Girl in a jacket

ಅಟ್ಟಹಾಸ ಮೆರುದ್ನಾ ಕಾರುಚಾಲಕ?



ಸುದ್ದಿಲೈವ್/ಶಿವಮೊಗ್ಗ

ಕಾರು ತಡೆದು ತಪಾಸಣೆ ಮಾಡುವ ವೇಳೆ ಪೊಲೀಸ್  ಮೇಲೆ ಕಾರು ಹತ್ತಿಸಲು ಯತ್ನಿಸಿದಘಟನೆ ನಡೆದಿದ್ದು ಬ್ಯಾನೆಟ್ ಮೇಲೆ ಪೊಲೀಸರನ್ನ ಕರೆದುಕೊಂಡು ಹೋದ ವಿಡಿಯೋವೊಂದು ವೈರಲ್ ಆಗಿದೆ. 

ಪೊಲೀಸ್ ಸಿಬ್ಬಂದಿಯನ್ನು ಗುದ್ದಿ ಬ್ಯಾನೇಟ್ ಮೇಲೆ ಹತ್ತಿಸಿಕೊಂಡು ಕಾರನ್ನ ಚಾಲಕ ಉದ್ದೇಶ ಪೂರಕವಾಗಿ ಹತ್ತಿಸಿಕೊಂಡು ಹೋಗಿದ್ದಾನೆ. ನೂರು ಮೀಟರ್ ಗೂ ಹೆಚ್ಚು ದೂರ ಪೊಲೀಸ್ ಸಿಬ್ಬಂದಿಯನ್ನು ಬ್ಯಾನೇಟ್ ಮೇಲೆ ಎಳೆದುಕೊಂಡು ಹೋಗಿದ್ದಾನೆ. 

ಸಹ್ಯಾದ್ರಿ ಕಾಲೇಜು ಬಳಿ ಘಟನೆ ನಡೆದಿದೆ. ಪೂರ್ವ ಸಂಚಾರಿ ಪೊಲೀಸರು ವಾಹನ ತಾಪಾಸಣೆ ನಡೆಸುತ್ತಿದ್ದ ವೇಳೆ ಪೊಲೀಸ್ ಸಿಬ್ಬಂದಿಯನ್ನ ಕಾರಿನ ಬ್ಯಾನೆಟ್ ಮೇಲೆ ಕೂರಿಸಿಕೊಂಡು ಹೋಗಿದ್ದಾನೆ. ತಪಾಸಣೆ ವೇಳೆ ಕಾರಿನ ಮುಂದೆ ಬಂದು ಕಾರು ನಿಲ್ಲಿಸುವಂತೆ ಸೂಚಿಸುತ್ತಿದ್ದ ಟ್ರಾಫಿಕ್ ಸಿಬ್ಬಂದಿಯನ್ನ ಬ್ಯಾನೆಟ್ ಮೇಲೆ ಕೂರಿಸಿಕೊಂಡು ಹೋಗಿದ್ದಾನೆ. 

ಕಾರು ನಿಲ್ಲಿಸದೇ ಸಿಬ್ಬಂದಿ ಮೇಲೆ ಹತ್ತಿಸಲು ಚಾಲಕ ಮುಂದಾಗಿರುವುದಾಗಿ ಹೇಳಲಾಗಿದೆ. ಕಾರಿನ ಬಾನೇಟ್ ಮೇಲೆ ಸಿಬ್ಬಂದಿ ಬಿದ್ದರು ನೂರು ಮೀಟರ್ ಗೂ ಹೆಚ್ಚು ದೂರ ಎಳೆದುಕೊಂಡು ಹೋಗಿ ಚಾಲಕ ಅಟ್ಟಹಾಸ ಮೆರೆದಿದ್ದಾನೆ. ಸ್ವಲ್ಪದಲ್ಲೇ ಪ್ರಾಣಾಪಾಯದಿಂದ ಸಿಬ್ಬಂದಿ ಪಾರಾಗಿದ್ದಾನೆ.

ಬ್ಯಾನೆಟ್ ಮೇಲೆ ಬಿದ್ದ ಸಿಬ್ಬಂದಿಯನ್ನ ಪ್ರಭು ಎಂದು ಗುರುತಿಸಲಾಗಿದೆ. ಕಿಯಾ ಸೊನೆಟ್ ಕಾರಿನಲ್ಲಿ ಬಂವನನ್ನ ಭದ್ರಾವತಿಯ ಕೇಬಲ್ ಆಪರೇಟರ್ ಎಂಬುದು ಗೊತ್ತಾಗಿದ್ದು ಈತನ ಮೇಲೆ ಪ್ರಕರಣ ದಾಖಲಿಸುವುದಾಗಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಸ್ಪಷ್ಟನೆ ನೀಡಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close