ಕಟ್ಟಡ ಕಾರ್ಮಿಕರಿಗೆ ಖಾಲಿ ನಿವೇಶನ ನೀಡುವಂತೆ ಮನವಿ



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಾದ್ಯಂತ ಸ್ವಂತ ನಿವೇಶನ ಹೊಂದಿರದ ನೈಜ್ಯ ಕಟ್ಟಡ ಕಾರ್ಮಿಕರಿಗೆ ಖಾಲಿ ನಿವೇಶನ ಮಂಜೂರು ಮಾಡುವಂತೆ ಕೋರಿ, ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿ ಕಾರ್ಮಿಕರ ಸಂಘ ದೇವುಕುಮಾರ್ ನೇತೃತ್ವದಲ್ಲಿ ಸಂಸದರು, ಶಾಸಕರು ಮತ್ತು ಸೂಡಾ ಅಧ್ಯಕ್ಷರಿಗೆ ಮನವಿ ಸಲ್ಲಿಸಿದೆ. 

ಸೂರು ಹೊಂದಿರದ ಸುಮಾರು ನೈಜ್ಯ ಕಟ್ಟಡ ಕಾರ್ಮಿಕ ಕುಟುಂಬಗಳು ಜಿಲ್ಲೆಯಲ್ಲಿದ್ದು,  ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಗಳಲ್ಲಿ ವಾಸವಾಗಿರುತ್ತಾರೆ. ಈ ದುಬಾರಿ ಜಗತ್ತಿನಲ್ಲಿ ಜೀವನ ನಡೆಸುವುದೇ ತುಂಬಾ ಕಷ್ಟಕರವಾಗಿರುತ್ತದೆ. ದುಡಿದ ಹಣ ಜೀವನಕ್ಕೆ ಸಾಕಾಗುವುದಿಲ್ಲ. ದುಬಾರಿ ದುನಿಯಾದಲ್ಲಿ ಜೀವನ ಕಷ್ಟವಾಗಿರುವುದರಿಂದ ನಿವೇಶನದ ಅವಶ್ಯಕತೆ ಇದೆ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. 

ಕಟ್ಟಡ ಕಾರ್ಮಿಕರಾದ ನಾವುಗಳು ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಜೀವನ ನಡೆಸಲು ಆಗದೇ ಹಣಕಾಸಿನ ವ್ಯವಸ್ಥೆಗೆ ಸಂಘ- ಸಂಸ್ಥೆಗಳಲ್ಲಿ ಸಾಲ ಶೂಲ ಮಾಡಿ ಜೀವನ ಸಾಗಿಸುತ್ತಿದ್ದೇವೆ. ನಮ್ಮಗಳ ಇಡೀ ಜೀವನದಲ್ಲಿ ದುಡಿದ ಹಣಗಳು ಮಾಡಿದ ಸಾಲಗಳನ್ನ ತೀರಿಸುವುದೇ ನಮ್ಮಗಳ ಜೀವನವಾಗಿದೆ. 

ಆದ್ದರಿಂದ ತಾವುಗಳು ನಮಗೆ ಸರ್ಕಾರದಿಂದ ಸರ್ಕಾರದ ಜಮೀನಿನ ಪ್ರದೇಶದಲ್ಲಿ ನಿವೇಶನಗಳನ್ನು ಮಾಡಿ ನಮ್ಮ ನೈಜ ಕಟ್ಟಡ ಕಾರ್ಮಿಕರಾದ ನಮ್ಮಗಳಿಗೆ ನಿವೇಶನ ಮಂಜೂರು ಮಾಡಿಕೊಟ್ಟರೆ. ತುಂಬಾ ಅನುಕೂಲ ವಾಗುತ್ತದೆ. ಆದ್ದರಿಂದ ತಾವುಗಳು  ನಮ್ಮಗಳ ಮೇಲೆ ಕರುಣೆ ತೋರಿಸಿ ಸರ್ಕಾರದಿಂದ ಸರ್ಕಾರದ ಜಮೀನಿನ ಪ್ರದೇಶದಲ್ಲಿ ನಿವೇಶನಗಳನ್ನು ಮಾಡಿ ನಮ್ಮ ನೈಜ ಕಟ್ಟಡ ಕಾರ್ಮಿಕರಾದ ನಮ್ಮಗಳಿಗೆ ಒಂದು ಸೂರು ಕಟ್ಟಿಕೊಂಡು ಜೀವನ ನಡೆಸಲು ನಿವೇಶನಗಳನ್ನು ಮಂಜೂರು ಮಾಡಿಕೊಡಬೇಕೆಂದು ಸಂಘಟನೆ ಸಂಸದ ರಾಘವೇಂದ್ರ, ಶಾಸಕ ಚೆನ್ನಬಸಪ್ಪ ಮತ್ತು ಸೂಡಾ ಅಧ್ಯಕ್ಷರಿಗೆ ಮನವಿ ಸಲ್ಲಿಸಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close