Girl in a jacket

ಕೆಲಸದ ಅನುಮತಿ ಪಡೆಯುವಲ್ಲಿ ವಿಳಂಬ-ಮೆಗ್ಗಾನ್ ಜ್ಯೂ.ವೈದ್ಯ ಮಿಸ್ಸಿಂಗ್

 


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಜ್ಯೂನಿಯರ್ ಡಾಕ್ಟರ್ ಮಿಸ್ಸಿಂಗ್ ಆಗಿದ್ದಾರೆ. ಮಲ್ಲಿಕಾರ್ಜುನ್ ಎಂಬ 27 ವರ್ಷದ ಯುವಕ  ಮೆಗ್ಗಾನ್‌ನಲ್ಲಿ ಕೆಲಸ ಸಿಗುವುದು ತಡವಾದ ಪರಿಣಾಮ ಮಾನಸಿಕರಾಗಿ ಕಾಣೆಯಾಗಿದ್ದಾರೆ.

ಎಂಬಿಬಿಎಸ್ ಮುಗಿಸಿದ್ದ ಹೊಸಮನೆಯ ಮಲ್ಲಿಕಾರ್ಜುನ್ ಕಳೆದ ಎರಡು ತಿಂಗಳ ಹಿಂದೆ ಮೆಗ್ಗಾನ್‌ನಲ್ಲಿ ಜ್ಯೂನಿಯರ್ ವೈದ್ಯರಾಗಿ ಕೆಲಸ ಮಾಡುತ್ತಿದ್ದು, ಮಧ್ಯದಲ್ಲಿ ಕೆಲಸಕ್ಕೆ ಹೋಗೋದು ಡ್ರಾಪ್ ಆಗಿತ್ತು. ಪಿಜಿ ಪರೀಕ್ಷೆ ಕಟ್ಟಿಕೊಂಡಿದ್ದ ಯುವಕನಿಗೆ ಮಧ್ಯದಲ್ಲಿ ಜ್ಯೂನಿಯರ್ ವೈದ್ಯನ ಕೆಲಸ ಡ್ರಾಪ್ ಆಗಿತ್ತು.

ಪುನಃ ಮೆಗ್ಗಾನ್ ಮುಖ್ಯಾಧಿಕಾರಿಗಳನ್ನ ಭೇಟಿಯಾದ ಮಲ್ಲಿಕಾರ್ಜುನ್‌ಗೆ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಅನುಮತಿ ಪಡೆಯುವತೆ ನಿರ್ದೇಶಿಸಲಾಗಿತ್ತು.  ಆರೋಗ್ಯ ಸೌಧಕ್ಕೂ ತೆರಳಿದ್ದ ಜ್ಯೂ ವೈದ್ಯನಿಗೆ   ಅನುಮತಿ ಪತ್ರ ದೊರೆಯುವುದು ತಡವಾಗಿದೆ.

ಸೆ.28 ರಂದು ಶನೀಶ್ವರ ದೇವಸ್ಥಾನಕ್ಕೆ ತಾಯಿಯ ಜೊತೆ ತೆರಳಿದ್ದ ವೈದ್ಯ ಮೆಗ್ಗಾನ್ ಆಸ್ಪತ್ರೆಯ ಬಳಿ ಆಟೋ ಬರುತ್ತಿದ್ದಂತೆ ಆಸ್ಪತ್ರೆಯಲ್ಲಿ ಕೆಲಸ ಇರುವುದಾಗಿ ಹೇಳಿ ಆಟೋ ಇಳಿದು ಹೋಗಿದ್ದಾನೆ. ನಂತರ ಮಾಡಿರುವ ಯಾವುದೇ ಕರೆಯನ್ನ ಸ್ವೀಕರಿಸದ ಜ್ಯೂ. ವೈದ್ಯರು  ಮನೆಗೂ ವಾಪಾಸ್ ಆಗದೆ ಅಜ್ಜಿ ಮನೆಗೂ ಹೋಗದೆ ಕಾಣೆಯಾಗಿದ್ದಾರೆ.

5.6 ಅಡಿ ಎತ್ತರವಿರುವ ಜ್ಯೂ.ವೈದ್ಯ ಎಣ್ಣಗಂಪು ಬಣ್ಣದ ವ್ಯಕ್ತಿಯಾಗಿದ್ದಾರೆ. ದುಂಡು ಮುಖ, ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು ಯಾರಿಗಾದರೂ ಕಂಡು ಬಂದರೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ತಿಳಿಸಲು ಕೋರಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು