ಡಿಎಫ್ ಒ ಕಚೇರಿ ಎದುರು ರೈತರ ದಿಡೀರ್ ಪ್ರತಿಭಟನೆ-ವಿಷ ಕುಡಿಯಲು ಮುಂದಾದ ರೈತ



ಸುದ್ದಿಲೈವ್/ಶಿವಮೊಗ್ಗ

ಮಲೆನಾಡು ಶಿವಮೊಗ್ಗದಲ್ಲಿ ಹೆಚ್ಚಿದ ಕಾಡಾನೆ ದಾಳಿ ಹೆಚ್ಚಾದ ಬೆನ್ನಲ್ಲೇ ದಾಳಿಗೆ ಬೇಸತ್ತು ಡಿಎಫ್ ಓ ಕಚೇರಿ ಮುಂಭಾಗ ವಿಷಕುಡಿಯಲು ರೈತನೋರ್ವ ಮುಂದಾಗಿದ್ದಾನೆ. 

ಶಿವಮೊಗ್ಗ ನಗರದ ಆರ್ ಟಿ ಓ ರಸ್ತೆಯಲ್ಲಿ  ಉಪ ಅರಣ್ಯ ಅಧಿಕಾರಿ ಮುಭಾಗ ಶಿವಮೊಗ್ಗದ ಆಲದೇವರ ಹೊಸೂರು, ಬೇಳೂರು, ಪುರದಾಳು ಹಾಗೂ ಹಾಯ್ ಹೋಳೆ ಗ್ರಾಮದ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಿದ್ದಾರೆ. ಲಕ್ಷಾಂತರ ರೂಪಾಯಿಗಳ ನಷ್ಟಕ್ಕೆ ಬೇಸತ್ತ ರೈತರು. ಡಿ ಎಫ್ ಓ ಪ್ರಸನ್ನ ಪಟಗಾರ್ ಮುಂಭಾಗವೇ ವಿಷದ ಬಾಟಲಿ ಹಿಡಿದು ಕುಡಿಯಲು ಮುಂದಾಗಿದ್ದಾರೆ. 

ರೈತರನ್ನು ತಡೆದ ಅರಣ್ಯ ಇಲಾಖೆ ಸಿಬ್ಬಂದಿಗಳು ವಿಷದ ಬಾಟಲಿಯನ್ನ ಕಸಿದುಕೊಳ್ಳಲು ಯತ್ನಿಸಿದ್ದಾರೆ. ರೈತರನ್ನು ಮನವೊಲಿಸಲು  ಡಿ ಎಫ್ ಓ ಪಟಗಾರ ಹರಸಾಹಸ ಪಟ್ಟಿದ್ದಾರೆ. ಕಳೆದ ರಾತ್ರಿ, ದಾಳಿನಡೆಸಿದ ಕಾಡನೆಗಳು ಅಡಿಕೆ, ಬಾಳೆ, ಕಬ್ಬು ಜೋಳ ಹಾಗೂ  ಭತ್ತದ ಬೆಳೆ ನಾಶ ಪಡಿಸಿವೆ. ಕಳೆದೊಂದು ತಿಂಗಳಿಂದ ಈ ಭಾಗದಲ್ಲಿ ದಾಳಿ ನಡೆಸುತ್ತಿರುವ ಕಾಡಾನೆಗಳು ಹಾವಳಿ ಇಟ್ಟಿವೆ. ಕಾಡಾನೆಗಳನ್ನು ಕಾಡಿನತ್ತ ಓಡಿಸಲು  ಅರಣ್ಯ ಇಲಾಖೆ ಮುಂದಾಗಿದೆ.



ಕಾಡಿನತ್ತ‌ ಓಡಿಸಿದರೂ ಮತ್ತೆ ಮತ್ತೆ ಕಾಡಾನೆ ದಾಳಿ ನಡೆಸುತ್ತಿವೆ. ಕಾಡಾನೆ ದಾಳಿಗೆ ರೋಸಿ ಹೋದ ರೈತರು ಕೂಡಲೇ ಕಾಡಾನೆ ಸೆರೆ ಹಿಡಿದು ಬೇರೆಡೆ ಸ್ಥಳಾಂತರ ಮಾಡುವಂತೆ ಆಗ್ರಹಿಸಿದ್ದಾರೆ. ಅರಣ್ಯಾಧಿಕಾರಿಗಳ ವಿರುದ್ದ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close