Girl in a jacket

ಕಾಂಗ್ರೆಸ್ ಎಂದರೆ ಇಂಡಿಯನ್ ನ್ಯಾಷನಲ್ ಕರುಪ್ಷನ್ ಪಾರ್ಟಿ-ಸಂಸದ ರಾಘವೇಂದ್ರ


ಸುದ್ದಿಲೈವ್/ಶಿವಮೊಗ್ಗ

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಮೇಲೆ ಹಗರಣಗಳ ಸುಳಿಗೆ ಸುಲಿಕಿಕೊಂಡು ಮುಚ್ಚಿಕೊಳ್ಳುವ ಪ್ರಯತ್ನ ನಡೆಸುತ್ತಿದೆ ಎಂದು ಸಂಸದ ರಾಘವೇಂದ್ರ ಆರೋಪಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ಇತಿಹಾಸದಲ್ಲಿ ಹಗರಣಗಳ ನಡುವೆಯೂ ನಮ್ದು ಇರಲಿ ನಿಮ್ದು ಬಿಚ್ಚಿಡುವುದಾಗಿ ಸರ್ಕಾರ ಧೋರಣೆ ತಾಳಿದಂತಾಗಿದೆ. ವಿಶೇಷವಾಗಿ ಸಚಿವ ಪ್ರಿಯಾಂಕ್ ಖರ್ಗೆ ಕೆಡಿಬಿಯ ಸೈಟ್ ಪಡೆದು ಮೂಡಾ ಹಗರಣದಿಂದ  ವಾಪಾಸ್ ನೀಡಿದ್ದಾರೆ. ಸ್ವತಃ ಸಿಎಂ ಮೂಡ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದರು. 

ಮೈಸೂರಿನ ಮೂಡಾ ಆಯುಕ್ತರಿಗೆ ಇಡಿ ಮೂರು ನಾಲ್ಕು ನೋಟೀಸ್ ನೀಡಿದರೂ ಸಹ ಉತ್ತರ ನೀಡದೆ ಇದ್ದ ಕಾರಣ ಕಚೇರಿಯ ಮೇಲೆ ದಾಳಿ ನಡೆದಿದೆ. ಸಿದ್ದರಾಮಯ್ಯನವರು ತೆಗೆದುಕೊಂಡ ಸೈಟು ವಾಪಾಸ್ ನೀಡಿದ್ದಾರೆ. 500 ಕೋಟಿಗಳ ಹಗರಣ ಇದರಲ್ಲಿ ನಡೆದಿದೆ. ಕೂಲಂಕುಷವಾಗಿ ತನಿಖೆ ನಡೆಯಬೇಕೆಂದು ಪಕ್ಷದ ನಾಯಕರು, ಕಾರ್ಯಕರ್ತರು ಪಾದಯಾತ್ರೆ ನಡೆಸಿದರೂ ಸಹ ಸಿಎಂ ಸಿದ್ದರಾಮಯ್ಯ ಬಂಡತನದಿಂದ ಹೇಳ್ತಾ ಇದ್ದಾರೆ. 

ನಗರಾಭಿವೃದ್ಧಿ ಸಚಿವರು ಹೆಲಿಕಾಪ್ಟರ್ ಮೂಲಕ ಬಙದು ಮೂಡಾ ದಾಖಲೆಗಳನ್ನ‌ಮುಚ್ಚಿಟ್ಟಿದ್ದಾರೆ. ವೈಟ್ನರ್ ಮೂಲಕ ಮುಚ್ಚುವ ಪ್ರಯತ್ನ ನಡೆಸಿದರು. ಮಾಧ್ಯಮಗಳಲ್ಲಿ 65 ಕೋಟಿ ಕೊಡಲಿ ನಂತರ 14 ಕೋಟಿ ಕೊಡುವುದಾಗಿ ಸಿಎಂ ಹೇಳಿಕೆ ನೀಡಿದ್ದರು. ನಿವೇಶನಕ್ಕಾಗಿ ಅರ್ಜಿ ಹಾಕಿದವರಿಗೆ  ಮೌಲ್ಯಯುತ ನಿವೇಶನ ಸಿಕ್ಕಿರಲಿಲ್ಲ. ಸಿಎಂಗೆ ಸಿಕ್ಕಿದೆ ಎಂದರು.

