Girl in a jacket

ನಗರದಲ್ಲಿ ಬಾಂಗ್ಲದೇಶಿಗರು ಪತ್ತೆ



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ನಗರದಲ್ಲಿ 7 ಜನರು ದಾಖಲಾತಿ ಇಲ್ಲದವರು ಪತ್ತೆಯಾಗಿದ್ದು ಇವರೆಲ್ಲರೂ ಬಾಂಗ್ಲಾ ದೇಶದಿಂದ ಬಂದವರು ಎಂಬ ಮಾಹಿತಿ ಹೊರಬಿದ್ದಿದೆ. 

ಜಯನಗರ ಪೊಲೀಸ್ ಠಾಣೆಯ ಸವಳಂಗ ರಸ್ತೆಯಲ್ಲಿ ನೂತನವಾಗಿ ಕಟ್ಟಲಾಗುತ್ತಿರುವ ಕಟ್ಟಡದ ನಿರ್ಮಾಣದ ವೇಳೆ ಕಾರ್ಮಿಕರಾಗಿ ಬಂದಿದ್ದ 7 ಜನರನ್ನ ಬಾಂಗ್ಲಾ ದೇಶಿಗರೆಂದು ದೃಢಪಟ್ಟಿದೆ.

ಜಯನಗರ ಪೊಲೀಸ್ ಪಿಐ ಸಿದ್ದೇಗೌಡರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ದಾಳಿಯ ವೇಳೆ  ದಾಖಲಾತಿ ಇಲ್ಲದವರನ್ನ ಠಾಣೆಗೆ ಕರೆಯಿಸಲಾಗಿದೆ.‌ ಇವರಲ್ಲಿ ಯಾರಿಗೂ ದಾಖಲಾತಿಗಳಿಲ್ಲವೆಂದು ತಿಳಿದು ಬಂದಿದೆ.  ಮಂಗಳೂರು ವಿಳಾಸವಿರುವ ಆಧಾರ್ ಕಾರ್ಡ್ ಗಳು ಸಹ ಇವರ ಬಳಿಯಿರುವುದು ಪತ್ತೆಯಾಗಿದೆ. ಕಟ್ಟಡ ಕಾರ್ಮಿಕರ ರೂಪದಲ್ಲಿ ಬಾಂಗ್ಲದೇಶಿಗರು ನಗರದಲ್ಲಿ ಪತ್ತೆಯಾಗಿದ್ದರು. 

ನಗರದಲ್ಲಿ ಬಾಂಗ್ಲದೇಶಿಗರು ಪತ್ತೆಯಾಗಿರುವುದು ಇದು ಮೊದಲಬಾರಿಯಲ್ಲ. ಪತ್ತೆಯಾದವರಿಗೆ ಬಾಂಗ್ಲ ಭಾಷೆ ಮಾತನಾಡುತ್ತಾರೆ. ಇನ್ನುಕೆಲವರಿಗೆ ಹಿಂದಿ ಭಾಷೆ ಗೊತ್ತಿದೆ.  ಇವರನ್ನ ಮೇಸ್ತ್ರಿ ಕರೆದುಕೊಂಡು ಬಂದಿರುವುದು ತಿಳಿದು ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close