ದವರು ನಿಧಾನವಾಗಿ ಮಾತನಾಡಲು ಹೇಳಿದ್ದಾರೆ. 

ಈ ವಿಚಾರದಲ್ಲಿ ಇಬ್ಬರಿಗೂ ಗಲಾಟೆಯಾಗಿದೆ. ಇಲ್ಲಿಂದ ಜಾಗ ಖಾಲಿ ಮಾಡಿದ್ದ ಹುಡುಗರನ್ನ ಬೈಕ್ ನಲ್ಲಿ ಹೋಗುವಾಗ ಗಜಾನನ ಗೇಟ್ ಬಳಿ 5-6 ಹೋಟೆಲ್ ನಲ್ಲಿ ಗಲಾಟೆ ಮಡಿದ ಹುಡುಗರು ಅಡ್ಡಹಾಕಿದ್ದಾರೆ. ಅಭಿಲಾಶ್ ಹೊರತು ಪಡಿಸಿ ಉಳಿದ ಯುವಕರು ಎಸ್ಕೇಪ್ ಆಗಿದ್ದಾರೆ. 

ಈ ವೇಳೆ ಇದೇ ಗ್ಯಾಂಗ್ ಅಭಿಯನ್ನ ಆಟೋದಲ್ಲಿ ಎತ್ತಿಹಾಕಿಕೊಂಡು ಎಂಕೆಕೆ ರಸ್ತೆಗೆ ಕರೆದುಕೊಂಡು ಹೋಗಿ ಥಳಿಸಿದೆ. ನಂತರ ಸೂಳೆಬೈಲಿನ ಕ್ರಶರ್ ಬಳಿ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಂತರ ಜೆ.ಸಿ.ನಗರ 2 ನೇ ತಿರುವಿನ ಬಳಿ ಬಿಟ್ಟು ಹೋಗಿದ್ದಾರೆ.

ತೀವ್ರ ಗಾಯಗೊಂಡ ಅಭಿಯನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close