ಸಿಎಂನವರು ಸಾರ್ವಭೌಮತ್ವವನ್ನ ಸಾಧಿಸಲು ಸ್ಥಾನದಲ್ಲಿ ಕುಳಿತು ಹೊರಟಿದ್ದಾರೆ. ಇನ್ನಾದರೂ ಕೂಡ ನ್ಯಾಯಾಲಯಕ್ಕೆ ಮನ್ನಣೆ ಕೊಡಬೇಕು. ರಾಜೀನಾಮೆ ಕೊಡಬೇಕು. ನಗರಾಭಿವೃದದಿ ಸಚಿವರ ತನಿಖೆಯಾಗಬೇಕು. ತೆರಿಗೆ ಹಣವನ್ನ ಭ್ರಷ್ಠಾಚಾರದ ಮೂಲಕ ದುರುಪಯೋಗವಾಗಿದೆ. ಇದನ್ನ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದೆ. 

ಕಾಂಗ್ರೆಸ್ ಎಂಬುದು ಇಂಡಿಯನ್ ನ್ಯಾಷನಲ್ ಕರುಪ್ಷನ್ ಪಾರ್ಟಿ ಎಂದ ಸಂಸದ ಬೋಪರ್ಸ್, ಆಯಿಲ್ ಫಾರ್ ಫುಡ್ ಸ್ಕ್ಯಾಮ್, 2 ಜಿ ಸ್ಪೆಕ್ರುಮ್,  ಕಾಮನ್ ವೆಲ್ತ್ ಗೇಮ್ ನ ಸ್ಜ್ಯಾಮ್, ಆದರ್ಶ ಹೌಸಿಂಗ್ ಸ್ಕ್ಯಾಮ್ ಗಳು, ಕಾಂಗ್ರೆಸ್ ಕಾಲದಲ್ಲಿ ನಡೆದಿದೆ. ವಕ್ಫ್ ಜಾಯಿಂಟ್ ಪಾರ್ಲಿಮೆಂಟರಿ ಸಮಿತಿ ನಡೆದಾಗ ಗಲಾಟೆ ನಡೆಸಿದೆ. ಗಲಾಟೆ ನಡೆಸಿ ಪಾರ್ಲಿಮೆಂಟ್ ಮುಂದೆ ಪ್ರತಿಭಟನೆ ನಡೆಸಿದೆ. ತಪ್ಪು ಮಾಡದಿದ್ದರೆ ಪ್ರತಿಭಟನೆ ಯಾಕೆ? ಕಾಂಗ್ರೆಸ್ ಆಡಳಿತದಲ್ಲಿ ದುರುಪಯೋಗ ನಡೆದಿದೆ ಎಂದರು.  

ಜೋಷಿ ಸ್ಪಷ್ಟನೆ ನೀಡಿದ್ದಾರೆ

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಸಹೋದರ ಮತ್ತು ಸಹೋದರಿಯ ವಿರುದ್ಧ ದೂರು ದಾಖಲಾಗಿದೆ. ಸಹೋದರ ಸಹೋದರಿಯರ ನಡುವೆ ವ್ಯವಹಾರಗಳಿಲ್ಲ‌ ಎಂದು ಜೋಷಿ ಹೇಳಿದ್ದಾರೆ.  ಅಧಿಕಾರಿಗಳಿಗೆ ವಿಪಕ್ಷಗಳ ನೂನ್ಯತೆ ಹುಡುಕಲು ಸರ್ಕಾರ ಮೌಕಿಖವಾಗಿ ನಡೆಸಲು ಯತ್ನಿಸಲಾಗಿದೆ ಎಂದರು. 

ಭದ್ರಾವತಿ ಕಾರ್ಖಾನೆಯೂ ಸೇರಿ 8-9 ಕಾರ್ಖಾನೆಗಳು ಬಂಡವಾಳ ಹಿಂಪಡೆಯಲಾಗಿದೆ. ವಿಶಾಖಪಟ್ಣಂನ ಕಾರ್ಖಾನೆಗೆ ಬಂಡವಾಳ ಹೂಡಲು ಸರ್ಕಾರ ಮುಂದಾಗಿದೆ. ಭದ್ರಾವತಿಗೂ ಸ್ಟೆಪ್ ಬೈ ಸ್ಟೆಪ್ ಅದನ್ನೂ ಅಭಿವೃದ್ಧಿ ಮಾಡಲಾಗುವುದು ಎಂದರು. 

ಅರಣ್ಯ ಸಮಿತಿ ರಚನೆಯಾಗಿಲ್ಲ. ಅರಣ್ಯ ಹಕ್ಕು ಸಮಿತಿ ಪರಿಶೀಲನೆ ಮುಗಿದಿದೆ. 80 ಸಾವಿರ ಅರ್ಜಿಯಲ್ಲಿ 1500 ಅರ್ಜಿ ಪರಿಶೀಲಿಸಿರುವುದೇ ಅಂತಿಮವಾದಂತೆ ಕಾಣುತ್ತಿದೆ. ಎರಡು ಮೂರು ಎಕರೆ  ಭೂಮಿ ಹೊಂದಿದವರನ್ನ ಒಕ್ಕಲೆಬ್ಬಿಸಬಾರದು ಎನ್ನಲಾಗಿದೆ. ಆದರೂ ನೋಟೀಸ್ ನೀಡಲಾಗಿದೆ.

ವಿಮಾನ ನಿಲ್ದಾಣಕ್ಕೆ ಆಸಕ್ತಿ ಬೇಕಿದೆ

ವಿಮಾನ ನಿಲ್ದಾಣದಲ್ಲಿ ಅಗ್ಯನಶಾಮಕದಳವನ್ನ ಆರಂಭದಲ್ಲಿಯೇ ವಾಪಾಸ್ ಕಳುಹಿಸಲಾಗಿದೆ. ದಂಡಬಿದ್ದಿದೆ. ನೈಟ್ ಲ್ಯಾಂಡಿಂಗ್ ನ್ನ ರಾತ್ರಿ ಕೆಲಸಮಾಡಲು ಸೂಚಿಸಿದೆ. ರಾತ್ರಿ ವೇಳೆ ಈ ಕೆಲಸ ಆಗಬೇಕಿದೆ. ಪಿಡಬ್ಲೂಡಿ ಅಧಿಕಾರಿ ನಿಂತು ಕೆಲಸ ಮಾಡಬೇಕು.  ಆದಾಯವೂ ಅಷ್ಟೆ ಇದೆ. ಉಡಾನ್ ನಿಂದ ಎರಡುವರೆ ಕೋಟಿ ಹಣ ವಾಪಾಸ್ ಬಂದಿದೆ. 

ವಿಜ್ಞಾನ ಕೇಂದ್ರಕ್ಕೆ ವಿರೋಧ ಸಲ್ಲ

ಖೇಲೋ ಇಂಡಿಯಾ ಯೋಜನೆ ತಂದಾಗ ಕೇಂದ್ರದಿಂದ ಬಂದ ಹಣ ವಾಪಾಸ್ ಆಗಿದೆ. ವಿಜ್ಞಾನ ಕೇಂದ್ರ ಆರಂಭಿಸಲು ಅಡ್ಡಿಯಾಕೆ? ಆಸ್ತಿ ಅದು. ಸರ್ಕಾರಿ ಮಕ್ಕಳಿಗೆ ಅನುಕೂಲವೆಂಬ ಕಾರಣಕ್ಕೆ ಬಂದಿದೆ. ಅಟ್ಯಾಚ್ ಆಗಿದ್ದರೆ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಒತ್ತುವರಿಯಾದಂತಹ ಜಾಗದಲ್ಲಿ ನಿರ್ಮಿಸಲಾಗುತ್ತದೆ. 

ನಿರ್ಮಾಣದ ಹಂತದಲ್ಲಿರುವ ಸ್ಟೇಡಿಯಂ ಪೂರ್ಣಗೊಳಿಸಲು 15 ಕೋಟಿ ಬೇಕು. ಹಾಗಾಗಿ ಅಲ್ಲಿ ವಿಜ್ಞಾನ ಕೇಂದ್ರ ತರುವ ಪ್ರಯತ್ನ ನಡೆಸಲಾಗಿದೆ. ಇದೂ ವಾಪಾಸ್ ಆಗಬಾರದು  ಎಂದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close